ಹಕ್ಕು ಪತ್ರ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Feb 07, 2024, 01:48 AM IST
ಪೋಟೊ6ಕೆಎಸಟಿ3: ಕುಷ್ಟಗಿ ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಆವರಣದಲ್ಲಿ ಹಕ್ಕು ಪತ್ರ ವಿತರಣೆಗಾಗಿ ಪ್ರತಿಭಟನೆಯನ್ನು ನಡೆಸುತ್ತಿರುವದು. | Kannada Prabha

ಸಾರಾಂಶ

ನಿವೇಶನಗಳ ಹಕ್ಕು ಪತ್ರ ಫಲಾನುಭವಿಗಳಿಗೆ ವಿತರಿಸಿದ ಮೇಲೆ ಗ್ರಾಪಂ ವತಿಯಿಂದ ವಸತಿ ಸೌಲಭ್ಯ ಕಲ್ಪಿಸುವುದು. ತಳುವಗೇರಾ ಗ್ರಾಮದ ಪರಿಶಿಷ್ಟರ ಕಾಲನಿಗೆ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಮಂಜೂರು ಮಾಡುವುದು

ಕುಷ್ಟಗಿ: ಪಟ್ಟಣದ ತಹಸೀಲ್ದಾರ್‌ ಕಾರ್ಯಾಲಯದ ಆವರಣದಲ್ಲಿ ಜಮೀನು ಅಭಿವೃದ್ಧಿಪಡಿಸಿ ದಲಿತ ಕುಟುಂಬ ಫಲಾನುಭವಿಗಳಿಗೆ ನಿವೇಶನಗಳ ಹಕ್ಕು ಪತ್ರ ವಿತರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಕುಷ್ಟಗಿ ತಾಲೂಕಿನ ಹನಮಸಾಗರ ಹೋಬಳಿ ವ್ಯಾಪ್ತಿಯಲ್ಲಿ ಬರುವ ತಳುವಗೇರಾ ಗ್ರಾಮದ ಸರ್ವೆ ನಂ. 218/2 ವಿಸ್ತೀರ್ಣ 1ಎಕರೆ 19ಗುಂಟೆ ಜಮೀನನ್ನು ಗ್ರಾಮೀಣ ಆಶ್ರಯ ಯೋಜನೆಯಡಿಯಲ್ಲಿ ಖರೀದಿಸಲಾಗಿದ್ದು, ಅದನ್ನು ಅಭಿವೃದ್ಧಿ ಪಡಿಸುವ ಜತೆಗೆ ಜಮೀನನ್ನು ತಳುವಗೇರಾ ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳ 37 ಫಲಾನುಭವಿಗಳಿಗೆ ನಿವೇಶನ ಅಭಿವೃದ್ಧಿಪಡಿಸಿ ಹಂಚಲು ಮಂಜೂರಿ ನೀಡಲಾಗಿದ್ದು. ಇಲ್ಲಿಯವರೆಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಾಪಂ ಅಧಿಕಾರಿಗಳು ನಿವೇಶನಗಳ ಹಕ್ಕುಪತ್ರ ಸಂಬಂಧಪಟ್ಟ ಫಲಾನುಭವಿಗಳಿಗೆ ವಿತರಣೆ ಮಾಡಲು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ಈ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಪರಿಶಿಷ್ಟ ಜಾತಿಯ 37 ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ಗಶೀಘ್ರ ವಿತರಿಸಬೇಕೆಂದು ಒತ್ತಾಯಿಸುವ ಮೂಲಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು. ಹಕ್ಕೊತ್ತಾಯಗಳು:

ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಶೀಘ್ರ ಹಕ್ಕುಪತ್ರ ವಿತರಿಸುವುದು. ವಿಳಂಬ ನೀತಿ ಅನುಸರಿಸುವ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವುದು. ನಿವೇಶನಗಳ ಹಕ್ಕು ಪತ್ರ ಫಲಾನುಭವಿಗಳಿಗೆ ವಿತರಿಸಿದ ಮೇಲೆ ಗ್ರಾಪಂ ವತಿಯಿಂದ ವಸತಿ ಸೌಲಭ್ಯ ಕಲ್ಪಿಸುವುದು. ತಳುವಗೇರಾ ಗ್ರಾಮದ ಪರಿಶಿಷ್ಟರ ಕಾಲನಿಗೆ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಮಂಜೂರು ಮಾಡುವುದು. ಪರಿಶಿಷ್ಟರ ಕಾಲನಿಗೆ ಹೈಟೆಕ್ ಮಹಿಳಾ ಶೌಚಾಲಯ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ನೀರುಪಾದಿ ಮಾದರ, ಛತ್ರಪ್ಪ ಮೇಗೂರು, ಯಮನೂರ ಶಿವನಗುತ್ತಿ, ನಾಗರಾಜ ರಾವಣಕಿ, ಗೋತಗೆಪ್ಪ ಕರೇಗುಡ್ಡ, ಶಿವಪುತ್ರಪ್ಪ ಹಂಚಿನಾಳ, ಗಂಗಪ್ಪ ದೇವರಮನಿ, ಮರಿಸ್ವಾಮಿ ಹಿರೇನಂದಿಹಾಳ, ಹನಮಂತ ದೋಟಿಹಾಳ, ಬಸವರಾಜ ಸಾಸಲಮರಿ, ಮರಿಸ್ವಾಮಿ ಮದಲಗಟ್ಟಿ, ನಾಗರಾಜ ವಿರುಪಾಪೂರ, ಶಿವಪುತ್ರಪ್ಪ ಹಂಚಿನಾಳ ಸೇರಿದಂತೆ ತಳುವಗೇರಾ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ