ಕನ್ನಡಪ್ರಭ ವಾರ್ತೆ ಮಾನ್ವಿ
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಮೀನ್ ಪಾಷಾ ದಿದ್ದಿಗಿ, ಪೋತ್ನಾಳ ಹೀರೆ ಹಳ್ಳದ ವ್ಯಾಪ್ತಿಯಲ್ಲಿ ಬರುವ 36ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬರ ಹಿನ್ನೆಲೆಯಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಉಂಟಾಗಿದು ಕೂಡಲೇ ಮಸ್ಕಿ, ಬಸಾಪುರ ಹಾಗೂ ಗೂಗೆಬಾಳ ಎಸ್ಕೇಪ್ ಮೂಲಕ ಪೋತ್ನಾಳ ಹೀರೆ ಹಳ್ಳಕ್ಕೆ ನೀರು ಹರಿಸಿದಲ್ಲಿ ಕೊಳವೆ ಬಾವಿಗಳಲ್ಲಿಯೂ ಕೂಡ ಅಂತರ್ಜಲಮಟ್ಟ ಏರಿಕೆಯಾಗುತ್ತದೆ ಆದ್ದರಿಂದ ಕೂಡಲೇ ಪೋತ್ನಾಳ್ ಹಳ್ಳಕ್ಕೆ ನೀರು ಹರಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಂಧನೂರು ತಹಸೀಲ್ದಾರ್ ಅರುಣ ಕುಮಾರ್ ದೇಸಾಯಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಇನ್ನೂ ಎರಡು ಮೂರು ದಿನಗಳೊಳಗಾಗಿ ಪೋತ್ನಾಳ ಹೀರೆಹಳ್ಳಕ್ಕೆ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಸವರಾಜ ಗುಡಿಹಾಳ, ದುರುಗಪ್ಪ ತಡಕಲ್, ನಾಗನಗೌಡ ಖರಬದಿನ್ನಿ, ಆದಪ್ಪ ಸಾಹುಕಾರ ದಿದ್ದಿಗಿ, ಚೆನ್ನನಗೌಡ ಬನ್ನಿಗನೂರು, ಯಲ್ಲಪ್ಪ ಉಟಕನೂರು, ಪಾಶ್ವ್ರನಾಥ ಗೌಡ, ಮಲ್ಲೇಶಪ್ಪ ದೇವರಮನಿ, ಬಸಲಿಂಗಪ್ಪ, ಗಿರಿರೆಡ್ಡಿ, ಶಿವಕುಮಾರ, ರಾಮು ನಾಯಕ, ಶರಣಕುಮಾರ ಮುದ್ದಂಗುಡ್ಡಿ, ಹುಲುಗಪ್ಪ ದಿದ್ದಿಗಿ, ದೇವಪ್ಪ ರಾಮತ್ನಾಳ, ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.