ಲಕ್ಷ್ಮೇಶ್ವರದಲ್ಲಿ ಪೌರಕಾರ್ಮಿಕರ ವಜಾ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Dec 23, 2025, 02:30 AM IST
ಲಕ್ಷ್ಮೇಶ್ವರದ ಪುರಸಭೆ ಎದುರು ವಜಾಗೊಂಡ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಏಕಾಏಕಿ ವಜಾ ಮಾಡಿದರೆ ಆ ಕುಟುಂಬಗಳ ಗತಿ ಏನು? ಇದರಿಂದ ಆ ಕುಟುಂಬಗಳಿಗೆ ತುಂಬಾ ಅನ್ಯಾಯವಾಗಿದೆ. ಆದ್ದರಿಂದ ವಜಾಗೊಂಡಿರುವ ಪೌರಕಾರ್ಮಿಕರನ್ನು ಮರುನೇಮಕ ಮಾಡಬೇಕು. ಇಲ್ಲದಿದ್ದರೆ ಪುರಸಭೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು.

ಲಕ್ಷ್ಮೇಶ್ವರ: ಕಳೆದ ನಾಲ್ಕು ತಿಂಗಳ ಹಿಂದೆ ಹೊರಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರೆಂದು ಕೆಲಸಕ್ಕೆ ನೇಮಿಸಿಕೊಂಡು ಈಗ ವಜಾ ಮಾಡಿರುವುದು ಖಂಡನೀಯ. ನಮ್ಮನ್ನು ಮರುನೇಮಕ ಮಾಡಿಕೊಳ್ಳುವ ವರೆಗೆ ಧರಣಿ ಸತ್ಯಾಗ್ರಹ ನಡೆಸುವುದಾಗಿ ವಜಾಗೊಂಡಿರುವ ಪೌರಕಾರ್ಮಿಕರು ಎಚ್ಚರಿಸಿದರು.

ಸೋಮವಾರ ಪಟ್ಟಣದ ಪುರಸಭೆ ಎದುರು ಧರಣಿ ನಡೆಸಿ ಮಾತನಾಡಿ, ಕಳೆದ ವರ್ಷ 10 ತಿಂಗಳ ಅವಧಿಗೆ ನಮ್ಮನ್ನು ಹೊರಗುತ್ತಿಗೆ ಆಧಾರದಲ್ಲಿ ಪೌರಕಾರ್ಮಿಕರೆಂದು ಕೆಲಸಕ್ಕೆ 10 ಜನರನ್ನು ನೇಮಕ ಮಾಡಿಕೊಂಡಿದ್ದರು. ಆದರೆ ಅದರಲ್ಲಿ 4 ಜನ ಪೌರಕಾರ್ಮಿಕರನ್ನು 4 ತಿಂಗಳ ನಂತರ ಏಕಾಏಕಿ ವಜಾ ಮಾಡಿದ್ದಾರೆ. ನಾಲ್ಕು ತಿಂಗಳಲ್ಲಿ ಎರಡು ತಿಂಗಳ ಸಂಬಳ ಮಾತ್ರ ನೀಡಿದ್ದಾರೆ. ಈಗ ಏಕಾಏಕಿ ವಜಾ ಮಾಡಿದ್ದಾರೆ.

ಹೀಗೆ ಏಕಾಏಕಿ ವಜಾ ಮಾಡಿದರೆ ಆ ಕುಟುಂಬಗಳ ಗತಿ ಏನು? ಇದರಿಂದ ಆ ಕುಟುಂಬಗಳಿಗೆ ತುಂಬಾ ಅನ್ಯಾಯವಾಗಿದೆ. ಆದ್ದರಿಂದ ವಜಾಗೊಂಡಿರುವ ಪೌರಕಾರ್ಮಿಕರನ್ನು ಮರುನೇಮಕ ಮಾಡಬೇಕು. ಇಲ್ಲದಿದ್ದರೆ ಪುರಸಭೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ನೀಲಪ್ಪ ಶಿರಹಟ್ಟಿ, ಹನುಮಂತ ನಂದೆಣ್ಣವರ, ಅರುಣ ನಂದೆಣ್ಣವರ, ರವಿ ಗಾಜಿ, ಪರಮೇಶ ಗಡದವರ, ಕಲ್ಯಾಣ್ ಕುಮಾರ್ ಹಾದಿಮನಿ, ರಾಮಪ್ಪ ಅಯ್ಯಣ್ಣವರ, ಪ್ರಕಾಶ ಗಡದವರ, ಹೊನ್ನಪ್ಪ ಮೇಗಲಮನಿ, ಮಂಜುನಾಥ ದೊಡ್ಡಮನಿ, ಯಲ್ಲಕ್ಕ ಗಡದವರ, ದುರ್ಗವ್ವ ಶಿರಹಟ್ಟಿ, ಕಮಲವ್ವ ನಂದೆಣ್ಣವರ, ಮಲ್ಲವ್ವ ಗಡದವರ, ಹನುಮವ್ವ ಗಡದವರ, ದ್ಯಾಮಕ್ಕ ನಂದೆಣ್ಣವರ, ಕರಿಯವ್ವ ದೊಡ್ಡಮನಿ ಸೇರಿದಂತೆ ಅನೇಕರು ಇದ್ದರು.

ಡಂಬಳದಲ್ಲಿ ಪೋಲಿಯೋ ಲಸಿಕಾ ಅಭಿಯಾನ

ಡಂಬಳ: 5 ವರ್ಷದ ಒಳಗಿನ ಪ್ರತಿಯೊಂದು ಮಗುವಿಗೆ ಪೋಲಿಯೋ ಲಸಿಕೆ ನೀಡುವುದರಿಂದ ಅಂಗವಿಕಲತೆ ದೂರವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ ತಿಳಿಸಿದರು.ಗ್ರಾಮದ ಮೈಲಾರಲಿಂಗೇಶ್ವರ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಡಿ. 21ರಿಂದ 24ರ ವರೆಗೆ ಪಲ್ಸ್ ಪೋಲಿಯೋ ಅಭಿಯಾನ ನಡೆಯಲಿದೆ. ಗ್ರಾಮಸ್ಥರು ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳಿ 5 ವರ್ಷದೊಳಗಿನ ಪ್ರತಿ ಮಗುವಿಗೆ ಲಸಿಕೆ ಹಾಕಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಎಲ್.ಎಂ. ಚಿಕರಡ್ಡಿ, ಸೈನಾಜ ಬೇಗಂ ಕರ್ನಾಚಿ, ಸಹಾಯಕಿ ಕಸ್ತೂರಿ ಪೂಜಾರ, ಆಶಾ ಕಾರ್ಯಕರ್ತೆಯರು, ಮಹಿಳೆಯರು, ಪಾಲಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌