ಕನ್ನಡಪ್ರಭ ವಾರ್ತೆ ಹೊನ್ನಾಳಿ
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯನ್ನು ಯಾರನ್ನು ಮಾಡಬೇಕು ಎಂಬುದು ನಮ್ಮ ಪಕ್ಷಕ್ಕೆ ಸೇರಿದ ವಿಚಾರ, ಇವರು ಯಾರು ನಮ್ಮ ಪಕ್ಷದ ಆಂತರಿಕ ವಿಚಾರಗಳಲ್ಲಿ ತಲೆ ಹಾಕಲಿಕ್ಕೆ ಎಂದು ಪ್ರಶ್ನಿಸಿದ ಅವರು, ಇನ್ನೊಮ್ಮೆ ನಮ್ಮ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಹಗುರವಾಗಿ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ರೇಣುಕಾಚಾರ್ಯರ ವಿರುದ್ಧ ಕಿಡಿಕಾರಿದರು.
ಸಿಎಂ ಗಾದಿಯ ಬಗ್ಗೆ ನಮ್ಮ ಪಕ್ಷದಲ್ಲಿ ಎಂದೂ ಸಿಎಂ ಹಾಗೂ ಡಿಸಿಎಂ ನಡುವೆ ಯಾವುದೇ ಚರ್ಚೆಯಾಗಿಲ್ಲ, ಮಾಜಿ ಸಚಿವ ರೇಣುಕಾಚಾರ್ಯ ಸುಖಾಸುಮ್ಮನೆ ಪ್ರಚಾರಕ್ಕಾಗಿ ಈ ರೀತಿ ಮಾತನಾಡುವುದನ್ನು ಕೈಬಿಡಬೇಕು ಎಂದ ಅವರು, ತಮ್ಮ ಪಕ್ಷದಲ್ಲೇ ಸಾಕಷ್ಟು ಗಬ್ಬು ನಾರುತ್ತಿದೆ, ದಾವಣಗೆರೆ ಜಿಲ್ಲೆ ಬಿಜೆಪಿಯಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು, ಇವರು ನಮ್ಮ ಪಕ್ಷದ ಬಗ್ಗೆ ಮಾತನಾಡುವುದಕ್ಕೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ದುರ್ಘಟನೆ ಅದೊಂದು ಆಕಸ್ಮಿಕ, ಇದಕ್ಕೂ ಈ ಮಾಜಿ ಸಚಿವ ರಾಜೀನಾಮೆ ಕೇಳುತ್ತಿದ್ದಾರೆ, ಕುಂಭಮೇಳದಲ್ಲಿ ನೂರಾರು ಜನ ಸತ್ತರಲ್ಲ ಆಗ ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಜೀನಾಮೆ ಕೊಟ್ರಾ ಎಂದರು.
ಆರ್‌ಸಿಬಿ ವಿಜಯಯೋತ್ಸವ ವೇಳೆ ನಡೆದ ದುರಂತಕ್ಕೆ ನಮ್ಮ ಸರ್ಕಾರದ್ದು ಯಾವುದೇ ತಪ್ಪಿಲ್ಲ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಸಿ.ಎಂ. ಹಾಗೂ ಡಿಸಿಎಂ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮೈಲಪ್ಪ,ಅಣ್ಣಪ್ಪ,ಸಿಂಗಟಗೆರೆ ಅಣ್ಣಪ್ಪ,ಹಳದಪ್ಪ ಮತ್ತಿತರರಿದ್ದರು.