ರಾಣಿಬೆನ್ನೂರು: ಕಬ್ಬು ಸಾಗಣೆ ಮಾಡುವ ಡಬಲ್ ಟ್ರೈಲರ್ ಟ್ರ‍್ಯಾಕ್ಟರ್‌ಗಳಲ್ಲಿ ಅಳವಡಿಸಿರುವ ಟೇಪ್‌ರೆಕಾರ್ಡರ್ ಹಾಗೂ ಸೌಂಡ್‌ಬಾಕ್ಸಗಳಿಂದ ಹೊರಹೊಮ್ಮುವ ಅಬ್ಬರದ ಶಬ್ದದಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಇವುಗಳನ್ನು ತಕ್ಷಣ ವಶಪಡಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತರು ಗುರುವಾರ ತಾಲೂಕಿನ ತುಮ್ಮಿನಕಟ್ಟಿ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸುವ ಚಾಲಕರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಅತಿಯಾದ ಶಬ್ದ ಹೊರಸೂಸುವ ಟೇಪ್‌ರೆಕಾರ್ಡರ್ ಹಾಗೂ ಸೌಂಡ್‌ಬಾಕ್ಸಗಳನ್ನು ಸೀಜ್ ಮಾಡಬೇಕು. ಗುಜರಾತ್ ಮಾದರಿಯಲ್ಲಿ ನಿಯಮ ಉಲ್ಲಂಘಿಸುವ ಟ್ರ‍್ಯಾಕ್ಟರ್‌ಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಲ್ಲಪ್ಪರಡ್ಡಿ ರಡ್ಡೇರ, ಚಂದ್ರಣ್ಣ ಬೇಡರ, ಹನುಮಪ್ಪ ಬ್ಯಾಲದಹಳ್ಳಿ, ಶಶಿಧರ ಬಸವನಾಯಕ, ಕರಬಸಪ್ಪ ಕೂಲೇರ, ಶೇಖಣ್ಣ ಬಣಕಾರ, ರಾಜು ಮಾದಮ್ಮನವರ, ಕುಬೇರಗೌಡ ಕರೇಕಟ್ಟಿ, ಸುರೇಶ ಸಾಂತನವರ, ಬಸವರಾಜ ಪಾಳೇದ, ಶಿವಪ್ಪ ಸಾಂತನವರ, ಹನುಮಗೌಡ ಮೂಡಬಾಗಿಲ ಮತ್ತಿತರರಿದ್ದರು.ಇತ್ತೀಚಿಗೆ ಗ್ರಾಮದ ಬಳಿ ಡಬಲ್ ಟ್ರೈಲರ್ ಟ್ರ‍್ಯಾಕ್ಟರ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು.