ಮಹಿಳೆ ದೂರು ಸ್ವೀಕರಿಸದ ಠಾಣೆ ನಿರೀಕ್ಷಕರ ವಿರುದ್ಧ ಆ.8 ರಂದು ಪ್ರತಿಭಟನೆ: ಜಿ.ಪವಿತಾ

KannadaprabhaNewsNetwork |  
Published : Sep 29, 2026, 01:45 AM IST
28ಕೆಎಂಎನ್ ಡಿ21 | Kannada Prabha

ಸಾರಾಂಶ

ಕಿಕ್ಕೇರಿ ಪೊಲೀಸ್ ನಿರೀಕ್ಷಕ ಎಸ್.ಎನ್. ಜಯರಾಮು ಗಾಣದಹಳ್ಳಿ ಸರ್ವೇ 8/1ರಲ್ಲಿನ 22 ಗುಂಟೆ ಕೃಷಿ ಭೂಮಿಯನ್ನು ಅದೇ ಗ್ರಾಮದ ಅನಸೂಯಮ್ಮರಿಂದ ಮೋಹನ್ ಕುಮಾರ್ ಕ್ರಯಕ್ಕೆ ಬರೆಸಿಕೊಂಡಿದ್ದಾರೆ. ಇಬ್ಬರು ನೆರೆಹೊರೆಯವರಾಗಿದ್ದು ಮೋಹನ್ ಕುಮಾರ್ ಮಾತುಕತೆಯಂತೆ ನೀಡಬೇಕಾದಷ್ಟು ಹಣವನ್ನು ಕೊಡದೆ ಅನಸೂಯಮ್ಮ ಅವರಿಂದ ಜಮೀನನ್ನು ಕ್ರಯಕ್ಕೆ ಮಾಡಿಸಿಕೊಂಡು ಸತಾಯಿಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಮಸ್ಯೆ ಹೇಳಿಕೊಂಡು ಹೋದ ಶ್ರೀಸಾಮಾನ್ಯರ ದೂರು ಸ್ವೀಕರಿಸದೆ ದುರ್ವರ್ತನೆ ತೋರಿದ ಕಿಕ್ಕೇರಿ ಪೊಲೀಸ್ ನಿರೀಕ್ಷಕರ ಅಮಾನತ್ತಿಗೆ ಒತ್ತಾಯಿಸಿ ಅ.8ರಂದು ಕಿಕ್ಕೇರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರ್ನಾಟಕ ದಮನಿತ ಸೇನಾ ಸಮಿತಿ ರಾಜ್ಯಾಧ್ಯಕ್ಷೆ ಜಿ.ಪವಿತ್ರಾ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಕ್ಕೇರಿ ಪೊಲೀಸ್ ನಿರೀಕ್ಷಕ ಎಸ್.ಎನ್. ಜಯರಾಮು ಗಾಣದಹಳ್ಳಿ ಸರ್ವೇ 8/1ರಲ್ಲಿನ 22 ಗುಂಟೆ ಕೃಷಿ ಭೂಮಿಯನ್ನು ಅದೇ ಗ್ರಾಮದ ಅನಸೂಯಮ್ಮರಿಂದ ಮೋಹನ್ ಕುಮಾರ್ ಕ್ರಯಕ್ಕೆ ಬರೆಸಿಕೊಂಡಿದ್ದಾರೆ. ಇಬ್ಬರು ನೆರೆಹೊರೆಯವರಾಗಿದ್ದು ಮೋಹನ್ ಕುಮಾರ್ ಮಾತುಕತೆಯಂತೆ ನೀಡಬೇಕಾದಷ್ಟು ಹಣವನ್ನು ಕೊಡದೆ ಅನಸೂಯಮ್ಮ ಅವರಿಂದ ಜಮೀನನ್ನು ಕ್ರಯಕ್ಕೆ ಮಾಡಿಸಿಕೊಂಡು ಸತಾಯಿಸುತ್ತಿದ್ದಾರೆ ಎಂದರು.

ಹಣಕ್ಕೆ ಒತ್ತಾಯಿಸುತ್ತಿದ್ದ ಅನಸೂಯಮ್ಮ ಅವರ ಮೇಲೆ ಮೋಹನ್ ಕುಮಾರ್ ಕಿಕ್ಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೋಹನ್ ಕುಮಾರ್ ನೀಡಿದ ದೂರಿಗೆ ಪ್ರತಿದೂರು ನೀಡಿ ಕೊಟ್ಟ ಮಾತಿನಂತೆ ತಮ್ಮ ಜಮೀನು ಬಾಬ್ತು ಹಣ ಕೊಡಿಸುವಂತೆ ಪೊಲೀಸ್ ಠಾಣೆಗೆ ನ್ಯಾಯಕ್ಕಾಗಿ ಹೋದ ಅನಸೂಯಮ್ಮ ಅವರ ದೂರು ಸ್ವೀಕರಿಸದ ಠಾಣೆ ನಿರೀಕ್ಷಕರ ಕ್ರಮವನ್ನು ಖಂಡಿಸಿದರು.

ಅನಸೂಯಮ್ಮರನ್ನು ರಾತ್ರಿವರೆಗೂ ಯಾವುದೇ ವಿಚಾರಣೆ ನಡೆಸದೆ ಕಾಯ್ದಿರಿಸಿ ಏರುಧ್ವನಿಯಲ್ಲಿ ಮಾತನಾಡಿ ಉದ್ದಟತನ ಪ್ರದರ್ಶಿಸಿದ್ದಾರೆ. ನ್ಯಾಯ ಕೇಳಲು ಬಂದವರ ದೂರು ಸ್ವೀಕರಿಸದೆ ಪೊಲೀಸರು ಕರ್ತವ್ಯ ಲೋಪ ಮಾಡಿದ್ದಾರೆ ಎಂದು ದೂರಿದರು.

ಈ ಕುರಿತು ಈಗಾಲೇ ರಾಜ್ಯ ಗೃಹ ಮಂತ್ರಿಗಳಿಗೆ, ಮುಖ್ಯ ಕಾರ್ಯದರ್ಶಿಗಳಿಗೆ , ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿಗಳು ವಿಭಾಗೀಯ ಪೊಲೀಸ್ ಅಧಿಕಾರಿಗಳಿಗೂ ಲಿಖಿತ ದೂರು ನೀಡಿದ್ದು, ಕರ್ತವ್ಯ ಲೋಪ ಎಸಗಿರುವ ಪಿ.ಐ ಜಯರಾಂ ಅವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಮನಿತರ ಸೇನಾ ಸಮಿತಿ ಅ.8 ರಂದುರಂದು ಕಿಕೇರಿ ಠಾಣೆ ಎದುರು ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ಸಮಿತಿ ರಾಜ್ಯಧ್ಯಕ್ಷೆ ಜಿ.ಪವಿತ್ರಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಮನಿತ ಸೇನಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಬೆಂಗಳೂರಿನ ಗೋವಿಂದರಾಜು, ತುಮಕೂರು ಘಟಕದ ಜಿಲ್ಲಾಧ್ಯಕ್ಷ ಪ್ರತಾಪ ಪಾಳೇಗಾರ, ತಿಪಟೂರು ತಾಲೂಕು ಘಟಕದ ಅಧ್ಯಕ್ಷ ಜಯಕುಮಾರ್ ಹಾಗೂ ಗಾಣದಹಳ್ಳಿಯ ಮಂಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಾವರಿ ಯೋಜನೆ ಜಾರಿಗೆ ಸರ್ಕಾರ ಬದ್ಧ
ಕೆರೆಗಳ ಸಂರಕ್ಷಣೆ, ಅಭಿವೃದ್ಧಿಗೆ ಅಗತ್ಯ ಕ್ರಮ