ಧಾರವಾಡ:
ಪೆಟ್ರೋಲ್ ಮೂಲಕ ಆಟೋ ಓಡಿಸಲು ಸಾಧ್ಯವಾಗದೇ ಎಲ್‌ಪಿಜಿ ಸೌಲಭ್ಯವುಳ್ಳ ಆಟೋ ಖರೀದಿಸಿದ್ದೇವೆ. ಇದೀಗ ಎಲ್‌ಪಿಜಿ ಸಹ ಸಿಗುತ್ತಿಲ್ಲ. ಇರುವ ಕೆಲವೇ ಆಟೋ ಎಲ್‌ಪಿಜಿ ಕೇಂದ್ರಗಳಲ್ಲಿ ದರವನ್ನು ಲೀಟರ್‌ಗೆ ಸುಮಾರು ₹ 10ರಿಂದ ₹ 15ರ ವರೆಗೆ ಏರಿಸಲಾಗಿದೆ. ಬಾಡಿಗೆ ಹೊಡೆಯಲು ಅಲ್ಲದೇ ನಿತ್ಯ ಶಾಲೆಗಳಿಗೆ ಮಕ್ಕಳನ್ನು ಸಹ ಬಿಟ್ಟು ಬರಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ ಐದು ಎಲ್‌ಪಿಜಿ ಪಂಪ್‌ಗಳಿದ್ದು ಎಲ್ಲೂ ಸಮರ್ಪಕವಾಗಿ ಎಲ್‌ಪಿಜಿ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ 15 ದಿನಗಳಿಂದ ಈ ಸಮಸ್ಯೆ ಆಗುತ್ತಿದ್ದು, 2500 ಎಲ್‌ಪಿಜಿ ಆಟೋ ಹಾಗೂ ಅವರ ಕುಟುಂಬದರು ಸಂಕಷ್ಟದಲ್ಲಿದ್ದಾರೆ. ಆದಷ್ಟು ಶೀಘ್ರ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಇಲ್ಲದೇ ಹೋದಲ್ಲಿ ಮತ್ತೆ ಉಗ್ರ ರೂಪದ ಹೋರಾಟ ಮಾಡಬೇಕಾಗುತ್ತದೆ ಎಂದು ಆಟೋ ಚಾಲಕರು ಎಚ್ಚರಿಸಿದರು.