ಕನ್ನಡಪ್ರಭ ವಾರ್ತೆ ಹನೂರು
ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಿ:
ಅರಣ್ಯದಂಚಿನ ಭಾಗದಲ್ಲಿ ರೈತರು ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಕಾಡುಪ್ರಾಣಿಗಳು ನಾಶಗೊಳಿಸುತ್ತಿದೆ. ಇತ್ತೀಚೆಗೆ ಮಳೆ ಇಲ್ಲದೆ ನಮ್ಮ ಭಾಗದಲ್ಲಿ ಅರಣ್ಯದಿಂದ ಕಾಡುಪ್ರಾಣಿಗಳು ನಾಡಿಗೆ ಬಂದು ಜನಜಾನುವಾರುಗಳಿಗೆ ತೊಂದರೆ ಉಂಟು ಮಾಡುತ್ತಿದೆ. ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡು ಕೂಡಲೇ ಇಲಾಖೆ ಅಧಿಕಾರಿಗಳು ಅರಣ್ಯದಂಚಿನಲ್ಲಿ ರೈಲ್ವೆ ಬ್ಯಾರಿಕೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಕೂಡ್ಲೂರು ಹಾಗೂ ಸುಲ್ವಾಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ವೇಳೆ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಇರುವುದಿಲ್ಲ. ಅರಣ್ಯದಂಚಿನ ಗ್ರಾಮಗಳ ನಿವಾಸಿಗಳು ಚಿಕಿತ್ಸೆಗಾಗಿ ತುರ್ತು ಸಂದರ್ಭದಲ್ಲಿ ಹನೂರು ಹಾಗೂ ಕೊಳ್ಳೇಗಾಲಕ್ಕೆ ಹೋಗಬೇಕಾಗಿದೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ನಾಲಾರೋಡ್ ಗ್ರಾಮದಿಂದ ಜೆಲ್ಲಿ ಪಾಳ್ಯ ಗ್ರಾಮದವರೆಗೆ ನಿರಂತರ ವಿದ್ಯುತ್ ಜ್ಯೋತಿ ಕಾಮಗಾರಿ ಕಳಪೆಯಾಗಿದ್ದು, ಪರಿಕರಗಳು ಹಾಳಾಗಿ ಗುಣಮಟ್ಟ ವಿದ್ಯುತ್ ನೀಡುತ್ತಿಲ್ಲ. ಅರಣ್ಯದಂಚಿನ ಗ್ರಾಮಗಳಲ್ಲಿ ವಿದ್ಯುತ್ ದೀಪಗಳಿಲ್ಲದೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಓದಲು ಬರೆಯಲು ಹಣತೆ ಬೆಳಕಿನಲ್ಲಿ ವಿದ್ಯಾಭ್ಯಾಸ ಮಾಡುವಂತಾಗಿದೆ. ಸರ್ಕಾರಿ ಕಚೇರಿಗಳಲ್ಲಿ ನಾಗರೀಕರಿಗೆ ಸಿಗುವ ಸೌಲಭ್ಯ ಮತ್ತು ಸವಲತ್ತುಗಳಿಗೆ ದಿನನಿತ್ಯ ಅಲೆಯುವಂತಾಗಿದೆ ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಡಿವೈಎಸ್ಪಿ ಸಂಧಾನ ವಿಫಲ: ಪ್ರತಿಭಟನಾ ಸ್ಥಳಕ್ಕೆ ಕೊಳ್ಳೇಗಾಲ ಡಿವೈಎಸ್ಪಿ ಸೋಮೇಗೌಡ ಭೇಟಿ ಮಾಡಿ ಪ್ರತಿಭಟನಾಕಾರದ ಜೊತೆ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವದಾಗಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು. ಆದರೆ ಸಂಬಂಧ ಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿ ಭರವಸೆ ನೀಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ರಸ್ತೆ ಮಧ್ಯದಲ್ಲಿಯೇ ರೈತರು ಊಟ ಮಾಡುವ ಮೂಲಕ ಪ್ರತಿಭಟಿಸಿದರು.ಕೊಳ್ಳೇಗಾಲ ಎಸಿ ಮಹೇಶ್ ಭೇಟಿ ಭರವಸೆ : ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ನಿಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಕೊಳ್ಳೇಗಾಲ ಎಸಿ ಮಹೇಶ್ ಭೇಟಿ ನೀಡಿ ಭರವಸೆ ನೀಡಿದರು ನಂತರ ಪ್ರತಿಭಟನೆ ಕೈಬಿಟ್ಟರು.ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ರವಿ ನಾಯ್ಡು, ಬಸವರಾಜು, ಶಿವಲಿಂಗಪ್ಪ, ಚಂದ್ರು, ಕಣ್ಣಸ್ವಾಮಿ, ಕನಕ, ಮನೋಜಮ್ಮ, ರಾಜಮಣಿ, ಹುಚ್ಚಯ್ಯ, ವೀರಯ್ಯ, ಅರ್ಪಿತರಾಜ್, ಅಂತೋಣಿ, ಸ್ವಾಮಿ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.