ಮಾಸಾಶನ ಪುನರಾರಂಭಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Nov 07, 2025, 03:15 AM IST
ಫೋಟೋ: 6 ಜಿಎಲ್ಡಿ2- ಗುಳೇದಗುಡ್ಡದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಫಲಾನುಭವಿಗಳ  ಸ್ಥಗಿತವಾದ ಮಾಸಾಶನ ಪುನರ್ ಆರಂಭಕ್ಕೆ  ಆಗ್ರಹಿಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಗುಳೇದಗುಡ್ಡ ತಾಲೂಕಿನ ಹಲವಾರು ಫಲಾನುಭವಿಗಳ ವೃದ್ಧಾಪ್ಯ, ವಿಧವಾ, ವಿಕಲಚೇತನರ ವೇತನ ಸೇರಿದಂತೆ ಸರ್ಕಾರ ನೀಡುವ ಮಾಸಾಶನಗಳು ಅನೇಕ ತಿಂಗಳುಗಳಿಂದ ಸ್ಥಗಿತವಾಗಿದ್ದು, ಅರ್ಹ ಫಲಾನುಭವಿಗಳಿಗೆ ಪುನರ್ ಆರಂಭಿಸಬೇಕೆಂದು ಒತ್ತಾಯಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹಾಗೂ ಸಾರ್ವಜನಿಕರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ತಾಲೂಕಿನ ಹಲವಾರು ಫಲಾನುಭವಿಗಳ ವೃದ್ಧಾಪ್ಯ, ವಿಧವಾ, ವಿಕಲಚೇತನರ ವೇತನ ಸೇರಿದಂತೆ ಸರ್ಕಾರ ನೀಡುವ ಮಾಸಾಶನಗಳು ಅನೇಕ ತಿಂಗಳುಗಳಿಂದ ಸ್ಥಗಿತವಾಗಿದ್ದು, ಅರ್ಹ ಫಲಾನುಭವಿಗಳಿಗೆ ಪುನರ್ ಆರಂಭಿಸಬೇಕೆಂದು ಒತ್ತಾಯಿಸಿ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಹಾಗೂ ಸಾರ್ವಜನಿಕರು ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ರವಿ ಅಂಗಡಿ ಮತ್ತು ಸಾಮಾಜಿಕ ಹೋರಾಟಗಾರ ಅಶೋಕ ಹೆಗಡಿ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಕಳೆದ ಹಲವಾರು ತಿಂಗಳುಗಳಿಂದ ವೃದ್ಧಾಪ್ಯ, ವಿಧವಾ ವೇತನ, ವಿಕಲಚೇತನರ ಭತ್ತೆ ಸರಿಯಾಗಿ ಬರುತ್ತಿಲ್ಲ. ಇದರಿಂದ ಅತ್ಯಂತ್ಯ ಕನಿಷ್ಟ ಬದುಕನ್ನು ಸಾಗಿಸುತ್ತಿರುವ ಫಲಾನುಭವಿಗಳು ಮಾಸಾಶನವಿಲ್ಲದೇ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಸರ್ಕಾರ ಪ್ರತಿ ತಿಂಗಳು ನೀಡುವ ಮಾಸಾಶನದಿಂದಲೇ ಔಷಧಿ ಹಾಗೂ ಇನ್ನಿತರೇ ಆರೋಗ್ಯಕ್ಕೆ ಮತ್ತು ಜೀವ ನಿರ್ವಹಣೆಗೆ ಬೇಕಾಗುವ ವಸ್ತುಗಳನ್ನು ಖರೀದಿಸಲು ಅನುಕೂಲವಾಗುತ್ತಿತ್ತು. ಸದ್ಯ ಹಲವು ತಿಂಗಳುಗಳಿಂದ ಮಾಸಾಶನ ಸ್ಥಗಿತವಾಗಿದ್ದೂ ಅದನ್ನು ಆದಷ್ಟು ಬೇಗ ಪುನರಾರಂಭಿಸಬೇಕೆಂದು ಆಗ್ರಹಿಸಿದರು.

ರವಿ ಅಂಗಡಿ ಮನವಿ ಓದಿ ತಹಸೀಲ್ದಾರರಿಗೆ ಸಲ್ಲಿಸಿದರು. ತಹಸೀಲ್ದಾರ ಶಿವಾನಂದ ಬೊಮ್ಮಣ್ಣವರ ಮನವಿ ಸ್ವೀಕರಿಸಿ, ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಶಿರಸ್ತೇದಾರ ಸುಭಾಸ ವಡವಡಗಿ, ಶ್ರೀಕಾಂತ ಹುನಗುಂದ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ