ಹೊಸಪೇಟೆ: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹ್ಯಾರಡ ಗ್ರಾಮದಲ್ಲಿರುವ ಪುರಾತನ ಕಾಲದ ಕೆರೆಗಳ ಪೈಕಿ ಹಿರೇ ಮಲಿಯಮ್ಮನಕೆರೆ, ಸಂಗಪ್ಪನಕೆರೆ, ಕಲ್ಲಪ್ಪನಕೆರೆ ಜಾಗವನ್ನು ಪಹಣಿಯಲ್ಲಿ ಸೇರ್ಪಡೆ ಮಾಡಬೇಕು. ಹರಪನಹಳ್ಳಿ ತಾಲೂಕಿನ ಹಲವು ಹಗರಣಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಿಪಿಐ(ಎಂ.ಎಲ್) ಲಿಬರೇಷನ್ ಪಕ್ಷ ಹಾಗೂ ಅಖಿಲ ಭಾರತ ಕೃಷಿ ಮತ್ತುಗ್ರಾಮೀಣ ಕಾರ್ಮಿಕರ ಸಂಘ ಗುರುವಾರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಿತು.
ಸಿಪಿಐ(ಎಂ.ಎಲ್) ಲಿಬರೇಷನ್ ಪಕ್ಷ ಹಾಗೂ ಅಖಿಲ ಭಾರತ ಕೃಷಿ ಮತ್ತುಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್. ಪರಶುರಾಮ ಮಾತನಾಡಿ, ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹಾರಡಗ್ರಾಮದ ಕೆರೆಗಳಾದ ಮಲಯಮ್ಮನಕೆರೆ ಸಂಗಪ್ಪನಕೆರೆ ಕಲ್ಲಪ್ಪನ ಕುಂಟೆಕೆರೆ ಜಾಗವನ್ನು ಪಹಣಿಯಲ್ಲಿ ಕಾನೂನು ಪ್ರಕಾರ, ವಿಸ್ತೀರ್ಣದಂತೆ ಹೆಸರು ನಮೂದಿಸಬೇಕು. ಹಡಗಲಿ ತಾಲೂಕಿನ ಸರ್ವೆಯರ್‌ಎಡಿಎಲ್‌ಆರ್ ಹಾಗೂ ಡಿಡಿಎಲ್‌ಆರ್ ಅಧಿಕಾರಿಗಳು ಕೆರೆಗಳ ನಕಾಶೆಯನ್ನು ವಿಸ್ತೀರ್ಣದಂತೆ ತಯಾರಿಸದೆ ತಪ್ಪಾಗಿ ಒತ್ತುವರಿಯನ್ನು ಕಡಿತಗೊಳಿಸಿ ನಕಾಶೆ ತಯಾರಿಸಿರುವುದು ಸಹ ಕಾನೂನು ರೀತಿ ಅಕ್ಷಮ್ಯ ಅಪರಾಧವಾಗಿದ್ದು.ಈ ಕುರಿತು ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ದಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಸಂಘದ ಹರಪನಹಳ್ಳಿ ಘಟಕದ ಕಾರ್ಯದರ್ಶಿ ಸಂತೋಷ್ ಗುಳೇದಹಟ್ಟಿ ಮಾತನಾಡಿ, ಮಲಿಯಮ್ಮನಕೆರೆ, ಸಂಗಪ್ಪನಕೆರೆ, ಕಲ್ಲಪ್ಪನಕೆರೆ ಇವುಗಳನ್ನು ಕಾನೂನು ರೀತಿ ದಾಖಲೆಯಂತೆ ಪಹಣಿಯಲ್ಲಿತಿದ್ದುಪಡಿ ಮಾಡಿ ಹೆಸರು ನಮೂದಿಸಿ ಕೊಡಬೇಕು. ಹೂವಿನಹಡಗಲಿ ಹರಪನಹಳ್ಳಿ ತಾಲೂಕಿನಾದ್ಯಂತ ರೈತರಿಗೆ ಪಹಣಿಯಲ್ಲಿ ಫ್ಲಾಗ್ ಮಾಡಿರುವುದನ್ನುಕೂಡಲೇ ತೆರವುಗೊಳಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ತನಿಖೆ ನಡೆಸಬೇಕು.ಕೆರೆ ಹಗರಣ ಮತ್ತು ಹರಪನಹಳ್ಳಿಯ ಎನ್.ಆರ್.ಎಲ್.ಎಂ ಹಗರಣದಲ್ಲಿಸಿಬ್ಬಂದಿಗಳಾದ ಸಿ.ಎಸ್. ಮಂಜುನಾಥ್ ಮತ್ತು ಟರ್ಮಿನೇಷನ್ ಆದ ಪರಮೇಶ್ವರಪ್ಪ, ಟಿ. ಪವಿತ್ರ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಹರಪನಹಳ್ಳಿ ತಾಲೂಕಿನ ಬಾಗಳಿ ಗ್ರಾಮ ಪಂಚಾಯ್ತಿಯ ಎನ್.ಆರ್.ಎಲ್.ಎಂ. ಯೋಜನೆಯಎಸ್.ಎಲ್.ಡಬ್ಲ್ಯೂ.ಎಂ.ನ ವಾಹನ ಚಾಲಕರ ಮತ್ತು ಕಸ ವಿಂಗಡಕರಿಗೆ ಕಾರ್ಮಿಕರ ಕಾಯ್ದೆಯಂತೆ ವೇತನ ಪಾವತಿ ಮಾಡಬೇಕು. ಹ್ಯಾರಡ ಗ್ರಾಮದ ಕೆರೆಗಳ ಹೆಸರನ್ನು ಆರ್.ಟಿ.ಸಿ ಪಹಣಿಯಲ್ಲಿ ನಮೂದಿಸಬೇಕು. ಹೂವಿನಹಡಗಲಿ-ಹರಪನಹಳ್ಳಿ-ಕೊಟ್ಟೂರು ತಾಲೂಕಿನ ಮಧ್ಯ ಭಾಗವಾದ ಹರಪನಹಳ್ಳಿಯಲ್ಲಿ ಕಾರ್ಮಿಕರಿಗಾಗಿ ಇ.ಎಸ್.ಐ. ಆಸ್ಪತ್ರೆ ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಸರ್ಕಾರಿ ಬ್ಯಾಂಕ್, ಸೊಸೈಟಿ ಹಾಗೂ ಫೈನಾನ್ಸ್ ಗಳಲ್ಲಿ ಮತ್ತು ಧರ್ಮಸ್ಥಳ ಸಂಘಗಳಲ್ಲಿ ಕೊಟ್ಟಿರುವ ಸಾಲಗಳನ್ನು ಮನ್ನಾ ಮಾಡಬೇಕು ಮತ್ತು ವಸೂಲಾತಿ ಕಿರುಕುಳ ನೀಡುತ್ತಿರುವ ಮ್ಯಾನೇಜರ್‌ಗಳ ವಿರುದ್ಧಕ್ರಮಜರುಗಿಸಬೇಕು. ಹರಪನಹಳ್ಳಿ-ಹೂವಿನಹಡಗಲಿ-ಕೊಟ್ಟೂರು ತಾಲೂಕಿನಲ್ಲಿ ಕಾರ್ಮಿಕರಿಗಾಗಿ ನಿವೇಶನಕ್ಕಾಗಿ ಸರ್ಕಾರ ಮೂರು ತಾಲೂಕಿನಲ್ಲಿ ಜಾಗ ಮಂಜೂರು ಮಾಡಿ ನಕಾಶೆ ತಯಾರಿಸಬೇಕು. ಹರಪನಹಳ್ಳಿ ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಸರ್ಕಾರಿ ಬಸ್ ನಿಲ್ದಾಣದಲ್ಲಿಅಕ್ರಮವಾಗಿ ಪೋಸ್ಟ್ಆಫೀಸ್ ಕಟ್ಟಡ ನಿರ್ಮಿಸಿದ್ದು, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕ್ರಮ ಜರುಗಿಸಿ ಮೂಕದ್ದಮೆದಾಖಲಿಸಬೇಕು. ಹಾಗೂ ನಾರಾಯಣಪುರಗ್ರಾಮದ ಸಾರ್ವಜನಿಕ ಬಸ್‌ನಿಲ್ದಾಣದಒತ್ತುವರಿ ತೆರವುಗೊಳಿಸಬೇಕು ಎಂದರು.ಹರಪನಹಳ್ಳಿ ತಾಲೂಕಿನಲ್ಲಿಕಾರ್ಮಿಕರಇಲಾಖೆಯಿಂದಕೊಟ್ಟಿರುವಕಿಟ್-ಹಗರಣದ ಬಗ್ಗೆ ಲೋಕಾಯುಕ್ತತನಿಖೆ ನಡೆಸಬೇಕು. ಹರಪನಹಳ್ಳಿ-ಕೊಟ್ಟೂರು-ಹೂವಿನಹಡಗಲಿ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಕಲ್ಪಿಸಬೇಕು. ಆಯಾ ಬಸ್ ಡಿಪೋ ಮ್ಯಾನೇಜರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕುಎಂದು ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸಂಘದ ಮುಖಂಡರಾದ ಹುಲಿಕಟ್ಟಿ ಮೈಲಪ್ಪ, ರಾಘು, ಬಿ.ಎಸ್. ಪ್ರಕಾಶ, ರೇಣುಕಮ್ಮ,ಕುರುವತ್ತಿ ಗಂಗಾ ನಾಯ್ಕ, ಗೌರಮ್ಮ, ನಿಂಗಪ್ಪಗೌಡ್ರು, ಅಂಜಿನಪ್ಪ, ನಾಗರಾಜ, ಫಕೀರಪ್ಪ, ಗೋವಿಂದಪ್ಪ, ರಾಮಪ್ಪ, ಲಕ್ಷ್ಮಣ ಮತ್ತಿತರರಿದ್ದರು.