ಕನ್ನಡ ಪ್ರಭವಾರ್ತೆ ಮಾಲೂರು
ನಗರ ನಕ್ಸಲರ ಒತ್ತಡ
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ಅವರು ಹಿಂದುಗಳ ಶ್ರದ್ಧಾ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ದೊಡ್ಡ ಪಿತೂರಿ ನಡೆದಿದೆ. ಯಾರೋ ಒಬ್ಬ ನಾನು ಸಾವಿರಾರು ಹೆಣ ಹೊಳಿದಿದ್ದೇನೆ ಎಂದ ತಕ್ಷಣ ಅತನ ಪೂರ್ವಪರ ವಿಚಾರಿಸದೆ ನಗರ ನಕ್ಸಲರ ಒತ್ತಡಕ್ಕೆ ಮಣಿದು ಎಸ್.ಐ.ಟಿ. ರಚಿಸಿದ ರಾಜ್ಯ ಸರ್ಕಾರವು ಈಗ ಷಡ್ಯಂತ್ರದ ನಿಜರೂಪ ಹೊರಬಂದ ಮೇಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ನಿಧಾನ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.ಅಲ್ಲದೇ ಯೂಟ್ಯೂಬರ್‌ಗಳು ಸ್ಪರ್ಧೆಗೆ ಬಿದ್ದವರಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದು, ಅವರ ವಿರುದ್ಧವೂ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಮುಂದಿನ ತಿಂಗಳ ಮೊದಲ ದಿನ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರಾಜ್ಯ ಬಿಜೆಪಿ ಕರೆ ನೀಡಿರುವ ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ಮಾಲೂರಿನಿಂದ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಲಿದ್ದೇವೆ ಎಂದರುರು.
ಬಿಜೆಪಿ ಮುಖಂಡರಾದ ಮಡಿವಾಳ ಚಂದ್ರಶೇಖರ್ ಗೌಡ,ತಬಲ ಅಪ್ಪಿ ಮಾತನಾಡಿದರು. ಜಿ.ಪಂ.ಮಾಜಿ ಸದಸ್ಯರಾದ ಚಿನ್ನಸ್ವಾಮಿಗೌಡ,ರಾಮಸ್ವಾಮಿ ರೆಡ್ಡಿ ,ಬೆಳ್ಳಾವಿ ಸೋಮಣ್ಣ,ಎಸ್.ವಿ.ಲೋಕೇಶ್, ಯಶವಂತಪುರ ವೇಣುಗೋಪಾಲ್ ಗೌಡ,ಬಂಡೂರು ನಾರಾಯಣಸ್ವಾಮಿ ,ದೊಡ್ಡಿ ರಾಜಪ್ಪ,ತೇಜಸ್ವಿಗೌಡ,ಭಾರತಮ್ಮ ನಂಜುಂಡಪ್ಪ, ಅಮುದಾ ವೇಣು, ಅನಿತಾ ನಾಗರಾಜು, ಸರ್ಕಲ್ ರಾಮಮೂರ್ತಿ, ಬಾಬು, ಯಾದವ್, ಅಸ್ಗರ್ , ಅಮರ್, ರೇಣುಕಾ ಪ್ರಸಾದ್ ಇನ್ನಿತರರು ಇದ್ದರು.