ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Mar 05, 2026, 01:30 AM IST
4ಕೆಎಲ್‌ಆರ್‌.4.ಕೋಲಾರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪರವಾನಿಗೆ ಭೂಮಾಪಕರು ಪ್ರತಿಭಟಿಸಿ ಭು ದಾಖಲೆಗಳ ಉಪ ನಿರ್ದೇಶಕರಿಗೆ ಮನವಿ ಪತ್ರ ನೀಡಿದರು. | Kannada Prabha

ಸಾರಾಂಶ

ಜಿಲ್ಲೆಯ ಭೂದಾಖಲೆಗಳ ಉಪ ನಿರ್ದೇಶಕ ಬಿ.ಕೆ.ಸಂಜಯ್ ಮನವಿ ಸ್ವೀಕರಿಸಿ ಮಾತನಾಡಿ, ಮನವಿ ಭೂಮಾಪನ ಆಯುಕ್ತರಿಗೆ ಹಾಗೂ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಕೆಲಸ ಸ್ಥಗಿತಗೊಳಿಸಿದ ಸರ್ಕಾರಿ ಪರವಾನಿಗೆ ಭೂಮಾಪಕರು । ಭೂದಾಖಲೆಗಳ ಉಪ ನಿರ್ದೇಶಕರಿಗೆ ಮನವಿ

ಕನ್ನಡಪ್ರಭ ವಾರ್ತೆ ಕೋಲಾರಸಮಾನ ಕೆಲಸಕ್ಕೆ ಸಮಾನ ವೇತನ ಹಾಗೂ ಒಂದು ಬಾರಿ ವಿಶೇಷ ನೇಮಕಾತಿಗೆ ಆಗ್ರಹಿಸಿ ಜಿಲ್ಲೆಯ ಎಲ್ಲಾ ಸರ್ಕಾರಿ ಪರವಾನಿಗೆ ಭೂಮಾಪಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಭೂದಾಖಲೆಗಳ ಉಪ ನಿರ್ದೇಶಕ ಬಿ.ಕೆ.ಸಂಜಯ್‌ರಿಗೆ ಮನವಿ ಸಲ್ಲಿಸಿದರು.ಅಖಿಲ ಕರ್ನಾಟಕ ಸರ್ಕಾರಿ ಪರವಾನಿಗೆ ಭೂಮಾಪಕ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ.ಕೆ ಮಾತನಾಡಿ, ಸರ್ಕಾರಿ ಭೂಮಾಪಕರು ಮಾಡುವ ಕೆಲಸ ಸಮಾನವಾಗಿ ನಾವುಗಳು ಸಹ ಅದೇ ರೀತಿ ಕೆಲಸಗಳನ್ನು ಅಂದರೆ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ದರಖಾಸ್ತು ಪೊಡಿ, ಕೆರೆ ಅಳತೆ, ನಕ್ಷಾ ಯೋಜನೆ, ಆಕಾರಬಂದ್ ಡಿಜಿಟಲ್, ಸ್ವಾಮಿತ್ವ, ಪೊಡಿ ಅಭಿಯಾನ ಹಾಗೂ ಎಲ್ಲಾ ರೀತಿಯ ಇಲಾಖೆಯ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದೇವೆ.23 ವರ್ಷದಿಂದ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲ ಹಾಗೂ ವೇತನದಲ್ಲಿ ತಾರತಮ್ಯವಿದ್ದು, ಸರ್ಕಾರಿ ಪರವಾನಿಗೆ ಭೂಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ ಹಾಗೂ ಒಂದು ಬಾರಿ ವಿಶೇಷ ನೇಮಕಾತಿ ಈ ಕೂಡಲೇ ಸರ್ಕಾರವು ಈಡೇರಿಸಬೇಕು. ಅಲ್ಲಿಯವರೆಗೂ ನಾವು ಯಾವುದೇ ಕೆಲಸ ನಿರ್ವಹಿಸುವುದಿಲ್ಲ ಎಂದು ಎಚ್ಚರಿಸಿದರು.ಜಿಲ್ಲೆಯ ಭೂದಾಖಲೆಗಳ ಉಪ ನಿರ್ದೇಶಕ ಬಿ.ಕೆ.ಸಂಜಯ್ ಮನವಿ ಸ್ವೀಕರಿಸಿ ಮಾತನಾಡಿ, ಮನವಿ ಭೂಮಾಪನ ಆಯುಕ್ತರಿಗೆ ಹಾಗೂ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕ ಸಂಘದ ರಾಜ್ಯ ಗೌರವಾಧ್ಯಕ್ಷ ಕೆ.ಪಿ.ಭಾರ್ಗವಲು, ಜಿಲ್ಲಾ ಉಪಾಧ್ಯಕ್ಷ ಎಸ್.ಎನ್.ನರಸಿಂಹಮೂರ್ತಿ, ಮುಖಂಡರಾದ ವಸಂತ್.ವಿ.ಎ, ಪಾಂಡುರಂಗಯ್ಯ, ಚಲುವಯ್ಯ, ವೇಣು, ಸೋಮು, ನಿತೀನ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಸತಿ ಶಾಲೆಗಳ ಸ್ಥಾಪನೆ ಮೂಲಕ ಶಿಕ್ಷಣಕ್ಕೆ ಒತ್ತು: ಕೆ.ಎಸ್.ಆನಂದ್
ರೈತರ ಮೇಲಿನ ಶೋಷಣೆ ಖಂಡಿಸಿ ೯ರಂದು ಧರಣಿ ಸತ್ಯಾಗ್ರಹ