ಹಾನಗಲ್ಲ: ವಿದ್ಯುತ್ ಖಾಸಗೀಕರಣ ನೀತಿಯನ್ನು ಖಂಡಿಸಿ ಹಾನಗಲ್ಲಿನ ಹೆಸ್ಕಾಂ ವಿಭಾಗದ ಅಧಿಕಾರಿಗಳು, ನೌಕರರು, ವಿದ್ಯುತ್ ಕಾಮಗಾರಿಗಳ ಗುತ್ತಿಗೆದಾರರು ಮತ್ತು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಇಲ್ಲಿನ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಖಾಸಗೀಕರಣವನ್ನು ವಿರೋಧಿಸಿದರು.
ರಾಜ್ಯ ಸರಕಾರ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವ ಮೂಲಕ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಖಾಸಗಿ ಸಂಸ್ಥೆಗಳು ಲಾಭ ಮಾತ್ರ ನೋಡುತ್ತವೆ. ರೈತರಿಗೆ ಉಚಿತ ವಿದ್ಯುತ್ ಸೇರಿದಂತೆ ಯಾವುದೇ ಸೌಲಭ್ಯಗಳು ನಿಲ್ಲುವ ಭಯ ಸಂಭವವಿದೆ ಎಂದು ಹೆಸ್ಕಾಂ ಅಧಿಕಾರಿಗಳು ಈ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದರು.
ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಮರಿಗೌಡ ವಿ.ಎಸ್., ಅಧಿಕಾರಿಗಳಾದ ಆನಂದ ಜಿ.ಎಸ್., ಮಂಜುನಾಥ, ಎಂ.ಆರ್.ಸುಂಕದ, ಸುರೇಶ ಮೂಲಿಮನಿ, ಪ್ರದೀಪ ಗುಡ್ಡದ, ಸಾಗರ ಗಣೇಶಗುಡಿ, ಎ.ಬಿ.ಸೋಮಾಪೂರ, ಕೃಷ್ಣ ಕಲ್ಲೇರ, ಮಲ್ಲಿಕಾರ್ಜುನ ರೇವಣ್ಣನವರ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶಿವಯೋಗಪ್ಪ ಮಲ್ಲಿಗಾರ, ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ, ಗ್ರಾಮ ಪ್ರತಿನಿಧಿ ಸಂಘದ ಅಧ್ಯಕ್ಷ ವೀರನಗೌಡ ಪಾಟೀಲ ಮೊದಲಾದವರು ಈ ಸಂದರ್ಭದಲ್ಲಿದ್ದರು.