ವಿಬಿ ಜಿ ರಾಮ್ ಜಿ ಯೋಜನೆ ರದ್ದುಗೊಳಿಸಿ ನರೇಗಾ ಜಾರಿಗಾಗಿ ಪ್ರತಿಭಟನೆ

KannadaprabhaNewsNetwork |  
Published : Jul 11, 2026, 12:30 AM IST
8ಕೆಎಂಎನ್ ಡಿ12 | Kannada Prabha

ಸಾರಾಂಶ

ಎನ್ಎಂಎಂಎಸ್ ಮತ್ತು ಇ-ಕೆವೈಸಿ ಅವಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸುವುದನ್ನು ಬಿಟ್ಟು ಕಣ್ಣೂರಕ್ಕೆ ಬಿಡಿಸಿ ಪ್ರತಿಯೊಬ್ಬರ ಫೋಟೋ ತೆಗೆಯುವುದನ್ನು ರದ್ದುಪಡಿಸಿ ಯೋಜನೆ ಅಡಿ ಕೂಲಿಗಾರರಿಗೆ ಸರಳ ರೀತಿಯಲ್ಲಿ ಹಾಜರಾತಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ವಿಬಿಜಿ ರಾಮ್ ಜಿ ಯೋಜನೆ ರದ್ದುಗೊಳಿಸಿ ನರೇಗಾ ಜಾರಿಗೊಳಿಸುವಂತೆ ಒತ್ತಾಯಿಸಿ ತಾಲೂಕು ಕೃಷಿ ಕೂಲಿಕಾರರು ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಪಂಚಾಯ್ತಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತದಿಂದ ಹಳೆಯ ಎಂಸಿ ರಸ್ತೆ ಮಾರ್ಗವಾಗಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ನಂತರ ತಾಪಂ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮನರೇಗಾ ರದ್ದುಗೊಳಿಸಿ ವಿಬಿಜಿ ರಾಮ್ ಜಿ ಯೋಜನೆಯ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸ್ಥಳದಲ್ಲಿ ಮಾತನಾಡಿದ ಕಾರ್ಮಿಕ ಸಂಘದ ಮುಖಂಡ ಟಿ.ಪಿ.ಅರುಣ್ ಕುಮಾರ್ ಹಾಗೂ ಪ್ರಾಂತ್ಯ ಕೂಲಿಕಾರರ ಸಂಘದ ಹನುಮೇಶ್ ಅವರುಗಳು ಕೇಂದ್ರ ವಿಬಿ ರಾಮ್ ಜಿ ಯೋಜನೆ ರದ್ದುಗೊಳಿಸಿ ನರೇಗಾವನ್ನು ಮತ್ತೆ ಜಾರಿಗೆ ತರಬೇಕು. ತಕ್ಷಣ ಕೂಲಿಕಾರರಿಗೆ ಕನಿಷ್ಠ ಕೂಲಿ 700 ರು.ಗೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಎನ್ಎಂಎಂಎಸ್ ಮತ್ತು ಇ-ಕೆವೈಸಿ ಅವಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸುವುದನ್ನು ಬಿಟ್ಟು ಕಣ್ಣೂರಕ್ಕೆ ಬಿಡಿಸಿ ಪ್ರತಿಯೊಬ್ಬರ ಫೋಟೋ ತೆಗೆಯುವುದನ್ನು ರದ್ದುಪಡಿಸಿ ಯೋಜನೆ ಅಡಿ ಕೂಲಿಗಾರರಿಗೆ ಸರಳ ರೀತಿಯಲ್ಲಿ ಹಾಜರಾತಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಶೇ.60ರಷ್ಟು ಅನುದಾನ ಕೊಡುವುದಾಗಿ ಹೇಳಿರುವ ರೀತಿಯಲ್ಲಿ 75 ದಿನದ ಕೆಲಸವನ್ನು ರಾಜ್ಯ ಸರ್ಕಾರವನ್ನು ಅವಲಂಬಿಸದೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ತಾಪಂ ಇಒ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ವೈ.ಎಸ್.ಶೋಭಾ, ಮುಖಂಡರಾದ ಸಿ.ಕೆ.ಮಮತಾ, ಸುಧಾ, ಚಂದ್ರಕಲಾ, ಪುಟ್ಟತಾಯಮ್ಮ, ಪ್ರೇಮ, ಕಮಲಾಕ್ಷಮ್ಮ, ಕೆ.ಆರ್. ರೇಖಾ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನದೇ ಪುಸ್ತಕ ಲೋಕಾರ್ಪಣೆ ಮಾಡಿ ಮದುವೆಯಾದ ಯುವಕ
ಶೈಕ್ಷಣಿಕ ಕ್ರಾಂತಿಯ ಹರಿಕಾರ ಡಾ. ಬಿ.ಎಫ್‌ ದಂಡಿನ