ಹುಬ್ಬಳ್ಳಿ ಅಂಜಲಿ ಹತ್ಯೆ ಖಂಡಿಸಿ ಸಿರವಾರದಲ್ಲಿ ಪ್ರತಿಭಟನೆ

KannadaprabhaNewsNetwork |  
Published : May 20, 2024, 01:31 AM IST
18ಕೆಪಿಎಸ್ಡಬ್ಲ್ಯೂಆರ್ 02:  | Kannada Prabha

ಸಾರಾಂಶ

ಸಿರವಾರ ಪಟ್ಟಣದಲ್ಲಿ ಅಂಜಲಿ ಕೊಲೆಗೈದ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಗಂಗಾಮತ ಸಮಾಜ ಮತ್ತು ವಿವಿಧ ಸಮಾಜ, ಸಂಘ ಸಂಸ್ಥೆಗಳ ಮುಖಂಡರು ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡಣಗೇರಾಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಿರವಾರ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ್ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಗಂಗಾಮತ ಸಮಾಜ ಮತ್ತು ವಿವಿಧ ಸಮಾಜ, ಸಂಘಸಂಸ್ಥೆಗಳ ಮುಖಂಡರು ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡಣಗೇರಾಗೆ ಮನವಿ ಪತ್ರ ಸಲ್ಲಿಸಲಾಯಿತು.

ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರದಲ್ಲಿ ಇತ್ತೀಚೆಗೆ ಯುವತಿಯರ ಹತ್ಯೆ ಖಂಡನೀಯವಾಗಿದ್ದು, ಪ್ರೀತಿ ಹೆಸರಿನಲ್ಲಿ ನಿರಾಕರಣೆ ನೆಪವೊಡ್ಡಿ ಅಮಾಯಕ ಯುವತಿಯರ ಕೊಲೆ ಮೇಲಿಂದ ಮೇಲೆ ನಡೆಯುತ್ತಿದ್ದು, ಪೊಲೀಸ್ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮುಂದೆ ಇಂತಹ ಕೃತ್ಯಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಹತ್ಯೆಯಾದ ಯುವತಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಲಾಯಿತು.

ಮುಖಂಡರಾದ ಎನ್.ಉದಯ ಕುಮಾರ, ಕಲ್ಲೂರು ಬಸವರಾಜ ನಾಯಕ, ಜೆ.ದೇವರಾಜ ಗೌಡ, ಬಸವರಾಜ ಅಂಬಿಗೇರ ಕಲ್ಲೂರು, ಭೂಪನಗೌಡ, ಕೆ.ರಾಘವೇಂದ್ರ, ಎಂ.ರಾಜೇಶ, ಕೆ.ನಾಗರಾಜ, ಸೂರಿ ದುರಗಣ್ಣ ನಾಯಕ, ಮಾರ್ಕಪ್ಪ, ಅರಳಪ್ಪ ಯದ್ದಲದಿನ್ನಿ, ವೆಂಕಟೇಶ ದೊರೆ, ವೆಂಕಟೇಶ ಶಂಕ್ರಿ, ಚನ್ನಬಸವ ಗಡ್ಲ, ರಂಗನಾಥ, ನಾಗೇಶ ಕಬ್ಬೇರ, ಯಂಕಣ್ಣ ಬಾದರದಿನ್ನಿ, ಶಾಂತಪ್ಪ ಪಿತಗಲ್ ಸೇರಿದಂತೆ ವಿವಿಧ ಸಮಾಜ, ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

ಸಿಂಧನೂರಿನಲ್ಲಿ ಇಂದು ಪ್ರತಿಭಟನೆಸಿಂಧನೂರು: ಹುಬ್ಬಳ್ಳಿಯ ಅಂಜಲಿ ಕೊಲೆ ಪ್ರಕರಣ ಖಂಡಿಸಿ ಪ್ರಗತಿಪರ ಸಂಘನೆಗಳ ಒಕ್ಕೂಟದಿಂದ ಮೇ.20 ರಂದು ಪ್ರತಿಭಟನಾ ಚಳವಳಿ ಹಮ್ಮಿಕೊಂಡಿರುವುದಾಗಿ ಒಕ್ಕೂಟದ ಮುಖಂಡರಾದ ಚಂದ್ರಶೇಖರ ಗೊರೆಬಾಳ, ಡಿ.ಎಚ್.ಪೂಜಾರ್, ಮುದ್ದನಗೌಡ ಮುದ್ದಾಪುರ ಮತ್ತು ಟಿ.ಹುಸೇನಸಾಬ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಬೆಳಗ್ಗೆ 10 ಗಂಟೆಗೆ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು, ಮುಖಂಡರು ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಬಂದು ಸೇರುವಂತೆ ಕೋರಿದ್ದಾರೆ. ರಾಜ್ಯದಲ್ಲಿ ಯುವತಿಯರ ಸರಣಿ ಹತ್ಯೆಗಳು ನಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಸರ್ಕಾರ ಇಂತಹ ಪೈಶಾಚಿಕ ಕೃತ್ಯಕ್ಕೆ ಕಾರಣರಾದ ವ್ಯಕ್ತಿಗಳ ಮೇಲೆ ಪ್ರಕರಣ ಕೈಗೊಳ್ಳಲು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೊಲೀಸರಿಗೆ ಕಪಾಳಮೋಕ್ಷ: 27 ಜನರ ವಿರುದ್ಧ ಕೇಸ್‌
ಮಹಾಲಿಂಗಪುರದಲ್ಲಿ ಇಂದು ಜನುಮದ ಜೋಡಿ ಕಾರ್ಯಕ್ರಮ