ಕಾರ್ಮಿಕ ಪರ ಕಾನೂನು ಉಳಿಯಲಿ
ಕೇಂದ್ರ ಕಾರ್ಮಿಕರ ಸಂಘಟನೆಗಳ ಒಕ್ಕೂಟ ಜೆಸಿಟಿಯು ,ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ನಗರದ ಸೋಮಾನಿ ವೃತ್ತದಲ್ಲಿ ಗುರುವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಯಿತು.
ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ ಸೈಯದ್ ಹಾಗೂ ಡಿವೈಎಫ್ಐನ ಉತ್ತರ ಕನ್ನಡದ ಜಿಲ್ಲಾ ಸಮಿತಿ ಸದಸ್ಯ ಡಿ. ಸ್ಯಾಮ್ಸನ್ ಮಾತನಾಡಿ, ಕೇಂದ್ರ ಸರ್ಕಾರವು ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರನ್ನು ಗುಲಾಮರನ್ನಾಗಿಸುವ 4 ಕಾರ್ಮಿಕರ ಸಂಹಿತೆಗಳು ಜಾರಿಗೆ ತರದೇ ಈ ಮೊದಲು ಇದ್ದ 29 ಕಾರ್ಮಿಕ ಪರ ಕಾನೂನುಗಳನ್ನು ಉಳಿಸಿಕೊಳ್ಳಬೇಕು. ಕಾರ್ಮಿಕರಿಗೆ ನ್ಯಾಯಯುತ ಬದುಕನ್ನು ನಡೆಸಲು ಅನುಕೂಲ ಮಾಡಿಕೊಡಬೇಕು.ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಕಾಯಿದೆ ಹೆಸರು ಮರು ಸ್ಥಾಪನೆ ಮರುಸ್ಥಾಪನೆ, ವಿಮಾ ಕ್ಷೇತ್ರದಲ್ಲಿ 100 ವಿದೇಶಿ ಬಂಡವಾಳಕ್ಕೆ ನೇರ ಹೂಡಿಕೆಗೆ ಅವಕಾಶ ನೀಡಬಾರದು, ಕರಡು ವಿದ್ಯುತ್ ಮಸೂದೆ, ಬಲವಂತದ ಭೂಸ್ವಾಧೀನ, ಭೂ ಸುಧಾರಣೆ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಕರ್ನಾಟಕದಲ್ಲಿ ನಾಲ್ಕು ಲೇಬರ್ ಕೋಡ್ ಗಳಿಗೆ ನಿಯಮಾವಳಿಗಳನ್ನು ರಚಿಸಬಾರದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈ ಮುಷ್ಕರದ ಪ್ರಮುಖ ಬೇಡಿಕೆಗಳಾಗಿವೆ.
ಉಚಿತ ಸಾರ್ವತ್ರಿಕ ಸಾರ್ವಜನಿಕ ಆರೋಗ್ಯ, ಶಿಕ್ಷಣ, ಎಲ್ಲರಿಗೂ ಪಿಂಚಣಿ, 6 ಗಂಟೆ ಕೆಲಸದ ಅವಧಿ ಉದ್ಯೋಗದ ಭದ್ರತೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಕಾರ್ಮಿಕ ವರ್ಗಕ್ಕೆ ನೀಡಬೇಕು ಎಂದರು.ಈ ಸಂದರ್ಭ ವಿವಿಧ ಸಂಘಟನೆಗಳು ಪ್ರಮುಖರಾದ ವಿಜಯ ಕುಮಾರ, ಇಲಿಯಾಸ್, ಸೇವಂತಿ, ರತ್ನ ದೀಪ ಎನ್.ಎಂ., ಜಗದೀಶ ನಾಯ್ಕ, ಲಕ್ಷ್ಮಣ ಜಾಧವ, ಸಲೀಮ ಸಯ್ಯದ, ವಿಠ್ಠಲ ರೇಣುಕೆ, ಗ್ಯಾನಪ್ಪ ಗೌಡರ, ದೀಪಕ ನಾಯ್ಕ, ಮ್ಯಾತ್ಯು ತಲಪಾಟಿ, ಆನಂದ ಶೇಟಿಯಾ, ಅನ್ವರ್ ಜಿನಾಗೇಂದ್ರ ಗುರವ, ನಿಂಗರಾಜ ಗಾಣಿಗೇರ, ಸುರೇಶ ಗುರ್ರಮ, ಜಾಕೀರ್ ಶೇಖ, ಜಡ್ ದೇವರಾಜ, ಗಣಪತಿ ನಾಯ್ಕ, ಬಾಷಾ ಶೇಖ ವಿವಿಧ ಸ್ಥಳೀಯ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.