ಕನ್ನಡಪ್ರಭ ವಾರ್ತೆ ಶಹಾಪುರ
ಈ ವೇಳೆ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗುಂಡಪ್ಪ ತುಂಬಿಗಿ, ಚಾಲಕ ವಿರೋಧಿ ಕಾಯ್ದೆಯನ್ನು ತಕ್ಷಣ ಸರ್ಕಾರ ಹಿಂಪಡೆಯಬೇಕು. ಇಲ್ಲದಿದ್ದರೆ ಅನಿರ್ದಿಷ್ಟ ಮುಷ್ಕರ ಮುಂದುವರಿಯುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಟಿಪ್ಪರ್ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ರೆಡ್ಡಿ ದೋರನಹಳ್ಳಿ ಮಾತನಾಡಿ, ಸರ್ಕಾರವು ಈ ನಿಯಮಗಳನ್ನು ತಿದ್ದುಪಡಿ ಮಾಡಿ ಭಾರತದ ಎಲ್ಲಾ ಚಾಲಕರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.ತಾಲೂಕು ಕಾರ್ಯದರ್ಶಿ ಶಿವರಾಜ ಜಯಶೆಟ್ಟಿ, ಜಿಲ್ಲಾ ಗೌರವಾಧ್ಯಕ್ಷ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಹೊಸಕೇರಾ, ಇಬ್ರಾಹಿಂ ಹೋತಪೇಟ್, ಮೊಹ್ಮದ್ ಜಾಹಿರ್ ಪಾಶಾ, ಹಣಮಂತ ಹತ್ತಿಗೂಡೂರು, ಸುಖಪ್ಪ ಬೇವಿನಹಳ್ಳಿ, ಮಹ್ಮದ್ ಖಲೀಲ್, ಮೊಹ್ಮದ್ ಹಮಿಮುದ್ದೀನ್, ಶರಣಪ್ಪ ಪೂಜಾರಿ, ರಾಜು ಅಬ್ದುಲ್ ಅಜೀಮ್, ಭೀಮಣ್ಣ ವಿಭೂತಿಹಳ್ಳಿ, ಯಲ್ಲಪ್ಪ, ರವಿ ಸಿಂಗನಹಳ್ಳಿ, ಚಂದಪ್ಪ ಗೋಗಿ, ಭೀಮರಾಯ ಇತರರಿದ್ದರು.