ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿದ್ಯುತ್‌ ಗುತ್ತಿಗೆದಾರರ ಪ್ರತಿಭಟನೆ

KannadaprabhaNewsNetwork |  
Published : Dec 14, 2024, 12:45 AM IST

ಸಾರಾಂಶ

ವಿದ್ಯುತ್‌ ಸ್ವೀಕರಣ ಕೇಂದ್ರಗಳ ಪಾಳಿ ಮತ್ತು ಲಘು ನಿರ್ವಹಣಾ ಕೆಲಸಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಟೆಂಡರ್‌ ಮೂಲಕ ಕಾರ್ಯಾದೇಶ ನೀಡಲು ಸೂಕ್ತ ಹಾಗೂ ಸಮರ್ಪಕ ಟೆಂಡರ್‌ ದಸ್ತಾವೇಜುಗಳನ್ನು ಅಳವಡಿಸಿಕೊಳ್ಳುವಂತೆ ಹಾಗೂ ರಾಜ್ಯದ ಸೂಪರ್ ಗ್ರೇಡ್‌ ವಿದ್ಯುತ್‌ ಗುತ್ತಿಗೆದಾರರ ಹಿತರಕ್ಷಿಸುವಂತೆ ಇಂಧನ ಸಚಿವರಿಗೆ ಹಾಗೂ ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಶಿಫಾರಸ್‌ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸೂಪರ್‌ಗ್ರೇಡ್‌ ವಿದ್ಯುತ್‌ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ವಿದ್ಯುತ್‌ ಗುತ್ತಿಗೆದಾರರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೆಪಿಟಿಸಿಎಲ್‌ ಟೆಂಡರ್ ಪ್ರಕ್ರಿಯೆಯಲ್ಲಿ ಕನಿಷ್ಠ 1 ವರ್ಷ ಅನುಭವ ಇದ್ದವರಿಗೆ ಮಾತ್ರ ಪರಿಗಣಿಸಬೇಕು. ವಿದ್ಯುತ್ ಗುತ್ತಿಗೆದಾರರ ಸೇವಾಶುಲ್ಕವನ್ನು ಕನಿಷ್ಠ ಶೇ.10ರಷ್ಟು ಅಂದಾಜು ಪಟ್ಟಿಯಲ್ಲಿ ಪರಿಗಣಿಸಿ ಗರಿಷ್ಠ ಆಯ್ಕೆಯನ್ನು ಕೆಟಿಟಿಪಿ ಕಾಯ್ದೆಯಂತೆ ಗುತ್ತಿಗೆದಾರರಿಗೆ ತಮ್ಮ ಲಾಭಾಂಶವನ್ನು ಟೆಂಡರ್‌ ಪ್ರಕ್ರಿಯೆಯಲ್ಲಿ ನಮೂದಿಸುವುದಕ್ಕೆ ಅನುವು ಮಾಡಿಕೊಡಬೇಕು. ವಿದ್ಯುತ್‌ ಸ್ಥಾವಗಳಲ್ಲಿ ವಿದ್ಯುತ್ ಅಪಘಾತಗಳು ಸಂಭವಿಸಿ ಸಾವು-ನೋವು ಉಂಟಾದಾಗ ಮರಣ ಪರಿಹಾರವನ್ನು ಕೆಪಿಟಿಸಿಎಲ್‌ ಜವಾಬ್ದಾರಿ ತೆಗೆದುಕೊಳ್ಳುವಂತಾಗಬೇಕು. ಟಿಎನ್‌ಪಿ ಮತ್ತು ಕ್ನಸೂಮೆಬಲ್ಸಗಳನ್ನು ಇಲಾಖೆಯಿಂದಲೇ ಕೊಂಡುವಂತೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ