ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದಲ್ಲಿ ಸೋಮವಾರ ನೂತನವಾಗಿ ಕಾರ್ಯಾರಂಭಗೊಂಡ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಘಾಟಿಸಿ ಮಾತನಾಡಿ, ನೈಸ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಟೋಲ್ ಸಂಗ್ರಹ ಸೇರಿದಂತೆ ಹಲವು ವಿಚಾರಗಳನ್ನು ನಾನು ಈ ಹಿಂದೆ ಪ್ರಶ್ನಿಸಿದ್ದೇನೆ. ನ್ಯಾಯಾಲಯಗಳು ನೀಡಿರುವ ತೀರ್ಪು ಹಾಗೂ ನಿರ್ದೇಶನಗಳನ್ನು ಗಮನಿಸಬೇಕು. ನಾಡಿನ ಸಂಪತ್ತಿನ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಆದರೆ, ನ್ಯಾಯಾಲಯದ ಆದೇಶಗಳಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಮರೆ ಮಾಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಈ ವಿಚಾರವಾಗಿ ಮುಂದಿನ ದಿನಗಳಲ್ಲಿ ಮಾಧ್ಯಮಗಳ ಮುಂದೆ ಮತ್ತಷ್ಟು ಮಾಹಿತಿ ನೀಡುವುದಾಗಿ ಹೇಳಿದರು.
ಶಾಸಕ ಕೆ.ಎಂ.ಉದಯ್ ಹಾಗೂ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸದ ಕೇಂದ್ರ ಸಚಿವರು, ಪಿಕ್ ಪಾಕೆಟ್ ಮಾಡುವವರು ಹಾಗೂ ಯುವಕರನ್ನು ದಾರಿ ತಪ್ಪಿಸಿ ಆನ್‌ಲೈನ್ ಮಟ್ಕಾ ದಂಧೆ ನಡೆಸುವವರ ಬಗ್ಗೆ ತಾನು ಉತ್ತರಿಸಬೇಕೇ ಎಂದು ಪ್ರಶ್ನೆ ಮಾಡಿದರು.ಕಾಂಗ್ರೆಸ್ ನಾಯಕರು ಹೇಳಿದಂತೆ ಮುಖ್ಯ ಚುನಾವಣಾಧಿಕಾರಿಯನ್ನು ಬದಲಾವಣೆ ಮಾಡಲು ಸಾಧ್ಯವೇ?. ರಾಜ್ಯದ ಮತದಾರರ ಪಟ್ಟಿ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆ ಕುರಿತು ಈಗಾಗಲೇ ಚುನಾವಣಾ ಆಯೋಗದಿಂದ ವಿವಿಧ ಮಾಹಿತಿ ಹೊರಬಂದಿದೆ. ಸೆಪ್ಟೆಂಬರ್ ಆರಂಭದ ವೇಳೆಗೆ ಲಕ್ಷಾಂತರ ನೋಟಿಸ್‌ಗಳನ್ನು ಸಿದ್ಧಪಡಿಸಿ ಮತದಾರರಿಗೆ ವಿತರಿಸಲಾಗುತ್ತಿದೆ ಎಂದರು.
ಈಗಿನ ಸರ್ಕಾರದ ನಡುವಳಿಕೆಯನ್ನು ಜನ ಗಮನಿಸುತ್ತಿದ್ದಾರೆ. ನಾನು ರಾಜ್ಯಕ್ಕೆ ಬರಬೇಕು ಅನ್ನೋದು ಜನರ ದೊಡ್ಡ ಮಟ್ಟದ ಕೂಗಿದೆ. ನಮ್ಮ ಪಕ್ಷದ ಅಭಿಮಾನಿಗಳಲ್ಲದೆ ಬೇರೆ ಪಕ್ಷದವರ ಭಾವನೆ ಕೂಡ ಇದೇ ಆಗಿದೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಮಾಡುತ್ತೇನೆ ಎಂದರು.
ಈ ವೇಳೆ ಶಾಸಕ ಎಚ್.ಟಿ ಮಂಜು, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಮುಖಂಡ ರಾಮಚಂದ್ರು, ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ದಶರಥ್, ಯುವ ಜೆಡಿಎಸ್ ಮುಖಂಡ ಕಡತನಾಳು ಸಂಜಯ್, ಮುಖಂಡರಾದ ಶಿವಸ್ವಾಮಿ, ಪುರಸಭಾ ಮಾಜಿ ಸದಸ್ಯರಾದ ಎಸ್.ಪ್ರಕಾಶ್, ಸಾಯಿಕುಮಾರ್, ಕಾಯಿ ವೆಂಕಟೇಶ್, ಕೆ.ಶೆಟ್ಟಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಬೋರಪ್ಪ, ಬೆಳಗೋಳ ಸುರೇಶ್, ಪೈ.ಮುಕುಂದ, ಟೆಂಪೊ ಪ್ರಕಾಶ್, ಸೇರಿದಂತೆ ಇತರರು ಇದ್ದರು.