ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ನೂತನ ತಾಲೂಕಿಗಾಗಿ ೧೨೩೯ ದಿನಗಳಿಂದ ಹೋರಾಟ ನಡೆದಿದೆ. ಇಲ್ಲಿಯವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಆಶಾದಾಯಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅಕ್ಟೋಬರ್ ೮ನೇ ತಾರೀಖಿನಂದು ಸಿಎಂ ಸಿದ್ದರಾಮಯ್ಯ ಅವರ ಮನೆ ಮುಂದೆ ಧರಣಿ ನಡೆಸಲು ನಿರ್ಧರಿಸಿದ್ದೇವೆ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಹೇಳಿದರು.ಸ್ಥಳೀಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಹೋರಾಟ ಸಮಿತಿ ಸಭೆಯಲ್ಲಿ ಪ್ರಮುಖರ ಜೊತೆಗೆ ಚರ್ಚೆ ನಡೆಸಿ ನಿರ್ಧಾರ ಪ್ರಕಟಿಸಿದರು. ನೂತನ ತಾಲೂಕು ರಚನೆ ಕುರಿತಾಗಿ ಹೋರಾಟ ನಾಲ್ಕನೇ ವರ್ಷದಲ್ಲಿ ಮುಂದುವರಿದಿದೆ. ಇದು ಸುಧೀರ್ಘ ಹೋರಾಟವಾಗಿದೆ. ಹೋರಾಟಕ್ಕೆ ಎಲ್ಲ ಮುಖಂಡರು ಮತ್ತು ಸಾರ್ವಜನಿಕರು ಕೈಜೋಡಿಸಬೇಕು. ಆಗ ತಾಲೂಕು ಪಡೆಯುವ ದಾರಿ ಸುಗಮವಾಗುತ್ತದೆ ಎಂದು ಹೇಳಿದರು.
ಅಧಿಕಾರಿಗಳು ಕಳುಹಿಸಿದ ತಾಲೂಕು ರಚನಾ ವರದಿಯನ್ನು ಸಮಗ್ರವಾಗಿ ಸಿಎಂ ಅವರು ಮರು ಪರಿಶೀಲನೆ ನಡೆಸಲಿಕ್ಕೆ ಕಂದಾಯ ಇಲಾಖೆಗೆ ಸೂಚಿಸಬೇಕೆಂಬ ಒತ್ತಾಯವನ್ನು ತಾಲೂಕು ಹೋರಾಟಗಾರರು ಮಾಡಲಿದ್ದಾರೆ ಎಂದು ಹೋರಾಟ ಸಮಿತಿ ತಿಳಿಸಿದೆ.ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುತ್ತಪ್ಪ ಕೋಮಾರ ನೇತೃತ್ವದಲ್ಲಿ ಸಂಘದ ಸದಸ್ಯರು ತಾಲೂಕು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಅರ್ಜುನ ಹಲಗಿಗೌಡರ, ಮಹಮ್ಮದ್ ಹೂಲಿಕಟ್ಟಿ, ಗಂಗಾಧರ ಮೇಟಿ, ಜಯರಾಮಶೆಟ್ಟಿ, ವೀರೇಶ ಆಸಂಗಿ ಮಾತನಾಡಿದರು.
ಹೋರಾಟಗಾರರಾದ ನಿಂಗಪ್ಪ ಬಾಳಿಕಾಯಿ, ಮಹಾದೇವ ಮಾರಾಪುರ, ಮಲ್ಲಪ್ಪ ಸಿಂಗಾಡಿ, ದುಂಡಪ್ಪ ಜಾಧವ, ಚನ್ನಪ್ಪ ಪಟ್ಟಣಶೆಟ್ಟಿ, ಆನಂದ ಹಟ್ಟಿ, ಮಲ್ಲಪ್ಪ ಸಿಂಗಾಡಿ, ಬಸವರಾಜ ಹಿಟ್ಟಿನಮಠ, ಆನಂದ ಹಟ್ಟಿ,ಸುಭಾಷ ಶಿರಬೂರ, ಈರಣ್ಣ ಹಲಗತ್ತಿ, ಶ್ರೀಶೈಲ ಉಳ್ಳಾಗಡ್ಡಿ, ಸಿದ್ರಾಮ ಯರಗಟ್ಟಿ, ರಾಜು ತೇರದಾಳ, ಶಿವಲಿಂಗ ಟಿರಕಿ, ಚಂದ್ರಶೇಖರ ಹುಣಶ್ಯಾಳ, ಸಿದ್ದಪ್ಪ ಶಿರೋಳ, ಈಶ್ವರ ಮುರಗೋಡ, ಎಂ.ಆರ್.ತೇರದಾಳ, ಈರಣ್ಣ ಹಲಗತ್ತಿ, ಮಹಾಲಿಂಗಪ್ಪ ಅವರಾದಿ, ಶ್ರೀಶೈಲಪ್ಪ ಉಳ್ಳಾಗಡ್ಡಿ,ಮಾರುತಿ ಖರೋಶಿ, ಶ್ರೀಶೈಲ ಸತ್ತಿಗೇರಿ, ರಫೀಕ್ ಮಾಲದಾರ, ವೀರಭದ್ರ ಮುಗಳ್ಯಾಳ, ಶ್ರೀಶೈಲ ಚನ್ನಾಳ,ಡಿ.ಬಿ. ನಾಗನೂರ,ರಾಜೇಂದ್ರ ಮಿರ್ಜಿ, ಪರಶುರಾಮ ಕೊಣ್ಣೂರ, ಭೀಮಸಿ ಗೌಂಡಿ, ಹನಮಂತ ಪೂಜೇರಿ, ಸಿದಗಿರೆಪ್ಪ ಉಳ್ಳಾಗಡ್ಡಿ, ಕರೆಪ್ಪ ಮೇಟಿ, ಶ್ರೀಕಾಂತ ಗೂಳನ್ನವರ ಭಾಗವಹಿಸಿದ್ದರು.