ರಾಣಿಬೆನ್ನೂರಿನಲ್ಲಿ ಕಟ್ಟಡ ಕಾಮಗಾರಿಯಲ್ಲಿ ಭ್ರಷ್ಟಾಚಾರ ಖಂಡಿಸಿ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ

KannadaprabhaNewsNetwork |  
Published : Apr 22, 2025, 01:49 AM IST
ರಾಣಿಬೆನ್ನೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಕೃಷಿ ಮಹಾವಿದ್ಯಾಲಯ ಬಳಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆಯಿಸಿ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲವಾದರೆ ಏ. 28ರಿಂದ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದರು.

ರಾಣಿಬೆನ್ನೂರು: ತಾಲೂಕಿನ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯ ಎರಡನೇ ಮಹಡಿ ಕಟ್ಟಡ ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಕಾರ್ಮಿಕರಿಗೆ ವೇತನ ನೀಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಸೋಮವಾರ ಕೃಷಿ ಮಹಾವಿದ್ಯಾಲಯ ಬಳಿ ಪ್ರತಿಭಟನೆ ನಡೆಸಲಾಯಿತು. ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಕೃಷಿ ಮಹಾವಿದ್ಯಾಲಯದ ಎರಡನೇ ಮಹಡಿ ಕಟ್ಟಡ ಕಾಮಗಾರಿ ಟೆಂಡರ್ ಬೆಂಗಳೂರಿನ ಬಾಲಾಜಿ ಪ್ರೊಜೆಕ್ಟ್ ಪ್ರೈವೆಟ್ ಲಿಮಿಡೆಟ್ ಕಂಪನಿಗೆ ಲಭಿಸಿದ್ದು, ಇದಕ್ಕಾಗಿ ಸರ್ಕಾರ ಅವರಿಗೆ 2023- 24ನೇ ಸಾಲಿನಲ್ಲಿ ₹10 ಕೋಟಿ ಹಣವನ್ನು ಬಿಡುಗಡೆ ಮಾಡಿತ್ತು.

ಬಾಲಾಜಿ ಕಂಪನಿಯವರು ಸಮಕ್ಷ ಟೆಕ್ನಾಲಜಿಯ ಸತೀಶ ಭಟ್ಟರಿಗೆ ಉಪಗುತ್ತಿಗೆ ನೀಡಿದ್ದರು. ಆದರೆ ಕೆಲಸ ಮುಗಿದ ನಂತರ ಬಾಲಾಜಿ ಕಂಪನಿಯವರು ಸಮಕ್ಷ ಟೆಕ್ನಾಲಜಿಯವರಿಗೆ ಕಾಮಗಾರಿ ಮಾಡಿದ ಹಣದಲ್ಲಿ ಸುಮಾರು ₹2.5 ಕೋಟಿ ಬಾಕಿ ಉಳಿಸಿಕೊಂಡು ಬೇರೆಯವರಿಗೆ ಕೆಲಸ ನೀಡಿದ್ದಾರೆ.

ಇದೀಗ ಅಲ್ಲಿ ಎಲ್ಲ ಕೆಲಸಗಳು ಮುಗಿದಿದ್ದು, ಒಂದು ವಾರದ ಅವಧಿಯ ಕೆಲಸ ಮಾತ್ರ ಬಾಕಿ ಉಳಿದಿದೆ. ಆರೋಗ್ಯ ಇಲಾಖೆ ಎಂಜಿನಿಯರ್ ಅಜಿತ್ ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯ ಮತ್ತು ಗೆಸ್ಟ್ ಹೌಸ್ ಕಟ್ಟಲು ಸತತ 2 ವರ್ಷ ಕಾರ್ಮಿಕರನ್ನು ಬಳಕೆ ಮಾಡಿಕೊಂಡು ಮೋಸ ಮಾಡಿ ಹಣ ಕೊಡದೆ ಸತಾಯಿಸಿದ್ದಾರೆ ಎಂದು ಆರೋಪಿಸಿದರು.

ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಕರೆಯಿಸಿ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲವಾದರೆ ಏ. 28ರಿಂದ ಅಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಸೀರ್‌ಅಹ್ಮದ್ ಸೈಯ್ಯದ್, ಶಿವಪುತ್ರಪ್ಪ ಮೆಡ್ಲೇರಿ, ಮಂಜುನಾಥ ಗುಡ್ಡಣ್ಣನವರ, ರಾಜೇಶ ಅಂಗಡಿ, ಮಂಜುನಾಥ ಸಂಬೋಜಿ, ಅನೀರ್ ರಾಯಚೂರ, ಪ್ರಭುದೇವ ಕದರಮಂಡಲಗಿ, ಎ.ಬಿ. ಮಂಜಪ್ಪ, ಸುನೀಲ ಕೊಳ್ಳಿ, ಪರಸಪ್ಪ ಕಕ್ಕರಗೊಳ, ಮಾಲತೇಶ ದೊಡ್ಮನಿ, ವಿರೂಪಾಕ್ಷಪ್ಪ ಜಿ., ಪ್ರಕಾಶ ಕೂನಬೇವ, ರಾಜು ಬಿದರಿ, ಲಲಿತಾ ಲಮಾಣಿ, ಲಕ್ಷ್ಮವ್ವ ಲಮಾಣಿ, ರೇಣುಕಾ ಮುದ್ದಿ, ಪ್ರದೀಪ ಬಳ್ಳಾರಿ ಮತ್ತಿತರರಿದ್ದರು.ಜಾತ್ರೆ ಪ್ರಯುಕ್ತ ರಕ್ತದಾನ, ಕಬಡ್ಡಿ ಪಂದ್ಯಾವಳಿ

ಶಿಗ್ಗಾಂವಿ: ತಾಲೂಕಿನ ಬನ್ನೂರ ಗ್ರಾಮದಲ್ಲಿ ಏ. ೨೯ರಂದು ಜರುಗಲಿರುವ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಕ್ತದಾನ ಶಿಬಿರ ಮತ್ತು ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ ಎಂದು ಧರ್ಮಗೌಡ ಪೊಲೀಸಪಾಟೀಲ ತಿಳಿಸಿದರು.ತಾಲೂಕಿನ ಬನ್ನೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಅಭಿವೃದ್ಧಿ ಸಮಿತಿ ಬನ್ನೂರ ಇವರ ಆಶ್ರಯದಲ್ಲಿ ಏ. ೨೯ರಂದು ಬೆಳಗ್ಗೆ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ನಿವೃತ್ತ ವೈದ್ಯಾಧಿಕಾರಿ ಡಾ. ಹನುಮಂತಪ್ಪ ಪಿ.ಎಚ್., ಹಾವೇರಿಯ ರಕ್ತನಿಧಿ ವೈದ್ಯಾಧಿಕಾರಿ ಡಾ. ಬಸವರಾಜ ತಳವಾರ, ಅಕ್ಕಿಆಲೂರಿನ ರಕ್ತ ಸೈನಿಕ ಕರಬಸಪ್ಪ ಗೊಂದಿ, ಶಿಗ್ಗಾಂವಿ ಸಾರ್ವಜನಿಕ ಆಸ್ಪತ್ರೆಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಸೌಭಾಗ್ಯ ದೊಡ್ಡಮನಿ ಭಾಗವಹಿಸಲಿದ್ದಾರೆ. ಸಾಯಂಕಾಲ ೬೫ ಕೆಜಿ ಒಳಗಿನ ಯುವಕರಿಗೆ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಜಾತ್ರೆ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀಕಾಂತಗೌಡ ದುಂಡಿಗೌಡ್ರ, ಶಂಕರಗೌಡ ಪೊಲೀಸಗೌಡ್ರ, ಶಿದ್ದನಗೌಡ ಪೊಲೀಸಗೌಡ್ರ, ಗಂಗನಗೌಡ ಪೊಲೀಸಗೌಡ್ರ, ಬಸಪ್ಪ ನೀಲಪ್ಪ ಕುಲಕರ್ಣಿ, ಚನ್ನವೀರಗೌಡ ಪೊಲೀಸಪಾಟೀಲ, ಗೋಪಾಲಗೌಡ ಹೊನ್ನಗೌಡ್ರ, ಮೇಘರಾಜಗೌಡ ಪೊಲೀಸಗೌಡ್ರ, ತ್ರಿಲೋಕನಗೌಡ ಪಾಟೀಲ, ಶಂಕರಗೌಡ ಪೊಲೀಸಗೌಡ್ರ, ಅಭಿ ಹೊನ್ನಪ್ಪನವರ, ಮುತ್ತಪ್ಪ ಭಜಂತ್ರಿ ಸೇರಿದಂತೆ ಗ್ರಾಮಸ್ಥರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ