ಭೋವಿ ಸಮುದಾಯದ ಹೆಸರಿನಲ್ಲಿ ಪ್ರತಿಭಟನೆ: ಆಕ್ಷೇಪ

KannadaprabhaNewsNetwork |  
Published : Oct 07, 2026, 02:45 AM IST
ಹನುಮಸಾಗರದ ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಭೋವಿ ಸಮುದಾಯದ ತಾಲೂಕು ಅಧ್ಯಕ್ಷ ಸೂಚಪ್ಪ ದೇವರಮನಿ ಮಾತನಾಡಿದರು. | Kannada Prabha

ಸಾರಾಂಶ

ಭೋವಿ ಸಮುದಾಯದ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಕುಷ್ಟಗಿ ತಹಸೀಲ್ದಾರ್ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಮ್ಮ ಸಮುದಾಯದ ಹೆಸರಿನ ನಾಮಫಲಕ ಬಳಸುತ್ತಿರುವುದು ಕಾನೂನುಬಾಹಿರವಾಗಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿರುವವರು ಭೋವಿ ಸಮುದಾಯಕ್ಕೆ ಸೇರಿದವರಲ್ಲ ಎಂದು ಭೋವಿ ಸಮುದಾಯದ ತಾಲೂಕು ಅಧ್ಯಕ್ಷ ಸೂಚಪ್ಪ ದೇವರಮನಿ ಆರೋಪಿಸಿದರು.

ಹನುಮಸಾಗರ: ಭೋವಿ ಸಮುದಾಯದ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಕುಷ್ಟಗಿ ತಹಸೀಲ್ದಾರ್ ಕಚೇರಿ ಎದುರು ನಡೆಯುತ್ತಿರುವ ಪ್ರತಿಭಟನೆಯಲ್ಲಿ ನಮ್ಮ ಸಮುದಾಯದ ಹೆಸರಿನ ನಾಮಫಲಕ ಬಳಸುತ್ತಿರುವುದು ಕಾನೂನುಬಾಹಿರವಾಗಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿರುವವರು ಭೋವಿ ಸಮುದಾಯಕ್ಕೆ ಸೇರಿದವರಲ್ಲ ಎಂದು ಭೋವಿ ಸಮುದಾಯದ ತಾಲೂಕು ಅಧ್ಯಕ್ಷ ಸೂಚಪ್ಪ ದೇವರಮನಿ ಆರೋಪಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಸಮುದಾಯದ ಹೆಸರಿನ ನಾಮಫಲಕ ಹಿಡಿದು ಪ್ರತಿಭಟನೆ ನಡೆಸುತ್ತಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗುತ್ತಿದೆ. ಪ್ರತಿಭಟನಾಕಾರರು ನಮ್ಮ ಸಮುದಾಯದವರಲ್ಲದಿದ್ದರೂ ಭೋವಿ ಸಮುದಾಯದ ಹೆಸರನ್ನು ಬಳಸುತ್ತಿರುವುದಕ್ಕೆ ಆಕ್ಷೇಪವಿದೆ ಎಂದರು.

ಕಲ್ಲು ಒಡೆಯುವುದು, ಮನೆ ಹಾಗೂ ಗುಡಿ ನಿರ್ಮಾಣ, ಬಾವಿ ತೋಡುವುದು ಸೇರಿದಂತೆ ಸಾಂಪ್ರದಾಯಿಕವಾಗಿ ಇಂತಹ ವೃತ್ತಿಗಳನ್ನು ಮಾಡಿಕೊಂಡು ಬಂದಿರುವವರೇ ನಮ್ಮ ಭೋವಿ ಸಮುದಾಯದವರು. ಪ್ರತಿಭಟನೆ ನಡೆಸುತ್ತಿರುವ ಸಮುದಾಯದವರ ವೃತ್ತಿ ಹಾಗೂ ನಮ್ಮ ಸಮುದಾಯದ ವೃತ್ತಿಯಲ್ಲಿ ವ್ಯತ್ಯಾಸವಿದೆ. ಅಲ್ಲದೆ, ಅವರೊಂದಿಗೆ ನಮ್ಮ ಸಮುದಾಯದವರು ಯಾವುದೇ ವೈವಾಹಿಕ ಸಂಬಂಧಗಳನ್ನು ಬೆಳೆಸಿಕೊಂಡಿಲ್ಲ.

ಪ್ರತಿಭಟನಾಕಾರರು ತಮ್ಮ ಸಮುದಾಯದ ಹೆಸರಿನಲ್ಲಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಭೋವಿ ಸಮುದಾಯದ ನಾಮಫಲಕವನ್ನು ಬಳಸಿಕೊಂಡು ಸಾರ್ವಜನಿಕರಲ್ಲಿ ತಪ್ಪು ಸಂದೇಶ ಮೂಡಿಸಬಾರದು. ಈ ಕುರಿತು ಸಂಬಂಧಿಸಿದವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ, ಸುದ್ದಿ ಹಂಚಿಕೊಳ್ಳುವವರು ಯಾವುದೇ ವಿಷಯ ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಒಂದು ಸಮುದಾಯದ ಹೆಸರನ್ನು ಮತ್ತೊಂದು ಸಮುದಾಯದವರು ಬಳಸುವುದರಿಂದ ಅನಗತ್ಯ ಗೊಂದಲ ಹಾಗೂ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಆದ್ದರಿಂದ ವಾಸ್ತವಾಂಶ ಪರಿಶೀಲಿಸಿ ಸುದ್ದಿ ಪ್ರಕಟಿಸಬೇಕು ಎಂದು ಮನವಿ ಮಾಡಿದರು.

ಭೋವಿ ಸಮುದಾಯದ ಸ್ಥಳೀಯ ಅಧ್ಯಕ್ಷ ಹುಲಗಪ್ಪ ತೋರಗಲ, ಗ್ರಾಪಂ ಮಾಜಿ ಸದಸ್ಯರಾದ ಮರೇಗೌಡ ಬೋದುರ, ಬಸಪ್ಪ ತೋರಗಲ್, ಸಮುದಾಯದ ಮುಖಂಡ ರಾಮಣ್ಣ ಬಂಡಿವಡ್ಡರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಅಭಿವೃದ್ಧಿಗೆ ಪ್ರಶಸ್ತಿ ಮನ್ನಣೆ: ಪೂಂಜಾ
ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂ ದೌರ್ಜನ್ಯ: ಜ್ಯೋತಿ ಹೆಬ್ಬಾರ್ ಆಕ್ರೋಶ