ಕನ್ನಡಪ್ರಭ ವಾರ್ತೆ ಕೋಲಾರಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಯ ಹಿನ್ನಲೆಯಲ್ಲಿ ಅಧಿಕಾರದ ವಿಕೇಂದ್ರೀಕರಣಗೊಳಿಸುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದ ಕಾಂಗ್ರೆಸ್ ಪಕ್ಷದ ದಿ. ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಕನಸು ನುಚ್ಚುನೂರಾಗಿದೆ.
ಮುಖ್ಯಾಧಿಕಾರಿಗಳದ್ದೇ ಸರ್ವಾಧಿಕಾರ: ಜಿಪಂ ಹಾಗೂ ತಾಪಂ ಮೀಸಲಾತಿ ನಿಗಧಿಗೆ ಸರ್ಕಾರವು ಮೀನಮೇಷ ಎಣಿಸುತ್ತಿದೆ, ಆಡಳಿತಾಧಿಕಾರಿಗಳ ಆಡಳಿತದಲ್ಲೇ ನಡೆಸಲಾಗುತ್ತಿದೆ, ಇದೇ ರೀತಿ ನಗರಸಭೆ, ಪುರಸಭೆ, ಎಪಿಎಂಸಿಗಳಲ್ಲೂ ಸಹ ಅಧ್ಯಕ್ಷ, ಉಪಾಧ್ಯಕರ ಚುನಾವಣೆ ಇಲ್ಲದೆ ಪೌರಾಯುಕ್ತರು, ಮುಖ್ಯಾಧಿಕಾರಿಗಳದ್ದೇ ಸರ್ವಾಧಿಕಾರವಾಗಿದೆ.
ಇದೇ ರೀತಿ ಸಹಕಾರ ಇಲಾಖೆಯ ಡಿಸಿಸಿ ಬ್ಯಾಂಕ್‌ಗೂ ಜಾಡ್ಯ ಅಂಟಿದೆ, ಹೀಗಾಗಿ ಎಲ್ಲೆಡೆ ಅಧಿಕಾರಿಗಳದ್ದೇ ದರ್ಬಾರ್ ಆಗಿದ್ದು ತೆರೆ ಮರೆಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಎಂಬುವುದು ಇಂದು ಅಧಿಕಾರಿಗಳ ಹಕ್ಕು ಆಗಿದೆ.ವಿವಿಧ ಕಾರಣಗಳಿಂದ ಚುನಾವಣೆಗಳನ್ನು ಮುಂದೂಡುತ್ತಾ ಬರುತ್ತಿದ್ದ ಪರಿಣಾಮವಾಗಿ ಜಿಲ್ಲಾ ಮತ್ತು ತಾಪಂ ಸದಸ್ಯರ 5 ವರ್ಷಗಳ ಅಧಿಕಾರದ ಅವಧಿಯು ಮುಗಿದ ಬಳಿಕ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಸುಮಾರು ೩ ವರ್ಷಗಳಿಗೂ ಹೆಚ್ಚು ಕಾಲವಾಗಿದ್ದು, ರಾಜ್ಯದ ಇತಿಹಾಸದಲ್ಲೇ ದಾಖಲಾರ್ಹವಾಗಿದೆ.ಚುನಾವಣೆ ಆಕಾಂಕ್ಷಿಗಳ ನಿರಾಸೆ:
ಆರು ತಿಂಗಳಾದ್ರೂ ಮೀಸಲಾತಿ ಪ್ರಕಟಿಸಿಲ್ಲ:
ಆದರೆ ಸರ್ಕಾರ ಕ್ಷೇತ್ರಗಳ ಗಡಿ ನಿಗಧಿಪಡಿಸಿದ ಸ್ಥಾನಗಳನ್ನು ಹಂಚಿಕೆ ಮಾಡಲು ೬ ತಿಂಗಳ ಕಾಲಾವಕಾಶ ಪಡೆಯಿತು. ಬಳಿಕ ಆಯಾಯಾ ಜಿಲ್ಲೆಗಳ ಸದಸ್ಯ ಸ್ಥಾನಗಳಿಗೆ ತಕ್ಕಂತೆ ಮೀಸಲಾತಿ ಹಂಚಿಕೆ ಮಾಡಿತೇ ಹೊರತಾಗಿ ಮೀಸಲಾತಿ ಹಂಚಿಕೆ ಈವರೆಗೆ ಪ್ರಕಟಿಸಿಲ್ಲ. ಹೀಗಾಗಿ ಚುನಾವಣಾ ಆಯೋಗವು ಮತ್ತೆ ಮೀಸಲಾತಿ ನಿಗಧಿಪಡಿಸಲು ಸರ್ಕಾರವು ವಿಳಂಬ ಧೋರಣೆ ಪಾಲನೆ ಮಾಡುತ್ತಿದ್ದ ಹಿನ್ನಲೆಯಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದರಿಂದ 3 ತಿಂಗಳ ಸಮಯ ಪಡೆದುಕೊಂಡಿತ್ತು, ಆದರೆ ೬ ತಿಂಗಳು ಕಳೆದರೂ ಸಹ ಇನ್ನು ಮೀಸಲಾತಿ ಪ್ರಕಟಿಸಿಲ್ಲ. ರಾಜ್ಯ ಸರ್ಕಾರ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಂತೆ ಚುನಾವಣೆ ನಡೆಸಲು ಮುಂದಾಗಬೇಕಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಬರುವ ಅನುದಾನ ಹಂಚಿಕೆಯು ನಮ್ಮಿಂದ ಕೈ ತಪ್ಪುತ್ತದೆ ಎಂಬ ಕಾರಣಕ್ಕೆ ಒಳಗೊಳಗೆ ವಿರೋಧ ಮಾಡುವ ಮೂಲಕ ವಿಳಂಭ ಮಾಡಲಾಗುತ್ತಿದೆ ಕಳೆದ ೩ ವರ್ಷದಿಂದ ಜನಪ್ರತಿನಿಧಿಗಳಿಲ್ಲದೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬುವುದು ಸಾರ್ವಜನಿಕರ ಆರೋಪವಾಗಿದೆ. ಮಿನರಲ್ ಡಾಲರ್ ಪ್ರಶ್ನೆಯಾದ ಚುನಾವಣೆ:ಈ ಹಿನ್ನಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯದ ಕದತಟ್ಟಲು ಸಜ್ಜಾಗುತ್ತಿದೆ ಎಂಬ ಮಾಹಿತಿ ಇದೆ ಜಿಪಂಗೆ ಐಎಎಎಸ್ ಅಧಿಕಾರಿಗಳನ್ನು, ತಾಪಂಗೆ ಕೆಎಎಸ್. ಅಧಿಕಾರಿಗಳನ್ನು ನೇಮಕ ಮಾಡಿ ಈಗಾಗಲೇ ೩ ವರ್ಷಗಳು ಕಳೆದಿದೆ. ಈಗಾಗಲೇ ಲೋಕಸಭಾ ಚುನಾವಣೆಯ ಮತ ಎಣಿಕೆ ಮುಗಿದ ಬಳಿಕ ರಾಜ್ಯ ಸರ್ಕಾರ ಯಾವಾಗ ಚುನಾವಣೆ ನಡೆಸಲಿದೆ ಎಂಬುವುದು ಪ್ರಸ್ತುತ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.