ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jun 14, 2025, 02:01 AM IST
57 | Kannada Prabha

ಸಾರಾಂಶ

ಸರಗೂರು: ತಾಲೂಕಿನ ಬಿ. ಮಟಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಸೀಗೆವಾಡಿ ಹಾಡಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟಿಸಿದರು.

ಸರಗೂರು: ತಾಲೂಕಿನ ಬಿ. ಮಟಕೆರೆ ಗ್ರಾಪಂ ವ್ಯಾಪ್ತಿಗೆ ಬರುವ ಸೀಗೆವಾಡಿ ಹಾಡಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟಿಸಿದರು.ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿಯ ಸಂಚಾಲಕ ಟಿ.ಆರ್. ಸುನಿಲ್ ಮಾತನಾಡಿ, ಸೀಗೆವಾಡಿ ಹಾಡಿಯಲ್ಲಿ ವಾಸಿಸುವ 30 ಜೇನು ಕುರುಬ ಸಮುದಾಯ ಕುಟುಂಬಗಳು ಜೀವನಾವಶ್ಯಕ ಸೌಕರ್ಯಗಳಿಂದ ವಂಚಿತವಾಗಿವೆ. ಮನೆ, ಶೌಚಾಲಯ, ರಸ್ತೆ, ಬೀದಿ ದೀಪ, ಇವೆಲ್ಲವೂ ಅಲಭ್ಯವಾಗಿವೆ. ಇದ್ದರೂ ದುಸ್ಥಿತಿಯಲ್ಲಿವೆ. ಕೆಲವು ಮನೆಗಳಿಗೆ ವಿದ್ಯುತ್ ಹಾಗೂ ನೀರಿನ ಸಮಸ್ಯೆ ಇದೆ ಎಂದು ತಿಳಿಸಿದರು.ಹಾಡಿಗೆ ಸಂಪರ್ಕ ಕಲ್ಪಿಸಲು ಎರಡು ರಸ್ತೆಗಳು ಸಹ ಸಮಸ್ಯೆಯಲ್ಲಿದ್ದು, ಈಗಾಗಲೇ ಬಿ. ಮಟಕೆರೆಯಿಂದ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆ ಒತ್ತುವರಿಯಾಗಿದ್ದು, ಅಲ್ಲಿ ರಸ್ತೆ ನಿರ್ಮಿಸಲು ಯಾವುದೇ ಜಾಗವೇ ಇಲ್ಲದಂತಾಗಿದೆ. ಇನ್ನೊಂದು ಕಡೆ ಇರುವ ರಸ್ತೆ ಅರಣ್ಯ ಇಲಾಖೆಯ ಕಚೇರಿಯಿಂದ ಅರಣ್ಯದ ಅಂಚಿನಿಂದ ಹಾದು ಹೋಗಿ ಕೆರೆಯನ್ನು ದಾಟಿ ಹೋಗಬೇಕು ಅಲ್ಲಿ ಮಳೆ ಹೆಚ್ಚಾದಾಗ ಆ ರಸ್ತೆ ಕೆರೆಯ ಬಳಿ ಮುಚ್ಚಿ ಹೋಗುತ್ತದೆ. ಎರಡು ಕಡೆಯಿಂದಲೂ ಸಹ ಹಾಡಿಗೆ ತೆರಳಲು ಅನಾನುಕೂಲವಾಗುತ್ತಿದೆ, ಈ ಕೂಡಲೇ ಸೀಗೆವಾಡಿ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ನಿರ್ಮಿಸಬೇಕು. ಜನರ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಅವರು ದೂರಿದರು.ಇನ್ನೂ ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಬದುಕಿಗಾಗಿ ಹೋರಾಡುತ್ತಿರುವ ಆದಿವಾಸಿಗಳ ಹಕ್ಕುಗಳನ್ನು ಹಾಗೂ ಈ ಭಾಗದ ಅರಣ್ಯ ವಾಸಿಗಳ ಹಕ್ಕುಗಳನ್ನು ರಕ್ಷಿಸಲು ಅವರ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಆದ್ಯತೆ ಆಧಾರದ ಮೇಲೆ ಬಗೆಹರಿಸಬೇಕೆಂದು ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ ಪರವಾಗಿ ಸೀಗೆವಾಡಿ ಹಾಡಿ ಆದಿವಾಸಿಗಳು ಆಗ್ರಹಿಸಿದರು.ಹಾಡಿಯ ಮುಖಂಡರಾದ ಚಿಕ್ಕಮ್ಮ, ಕುಮಾರ, ಚಿಕ್ಕ, ಗಣೇಶ, ಕುಳ್ಳ, ಗೌರಿ, ಮಂಜುಳಾ, ಸಿಂಧು, ಬೊಮ್ಮ ಭಾಗವಹಿಸಿದ್ದರು.

PREV

Recommended Stories

ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಖರ್ಗೆ ಕುಟುಂಬದ ವಿರುದ್ಧ ಕೋರ್ಟ್‌ಗೆ ಖಾಸಗಿ ದೂರು