ಡಿ.31 ರವರೆಗೆ ನೀರು ಹರಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Nov 18, 2026, 01:15 AM IST
ಶಹಾಪುರದ ಎಪಿಎಂಸಿಯಿಂದ ಭೀಮರಾಯನ ಗುಡಿ ಕೆಬಿಜೆಎನ್‍ಎಲ್ ಕಚೇರಿವರೆಗೆ ರೈತರ ಬೃಹತ್ ಪ್ರತಿಭಟನೆ, ರ್ಯಾಲಿಯಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರಡ್ಡಿ ಪಾಟೀಲ್ ಯಾಳಗಿ ಮಾತನಾಡಿದರು. | Kannada Prabha

ಸಾರಾಂಶ

ನಾರಾಯಣಪುರ ಎಡ ಮತ್ತು ಬಲದಂಡೆ ಮೂಲಕ ಕಾಲುವೆಗೆ ಡಿ.31 ರವರೆಗೆ ನಿರಂತರ ನೀರು ಹರಿಸಿದ್ದಲ್ಲಿ ಸಾವಿರ ಕೋಟಿ ರುಪಾಯಿ ನಷ್ಟವಾಗುವುದನ್ನು ತಡೆಯುವ ಮೂಲಕ ಮತ್ತು ರೈತರ ಸಂಕಷ್ಟಕ್ಕೆ ಪರಿಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯಿಂದ ಶಹಾಪುರದ ಎಪಿಎಂಸಿಯಿಂದ ಭೀಮರಾಯನ ಗುಡಿ ಕೆಬಿಜೆಎನ್‍ಎಲ್ ಕಚೇರಿವರೆಗೆ ಬೃಹತ್ ಪ್ರತಿಭಟನೆ, ರ್‍ಯಾಲಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಾರಾಯಣಪುರ ಎಡ ಮತ್ತು ಬಲದಂಡೆ ಮೂಲಕ ಕಾಲುವೆಗೆ ಡಿ.31 ರವರೆಗೆ ನಿರಂತರ ನೀರು ಹರಿಸಿದ್ದಲ್ಲಿ ಸಾವಿರ ಕೋಟಿ ರುಪಾಯಿ ನಷ್ಟವಾಗುವುದನ್ನು ತಡೆಯುವ ಮೂಲಕ ಮತ್ತು ರೈತರ ಸಂಕಷ್ಟಕ್ಕೆ ಪರಿಹರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆಯಿಂದ ಶಹಾಪುರದ ಎಪಿಎಂಸಿಯಿಂದ ಭೀಮರಾಯನ ಗುಡಿ ಕೆಬಿಜೆಎನ್‍ಎಲ್ ಕಚೇರಿವರೆಗೆ ಬೃಹತ್ ಪ್ರತಿಭಟನೆ, ರ್‍ಯಾಲಿ ನಡೆಸಲಾಯಿತು.

ಐದು ದಿನಗಳಿಂದ ಕೃಷ್ಣಾ ಕಾಡಾ ಕಚೇರಿ ಎದುರು ರೈತರು ನಿರಂತರ ಧರಣಿ ಕುಳಿತಿದ್ದು, ಸರ್ಕಾರ ಭಾಗವಾಗಿರುವ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಯಾರೊಬ್ಬರು ರೈತರ ಸಂಕಷ್ಟಕ್ಕೆ ಆಡಳಿತ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಡಿಸೆಂಬರ್ ಅಂತ್ಯದವರೆಗೆ ಕಾಲುವೆಗೆ ನಿರು ಹರಿಸದಿದ್ದಲ್ಲಿ ಮೆಣಸಿನಕಾಯಿ, ತೊಗರಿ, ಶೇಂಗಾ ಇತರೆ ಬೆಳೆಗಳೆಲ್ಲ ನೀರಿಲ್ಲದೆ ಒಣಗಿ ಕೋಟ್ಯಂತರ ರುಪಾಯಿ ನಷ್ಟವಾಗಲಿದೆ. ಇದರಿಂದ ಈಗಾಗಲೇ ಬರಗಾಲದಿಂದ ಬೇಯುತ್ತಿರುವ ರೈತರ ಸ್ಥಿತಿ ಚಿಂತಾಜನಕವಾಗಲಿದೆ. ವಾಸ್ತವ ಸ್ಥಿತಿ ಅರಿತ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರಡ್ಡಿ ಪಾಟೀಲ್ ಯಾಳಗಿ ಮಾತನಾಡಿ, ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ನಿರಂತರ ನೀರು ಹಸಿಸುವಷ್ಟು ನಾರಾಯಣಪುರ ಡ್ಯಾಂನಲ್ಲಿ ನೀರು ಸಂಗ್ರಹವಾಗಿತ್ತು. ಅಲ್ಲದೆ ಡ್ಯಾಂ ತುಂಬಿದ್ದ ವೇಳೆ ಬರಗಾಲ ಇದ್ರೂ ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಜಾಸ್ತಿ ಮಳೆಯಾಗಿದ್ದು, ಪುಣ್ಯಕ್ಕೆ ನಮ್ಮ ಡ್ಯಾಂಗಳು ತುಂಬಿವೆ. ಹೀಗಾಗಿ ರೈತರು ಹೆದರುವ ಅಗತ್ಯವಿಲ್ಲ ಸಮರ್ಪಕವಾಗಿ ನೀರು ಹರಿಸಲಾಗುತ್ತದೆ ಎಂದು ಅಧಿಕಾರಿಗು ಅಭಯ ನೀಡಿದ್ದರು. ಆದರೆ ಇದೀಗ ಅವರೇ ನೀರಿಲ್ಲ, ಸರ್ಕಾರ ಮತ್ತು ಸಂಬಂಧಿಸಿದ ಸಚಿವರ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವದು ಎಂದು ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ಹೇಳುತ್ತಲೇ ಬಂದಿದ್ದಾರೆ. ತುಂಬಿದ ನಾರಾಯಣಪುರ ಡ್ಯಾಂನಿಂದ ಎರಡು ಟಿಎಂಸಿ ನೀರು ರಾತ್ರೋರಾತ್ರಿ ತೆಲಂಗಾಣಕ್ಕೆ ಬಿಟ್ಟಿರುವದು ತಪ್ಪಲ್ಲವೇ ? ನಮ್ಮ ರೈತರಿಗೆ ಮೋಸ ಮಾಡಿದ್ದು ಸರಿಯೇ ಎಂದು ಆಡಳಿತ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮಾಜಿ ಶಾಸಕ ಗುರು ಪಾಟೀಲ್‌ ಶಿರವಾಳ, ಜೆಡಿಎಸ್ ಮುಖಂಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳಿ, ಸಂಘಟನೆಯ ಪ್ರಮುಖ ಲಕ್ಷ್ಮೀಕಾಂತ ಪಾಟೀಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಡಾ.ಚಂದ್ರಶೇಖರ ಸುಬೇದಾರ, ತಾಲೂಕು ಬಿಜೆಪಿ ಅಧ್ಯಕ್ಷ ತಿರುಪತಿ ಹತ್ತಿಕಟಗಿ, ಬಶೀರ್ ಮುತ್ಯಾ ಅವರು ಹೋರಾಟದಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಬಿಜೆಎನ್‍ಎಲ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ ಕುಲಕರ್ಣಿ ರೈತರಿಂದ ಮನವಿ ಪತ್ರ ಸ್ವೀಕರಿಸಿ, ಈ ಕುರಿತು ಸರ್ಕಾರ ಮತ್ತು ಸಂಬಂಧಿಸಿದ ಸಚಿವರ ಸಹಿತ ನೀರಾವರಿ ಸಲಹಾ ಸಮಿತಿಗೆ ನಿಮ್ಮ ಬೇಡಿಕೆ ಮನವರಿಕೆ ಮಾಡುವೆ ಎಂದು ಭರವಸೆ ನೀಡಿದರು.

ಬೆಳೆ ರಕ್ಷಣೆಗೆ ನೀರು ಹರಿಸಿ: ಮನವಿ: ಸುರಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಬೆಳೆಗಳ ರಕ್ಷಣೆಗೆ ಸಮರ್ಪಕ ಹಾಗೂ ನಿರಂತರ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಮಾಜಿ ಸಚಿವ ಹಾಗೂ ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಸುರಪುರ ಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಬೆಂಗಳೂರಿನಲ್ಲಿ ನೀರಾವರಿ ಸಚಿವ ಎನ್. ಚಲುವರಾಯಸ್ವಾಮಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ರೈತರ ಬೆಳೆಗಳು ಒಣಗದಂತೆ ತಡೆಯಲು ತಕ್ಷಣವೇ ಕಾಲುವೆಗಳಿಗೆ ನೀರು ಹರಿಸುವುದು ಅತ್ಯಗತ್ಯ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಶಾಸಕರು, ಮುಂದಿನ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಗೆ ಯಾದಗಿರಿ ಜಿಲ್ಲೆಯ ರೈತ ಮುಖಂಡರು ಹಾಗೂ ರೈತ ಸಂಘಟನೆಗಳ ಪ್ರಮುಖರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಬೇಕು ಎಂದು ಆಗ್ರಹಿಸಿದರು. ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಎನ್. ಚಲುವರಾಯಸ್ವಾಮಿ, ಈ ಕುರಿತು ನ.19ರಂದು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕಾಡಾ ಅಧ್ಯಕ್ಷ ಬಾಬುರಾವ್ ಹೊನ್ನಾ ನಾಯಕ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಾಶ್ರೀ ಉತ್ತಮ ವೇದಿಕೆ: ಜಿಪಂ ಸಿಇಒ
ತೋಂಟದ ಸಿದ್ಧಲಿಂಗ ಶ್ರೀಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ ಇತ್ತು: ಈಶಣ್ಣ ಬೆಟಗೇರಿ