ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಂಘದ ಜಿಲ್ಲಾಧ್ಯಕ್ಷ ಬಿ.ಪಿ.ಅಪ್ಪಾಜಿ ಮಾತನಾಡಿ, ರಾಜ್ಯದ ಎಲ್ಲಾ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ ₹100 ಪಾವತಿಸಿವೆ. ಆದರೆ, ದಕ್ಷಿಣ ಭಾಗದ ಕಾರ್ಖಾನೆಗಳ ವ್ಯಾಪ್ತಿಯ ರೈತರಿಗೆ ಸರ್ಕಾರದ ₹50 ತಲುಪಿದೆ. ಕಾರ್ಖಾನೆಯವರು ಕೊಡಬೇಕಾದ ₹50 ತಕ್ಷಣ ರೈತರಿಗೆ ಪಾವತಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕದ ಎಲ್ಲಾ ಕಾರ್ಖಾನೆಗಳು ಈಗಾಗಲೇ ರೈತರಿಗೆ ಪಾವತಿ ಮಾಡಿವೆ. ಕಬ್ಬು ತೂಕ ಮತ್ತು ಇಳುವರಿ ಅಂಶವನ್ನು ತೂಕದ ಯಂತ್ರ ಹಾಗೂ ಇಂಟೆಕ್ಟ್ ಮೆಷಿನ್ ಅಳವಡಿಸಿ ಪಾರದರ್ಶಕವಾಗಿ ರೈತರಿಗೆ ಸ್ಥಳದಲ್ಲೇ ತಿಳಿಸಬೇಕು ಎಂದು ಆಗ್ರಹಿಸಿದರು.ಕಬ್ಬು ಸರಬರಾಜು ಮಾಡುವ ರೈತರಿಗೆ ಮುಖ್ಯವಾಗಿ ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡುವುದು. ಜಾನುವಾರುಗಳಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜುಲೈ ಮೊದಲ ವಾರದಲ್ಲೇ ಕಾರ್ಖಾನೆಯನ್ನು ಪ್ರಾರಂಭಿಸಿ ಕೇಂದ್ರ ಸರ್ಕಾರ ನಿಗದಿಪಡಿಸಿದ ಎಪ್‌ಆರ್‌ಪಿ ದರವನ್ನು ಪೂರ್ಣವಾಗಿ ರೈತರಿಗೆ ಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಭಾರತ್ ಕಿಸಾನ್ ಸಂಘದ ಕಾರ್ಯಕರ್ತರು ಚಾಂಶುಗರ್ಸ್ ಕಾರ್ಖಾನೆ ಕಬ್ಬು ವಿಭಾಗದ ಜನರಲ್ ಮ್ಯಾನೇಜರ್ ಮಹದೇವ ಪ್ರಭು ಅವರಿಗೆ ಮನವಿ ಪತ್ರ ಸಲ್ಲಿಸಿದರು.