ಭೂಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿ ರದ್ದು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Apr 18, 2024, 02:15 AM IST
17ಎಸ್ಪಿಟಿ07: ಸೋಮವಾರಪೇಟೆ ತಾಲ್ಲೂಕು ಕಚೇರಿ ಎದುರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭೂ-ಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿಯನ್ನು ಕೂಡಲೆ ರದ್ದುಗೊಳಿಸುವಂತೆ ಆಗ್ರಹಹಿಸಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕೊಡಗು ಜಿಲ್ಲೆ ಭೂ ಗುತ್ತಿಗೆ ವಿರೋಧಿ ಐಕ್ಯ ಹೋರಾಟ ಸಮಿತಿ, ದಲಿತ, ಆದಿವಾಸಿ, ಕೃಷಿ, ಕಾರ್ಮಿಕ, ಮೂಲನಿವಾಸಿ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಶಿರಸ್ತೇದಾರ್ ಸುಶೀಲ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸರ್ಕಾರ ಜಾರಿಗೊಳಿಸಿರುವ ಭೂ ಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿ ಕೂಡಲೆ ರದ್ದುಗೊಳಿಸುವಂತೆ ಆಗ್ರಹಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಸರ್ಕಾರ ಜಾರಿಗೊಳಿಸಿರುವ ಭೂ ಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿ ಕೂಡಲೆ ರದ್ದುಗೊಳಿಸುವಂತೆ ಆಗ್ರಹಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕೊಡಗು ಜಿಲ್ಲೆ ಭೂ ಗುತ್ತಿಗೆ ವಿರೋಧಿ ಐಕ್ಯ ಹೋರಾಟ ಸಮಿತಿ, ದಲಿತ, ಆದಿವಾಸಿ, ಕೃಷಿ, ಕಾರ್ಮಿಕ, ಮೂಲನಿವಾಸಿ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಶಿರಸ್ತೇದಾರ್ ಸುಶೀಲ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಜಿಲ್ಲೆಯಲ್ಲಿ ಕಾರ್ಪೋರೇಟ್‍ಗಳು, ಭೂಮಾಲೀಕರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿ ತೆರವುಗೊಳಿಸಿ ಬಡವರಿಗೆ ಹಂಚಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಭೂರಹಿತ ಕೃಷಿ ಕಾರ್ಮಿಕರಿಗೆ ದಲಿತ ಆದಿವಾಸಿ ಕಡು ಬಡವರಿಗೆ ತಕ್ಷಣ ನಿವೇಶನ ಮತ್ತು ಭೂಮಿ ಹಂಚಬೇಕು. ಈಗಾಗಲೇ ಫಾರಂ 57ರಲ್ಲಿ ಸಲ್ಲಿಕೆಯಾಗಿರುವ ಬಡವರ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು, ಉಳಿದವರಿಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ಮುಂದುವರಿಸಬೇಕು ಎಂದು ಒತ್ತಾಯಿಸಲಾಯಿತು.

ಜಿಲ್ಲೆಯಲ್ಲಿ ಎಲ್ಲಾ ಜಾತಿಯ ಬಡವರು, ಕೃಷಿ ಕಾರ್ಮಿಕರು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿರುವ 5 ಎಕರೆ ಜಾಗಕ್ಕೆ ಹಕ್ಕುಪತ್ರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೊಡಗಿನ ಶ್ರೀಮಂತ ಭೂಮಾಲೀಕರ ತೋಟಗಳಲ್ಲಿ ಇವತ್ತಿಗೂ ಆದಿವಾಸಿಗಳು ಜೀತದಾಳಾಗಿ ದುಡಿಯುತ್ತಿದ್ದಾರೆ. ಶವ ಹೂಳಲು, ಮನೆ ಕಟ್ಟಿಕೊಳ್ಳಲು ಸರ್ಕಾರಿ ಜಾಗ ಸಿಗುತ್ತಿಲ್ಲ. ಇದ್ದ ಸರ್ಕಾರಿ ಭೂಮಿಯನ್ನೆಲ್ಲ ಆರ್ಥಿಕ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಈಗ ಸರ್ಕಾರ ಅಂತಹವರಿಗೆ ಸರ್ಕಾರಿ ಭೂಮಿ ಮಾರಾಟ ಮಾಡಲು ಹೊರಟಿದೆ. ಇದು ಅನ್ಯಾಯ ಎಂದು ಐಕ್ಯ ಸಮಿತಿ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ದೂರಿದರು.

ಸಮಿತಿ ಪದಾಧಿಕಾರಿಗಳಾದ ಜಯಪ್ಪ ಹಾನಗಲ್, ರವಿ ಶಾಂತಳ್ಳಿ, ಶಿವರಾಜ್ ಗಣಗೂರು, ಶೋಭ, ಸೋನಿ, ರಾಣಿ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ