ಭೂ-ವಸತಿ ಮಂಜೂರಿಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Jul 13, 2024 1:38 AM

ಸಾರಾಂಶ

ರಾಯಚೂರು ನಗರದ ಡಿಸಿ ಕಚೇರಿ ಮುಂದೆ ಕೆಆರೆಸ್-ಎಐಕೆಕೆಎಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಮುಖ್ಯಮಂತ್ರಿಗೆ ಮನವಿ

ಕನ್ನಡಪ್ರಭ ವಾರ್ತೆ ರಾಯಚೂರುಸರ್ಕಾರಿ ಹೆಚ್ಚುವರಿ ಖಾರೀಜ ಖಾತೆ ಪರಂಪೋಕ್ ಭೂಮಿಯನ್ನು ಮೂರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರು ಮಾಡಬೇಕು ಹಾಗೂ ಸರ್ಕಾರಿ ಜಾಗದಲ್ಲಿ ವಾಸಿಸುವ ನಿವಾಸಿಗಳಿಗೆ ವಸತಿ ನಿವೇಶನ ಹಕ್ಕು ಪತ್ರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ (ಕೆಆರೆಸ್-ಎಐಕೆಕೆಎಸ್) ಜಿಲ್ಲಾ ಸಮಿತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೇರಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ಮುಖಂಡರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

2018 ಅವಧಿಯಲ್ಲಿ ಫಾರಂ-57ಅಡಿಯಲ್ಲಿ ಅರ್ಜಿ ಸಲ್ಲಿಸಿದ ಲಕ್ಷಾಂತರ ಬಡ ರೈತರಿಗೆ ಭೂ ಮಂಜೂರಾತಿ ದೊರಕಿಲ್ಲ. ಜಿಲ್ಲೆಯ ಸರ್ಕಾರಿ ಜಾಗದಲ್ಲಿ ವಾಸಿಸುವ ಮತ್ತು 94ಸಿ 94ಸಿಸಿ ಅಡಿ ಅರ್ಜಿ ಸಲ್ಲಿಸಿದ ಜನರಿಗೆ ನಿವೇಶ ಹಕ್ಕು ನೀಡಬೇಕು, ಸಿಂಧನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕು. ಸಿರವಾರ ತಾಲೂಕಿನ ಹಳ್ಳಿ ಸೀಮಾ ಸರ್ವೆ.ನಂ12ರ 920 ಎಕರೆ 10ಗುಂಟೆ ಸರ್ಕಾರಿ ಹೆಚ್ಚುವರಿ ಭೂಮಿಯನ್ನು ಸಾಗುವಳಿ ರೈತರನ್ನು ಈಗಾಗಲೇ ಟ್ರಿಮಿನ್ ಕಾಯ್ದೆ ಪ್ರಕಾರ ಜಮೀನಿನ ಸ್ಥಳ ಜಿಪಿಎಸ್ ಪಂಚನಾಮೆ ಮಾಡಿದ್ದ ಕಡತವನ್ನು ಸಹಾಯಕ ಆಯುಕ್ತ ಕರ್ಯಾಲಯಕ್ಕೆ ವರ್ಗಾವಣೆ ಮಾಡಿಸಬೇಕು, ಸಿರವಾರ ಹಾಗೂ ಮಾನ್ವಿ ತಾಲೂಕಿನ ಭೂ ನ್ಯಾಯಮಂಡಳಿ ಸಮಿತಿ ರಚನೆ ಮಾಡುವ ಕುರಿತು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.ಈ ವೇಳೆ ಸಿಪಿಐಎಂಎಲ್‌ನ ರಾಜ್ಯ ಕರ್ಯಕರ್ಶಿ ಡಿ.ಎಚ್ ಪೂಜಾರ್, ಜಿಲ್ಲಾಧ್ಯಕ್ಷ ಅಶೋಕ ನಿಲೋಗಲ್, ಮುಖಂಡರಾದ ಚಿಟ್ಟಿಬಾಬು, ರಮೇಶ ಪಾಟೀಲ್ ಬರ್ಗಿಡ, ಶಿವರಾಜ, ಶೇಖರಯ್ಯ, ನಾಗರಾಜ, ಹನುಮಂತ, ಹುಲಿಗೆಪ್ಪ, ವೀರೇಶ ನಾಯಕ, ಗೌಸಖಾನ್, ರೇಣುಕಮ್ಮ, ಯಮನೂರಪ್ಪ, ಬಸನಗೌಡ ಸೇರಿ ಅನೇಕರಿದ್ದರು.

Share this article