ಸಂಕೇಶ್ವರದಲ್ಲಿ ಖಾಸಗಿ, ಸರ್ಕಾರಿ ವೈದ್ಯರ ಪ್ರತಿಭಟನೆ

KannadaprabhaNewsNetwork |  
Published : Aug 18, 2024, 01:45 AM IST
ಪ್ರತಿಭಠನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸಂಕೇಶ್ವರ ಕೋಲ್ಕತ್ತಾದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು, ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ವೈದ್ಯರ ಮೇಲಾಗುತ್ತಿರುವ ಶೋಷಣೆ ತಡೆಯಲು ವಿಶೇಷ ಕಾನೂನು ರೂಪಿಸುವ ಅಗತ್ಯವಿದೆ ಎಂದು ಐಎಂಎ ಅಧ್ಯಕ್ಷ ಡಾ.ರಮೇಶ ದೊಡಭಂಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಕೋಲ್ಕತ್ತಾದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು, ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ವೈದ್ಯರ ಮೇಲಾಗುತ್ತಿರುವ ಶೋಷಣೆ ತಡೆಯಲು ವಿಶೇಷ ಕಾನೂನು ರೂಪಿಸುವ ಅಗತ್ಯವಿದೆ ಎಂದು ಐಎಂಎ ಅಧ್ಯಕ್ಷ ಡಾ.ರಮೇಶ ದೊಡಭಂಗಿ ಹೇಳಿದರು.

ಕೋಲ್ಕತ್ತಾ ಪಟ್ಟಣದಲ್ಲಿ ವೈದ್ಯೆಯ ಮೇಲಿನ ಕೃತ್ಯ ಖಂಡಿಸಿ ವೈದ್ಯಕೀಯ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೃತ್ತಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ವೈದ್ಯರು ಜನರ ಪ್ರಾಣ ರಕ್ಷಣೆ ಮಾಡುತ್ತಿದ್ದಾರೆ. ವೈದ್ಯರ ಕುರಿತು ಕೆಲವರು ಭಿನ್ನ ಮನಸ್ಥಿತಿ ಹೊಂದಿದ್ದು, ಇದು ಬದಲಾದಾಗ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯವೆಂದರು.

ಡಾ.ಜಯಪ್ರಕಾಶ ಕರಜಗಿ, ಡಾ.ವಿಕಾಸ ಪಾಟೀಲ, ಡಾ.ಶೃತಿ ಹಾವಳ ಮಾತನಾಡಿದರು. ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘಟನೆ ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಉಪತಹಹಸೀಲ್ದಾರ್‌ ಸಿ.ಎ.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಹಿನ್ನಲೆ ಪಟ್ಟಣದ ಎಲ್ಲ ಆಸ್ಪತ್ರೆಗಳು ಹೊರರೋಗಿ ಚಿಕಿತ್ಸೆಯನ್ನು ಬಂದ್‌ ಮಾಡಿದ್ದರಿಂದ ರೋಗಿಗಳು ಪರದಾಡುವಂತಾಯಿತು.ಸಮುದಾಯ ಆರೋಗ್ಯ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ.ದತ್ತಾತ್ರೇಯ ದೊಡಮನಿ, ಡಾ.ನಂದಕುಮಾರ ಹವಳ, ಡಾ.ವಿಕಾಸ ಪಾಟೀಲ, ಡಾ.ಮಂದಾರ ಹವಳ, ಡಾ.ಆಶಾ ಪಾಟೀಲ, ಡಾ.ಶೀಥಲ ಬಿಡೆ, ಡಾ.ಸ್ವಪ್ನಾ ನೇಸರಿ ಹಾಗೂ ಪಟ್ಟಣದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!