ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Dec 20, 2025, 02:00 AM IST
ಸೋಮವಾರಪೇಟೆ ಹಾದುಹೋಗುವ ರಸ್ತೆಗೆ ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ | Kannada Prabha

ಸಾರಾಂಶ

ಗುರುವಾರ ರಾತ್ರಿ ಬೀದಿ ದೀಪವಿಲ್ಲದೆ ಕತ್ತಲಿನಲ್ಲಿ ನಡೆದುಹೋಗುತ್ತಿರುವ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಪಟ್ಟಣದ ಸೋಮವಾರಪೇಟೆಗೆ ಹಾದುಹೋಗಿರುವ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದೆ ಅಪಘಾತಗಳು ಸಂಭವಿಸುತ್ತಿದ್ದು, ಸಾವು ನೋವು ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಸೋಮವಾರಪೇಟೆ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಧರಣಿಯಲ್ಲಿ ನಗರಸಭಾ ಮಾಜಿ ಸದಸ್ಯ ಮಹದೇವು ಅವರು ಮಾತನಾಡಿ, ಗುರುವಾರ ರಾತ್ರಿ ಬೀದಿ ದೀಪವಿಲ್ಲದೆ ಕತ್ತಲಿನಲ್ಲಿ ನಡೆದುಹೋಗುತ್ತಿರುವ ವ್ಯಕ್ತಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೇ ರೀತಿ ಈ ಹಿಂದೆಯೂ ಕೂಡ ಹಲವಾರು ಅಪಘಾತಗಳು ಸಂಭವಿಸಿದ್ದು, ಈ ರಸ್ತೆಯ ಮಧ್ಯ ಭಾಗ ಬೀದಿ ದೀಪ ಅಳವಡಿಸುವಂತೆ ನಗರಸಭಾ ಅಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ, ಅಲ್ಲದೆ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಶಾಸಕರ ಗಮನಕ್ಕೂ ತಂದರೂ ಕೂಡ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಚಾಮರಾಜನಗರ ಸತ್ತಿ-ಮಂಗಲ ರಸ್ತೆಯಲ್ಲಿ ದಿನನಿತ್ಯ ಹಗಲು ರಾತ್ರಿ ಬಾರಿ ವಾಹನಗಳು ಸಂಚರಿಸುತ್ತಿವೆ, ಆದರೆ ಈ ರಸ್ತೆ ಹಾದು ಹೋಗಿರುವ ಸೋಮವಾರಪೇಟೆ ರಸ್ತೆಯಲ್ಲಿ ಸಿಗ್ನಲ್ ಲೈಟ್ ಆಗಲೀ, ಹಂಸವಾಗಲೀ ಅಥವಾ ಬೀದಿ ದೀಪ ಅಳವಡಿಸಿಲ್ಲದೆ ಇರುವುದರಿಂದ ಅಪಘಾತಗಳು ಸಂಭವಿಸುತ್ತಲೇ ಇದೆ. ಆದ್ದರಿಂದ ಈ ಕೂಡಲೇ ನಗರಸಭಾ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಎಚ್ಚೆತ್ತು ಸೂಕ್ತ ಕ್ರಮ ಕೈಗೊಂಡು ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಇಲ್ಲವಾದಲ್ಲಿ ಮುಂದೆ ನಡೆಯಬಹುದಾದ ಅಪಘಾತಗಳಿಗೆ ನೇರ ಹೊಣೆ ಹೊರಬೇಕಾಗುತದೆ ಎಂದು ಎಚ್ಚರಿಸಿದ ಅವರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸಿದ್ದಪ್ಪ, ಗುಂಡಪ್ಪ, ನಂಜುಂಡಯ್ಯ, ಚಿಕ್ಕಬಸವಯ್ಯ, ರುದ್ರಸ್ವಾಮಿ, ಜಗದೀಶ್, ರಾಜು, ಮಹದೇವು, ಶಿವಪ್ಪ, ಮುತ್ತುರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.

--------------

19ಸಿಎಚ್ಎನ್18

ಸೋಮವಾರಪೇಟೆ ಹಾದುಹೋಗುವ ರಸ್ತೆಗೆ ಬೀದಿ ದೀಪ ಅಳವಡಿಸಲು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಮಟ್ಟದ ಸ್ಕ್ವಾಶ್ ಚಾಂಪಿಯನ್‌ಶಿಪ್: ಹರಿಹರ ತಂಡಕ್ಕೆ ರನ್ನರ್ ಅಪ್ ಟ್ರೋಫಿ
ಸಾಲ ಪಡೆದು, ಸಕಾಲದಲ್ಲಿ ಮರು ಪಾವತಿಸಿ