ಕನ್ಹೇರಿ ಸ್ವಾಮಿಗೆ ರಾಜ್ಯ ಪ್ರವೇಶ ನಿರ್ಬಂಧಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Oct 29, 2025, 01:45 AM IST
ಫೋಟೊ ಶೀರ್ಷಿಕೆ: 28ಆರ್‌ಎನ್‌ಆರ್3ರಾಣಿಬೆನ್ನೂರು ನಗರದಲ್ಲಿ ಸ್ಥಳೀಯ ವಿಶ್ವ ಗುರು ಬಸವ ಬಳಗ ಹಾಗೂ ಬಸವ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಕೊಲ್ಲಾಪುರದ ಕನ್ನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ರಾಜ್ಯ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.  | Kannada Prabha

ಸಾರಾಂಶ

ಕೊಲ್ಲಾಪುರದ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ರಾಜ್ಯ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ವಿಶ್ವ ಗುರು ಬಸವ ಬಳಗ ಹಾಗೂ ಬಸವ ಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ರಾಣಿಬೆನ್ನೂರು: ಕೊಲ್ಲಾಪುರದ ಕನ್ಹೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯನ್ನು ರಾಜ್ಯ ಪ್ರವೇಶಿಸದಂತೆ ನಿರ್ಬಂಧಿಸಬೇಕು ಎಂದು ಒತ್ತಾಯಿಸಿ ಸ್ಥಳೀಯ ವಿಶ್ವ ಗುರು ಬಸವ ಬಳಗ ಹಾಗೂ ಬಸವ ಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಈ ಹಿಂದೆ ಸೆ.1ರಿಂದ ಅ.5ರ ವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ ಜಾತ್ಯಾತೀತವಾಗಿ ರಾಜ್ಯ ಲಿಂಗಾಯತ ಸ್ವಾಮೀಜಿಗಳ ಒಕ್ಕೂಟವು ರಾಜ್ಯಾದ್ಯಾಂತ ಸಂಚರಿಸಿ ಯಶಸ್ವಿಯಾಗಿ ಬಸವ ಸಂಸ್ಕೃತಿ ಅಭಿಯಾನವನ್ನು ಬಸವಾಭಿಮಾನಿಗಳು ಹಾಗೂ ಲಿಂಗಾಯತ ಧರ್ಮ ಜಾಗೃತಿ ಕೈಗೊಂಡಿರುವುದು ಗೊತ್ತಿರುವ ವಿಷಯವಾಗಿದೆ. ಈ ವಿಷಯದ ಕುರಿತು ಕೊಲ್ಲಾಪುರದ ಕಾಡಶಿದ್ದೇಶ್ವರ ಸ್ವಾಮೀಜಿ ಲಿಂಗಾಯತ ವಿರೋಧಿ ಹೇಳಿಕೆ ನೀಡಿದ್ದಲ್ಲದೆ. ಈಗ ಸ್ವಾಮೀಜಿಗಳ ಒಕ್ಕೂಟಕ್ಕೆ ಮತ್ತು ಲಿಂಗಾಯತರಿಗೆ ಮತ್ತು ಸರ್ಕಾರಕ್ಕೆ ಅಸಂವಿಧಾನಿಕ ಪದ ಉಪಯೋಗಿಸಿ ಅತಿ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. 12ನೇ ಶತಮಾನದ ಸಂವಿಧಾನ ಶಿಲ್ಪಿ, ಮಹಿಳೆ ಮತ್ತು ಸಮಾನತೆಗಾಗಿ ಹೋರಾಡಿದ ಬಸವಣ್ಣನನ್ನು ಹಾಗೂ ಸಂವಿಧಾನ ನಿರ್ಮಿತ ಡಾ. ಅಂಬೇಡ್ಕರರನ್ನು ನಿಂದಿಸಿದ್ದಲ್ಲದೆ ಪದೇ, ಪದೇ ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ಅವರ ಮೇಲೆ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಂಡು ಬಂಧಿಸಬೇಕು ಜೊತೆಗೆ ಶಾಶ್ವತವಾಗಿ ರಾಜ್ಯ ಪ್ರವೇಶಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರಿಗೆ ಮನವಿ ಸಲ್ಲಿಸಲಾಯಿತು.ಹನುಮಂತಪ್ಪ ಕಬ್ಬಾರ, ಯು.ಎಂ.ಗುರುಲಿಂಗಪ್ಪಗೌಡ್ರ, ಗಂಗಾಧರ ಬಣಕಾರ, ಕರಬಸಪ್ಪ ಮಾಕನೂರ, ಮಲ್ಲೇಶಪ್ಪ ಹಲಗೇರಿ, ರಾಜೇಶ ಅಂಗಡಿ, ಮಂಜುನಾಥ ಸಂಭೋಜಿ, ಬಸವರಾಜ ಮೇಗಳಗೇರಿ ಪ್ರತಿಭಟನೆಯಲ್ಲಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ಕೌಶಲ್ಯಗಳ ಜ್ಞಾನ ಮುಖ್ಯ: ಡಾ.ಶೋಭಾ
ಹರನ ಜಾತ್ರೆಗೆ ಎಲ್ಲರೂ ಬನ್ನಿ: ವಚನಾನಂದ ಶ್ರೀ