ಕುಡಿಯವ ನೀರಿಗೆ ಕಲುಷಿತ ನೀರು ಮಿಶ್ರಣ; ಪ್ರತಿಭಟನೆ

KannadaprabhaNewsNetwork |  
Published : Nov 25, 2025, 02:00 AM IST
24ಕೆಎಂಎನ್ ಡಿ25 | Kannada Prabha

ಸಾರಾಂಶ

ಶ್ರೀರಂಗಪಟ್ಟಣ ಪಟ್ಟಣ ಹಾಗೂ ಗಂಜಾಂಗೆ ಕುಡಿಯಲು ಶುದ್ಧ ನೀರು ಸರಬರಾಜು ಮಾಡದೇ ಕಾವೇರಿ ನದಿಗೆ ಮೈಸೂರಿನಿಂದ ಬಂದ ಸೇರುವ ಕಲುಷಿತ ನೀರಿನ ಬಳಿಯಲ್ಲೇ ಜಾಕ್ವಾಲ್ ಅಳವಡಿಸಿ ಯಂತ್ರಗಳ ಘಟಕ ನಿರ್ಮಾಣ ಮಾಡಿದ್ದು, ಮಿಶ್ರಗೊಂಡ ಕಲುಷಿತ ನೀರನ್ನೇ ಕುಡಿಯಲು ಸರಬರಾಜು ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಜನರಿಗೆ ಕುಡಿಯಲು ಸರಬರಾಜು ಆಗುವ ನೀರು ಸರಬರಾಜು ಘಟಕವನ್ನು ಬದಲಾಯಿಸುವಂತೆ ಒತ್ತಾಯಿಸಿ ಗಂಜಾಂ ನಾಗರಿಕರು ಪಟ್ಟಣ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.

ನಾಗರಿಕ ಹಿತಾ ಶಕ್ತಿ ವೇದಿಕೆ ಅಧ್ಯಕ್ಷ ಮದನ್ ರಾವ್ ನೇತೃತ್ವದಲ್ಲಿ ಕಾರ್ಯಕರ್ತರು ಪಟ್ಟಣ ಪುರಸಭೆ ಮುಂಭಾಗ ಸೇರಿದ ನಿವಾಸಿಗಳು ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರನ್ನು ಒದಗಿಸಲಾಗುತ್ತಿದೆ. ಅದಕ್ಕೆ ಮೀಟರ್ ಅಳವಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಹಾಗೂ ಗಂಜಾಂಗೆ ಕುಡಿಯಲು ಶುದ್ಧ ನೀರು ಸರಬರಾಜು ಮಾಡದೇ ಕಾವೇರಿ ನದಿಗೆ ಮೈಸೂರಿನಿಂದ ಬಂದ ಸೇರುವ ಕಲುಷಿತ ನೀರಿನ ಬಳಿಯಲ್ಲೇ ಜಾಕ್ವಾಲ್ ಅಳವಡಿಸಿ ಯಂತ್ರಗಳ ಘಟಕ ನಿರ್ಮಾಣ ಮಾಡಿದ್ದು, ಮಿಶ್ರಗೊಂಡ ಕಲುಷಿತ ನೀರನ್ನೇ ಪಟ್ಟಣ ಸೇರಿದಂತೆ ಗಂಜಾಂಗೆ ಕಾವೇರಿ ನೀರು ಎಂದು ಹೇಳಿ ಕುಡಿಯಲು ಸರಬರಾಜು ಮಾಡುವ ಪುರಸಭೆ ಅಧಿಕಾರಿಗಳ ಕ್ರಮವನ್ನು ಖಂಡಿಸಿದರು.

ಸಾರ್ವಜನಿಕರಿಂದ ಈಗಾಗಲೇ ಟೀಕೆಗೊಳಗಾಗಿರುವ ಈ ಯೋಜನೆಯ ನೀರಿನ ಘಟಕವನ್ನು ಬದಲಾಯಿಸಿ ಶುದ್ಧ ನೀರು ಕೊಡುವುದಾಗಿ ಕಳೆದ ವರ್ಷ ಭರವಸೆ ನೀಡಿದ ಅಧಿಕಾರಿಗಳು ಈಗ ಮತ್ತೆ ಸಬೂಬ್ ಹೇಳುವ ಮೂಲಕ ಕಾಮಗಾರಿ ನಡೆಸದೆ ಅದೇ ಕಲುಷಿತ ನೀರನ್ನೇ ಪಟ್ಟಣ ಜನರಿಗೆ ಕುಡಿಯಲು ಸರಬರಾಜು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪಟ್ಟಣ ಪುರಸಭಾ ವ್ಯಾಪ್ತಿಯ ಪಟ್ಟಣ ಹಾಗೂ ಗಂಜಾಂನ ಮನೆಗಳಿಗೆ ಸರ್ಕಾರದ ಅಮೃತ್ ಯೋಜನೆಯಡಿಯಲ್ಲಿ 2.0 ಮನೆ ಮನೆಗೆ ನೀರು ಸಂಪರ್ಕ ಕಲ್ಪಿಸಲು ಮೀಟರ್ ಅಳವಡಿದ್ದು ಇದನ್ನು ಕೈಬಿಡಬೇಕು. ಜೊತೆಗೆ ಕಲುಷಿತ ನೀರು ಸರಬರಾಜು ಮಾಡದೆ ಶುದ್ದ ನೀರನ್ನು ಗಂಜಾಂ ಜನತೆಗೆ ನೀಡಬೇಕು ಎಂದು ಕಂದಾಯ ಅಧಿಕಾರಿ ಸೋಮಶೇಖರ್ ಅವರಿಗೆ ಮನವಿ ಪತ್ರ ನೀಡಿದರು.

ಪ್ರತಿಭಟನೆಯಲ್ಲಿ ನಾಗರಿಕ ಹಿತಶಕ್ತಿ ವೇದಿಕೆ ಅಧ್ಯಕ್ಷ ಮದನ್‌ರಾವ್, ಉಪಾಧ್ಯಕ್ಷ ಅಭಿಷೇಕ್, ಟಿ.ವಿ. ಮಂಜುನಾಥ್ ರಾಘವೇಂದ್ರ ಬೈರೇಶ್ ಶರಣಿ, ಗಣೇಶ್, ಕೌಶಿಕ್ ಸೇರಿದಂತೆ ಗಂಜಾಂ ಹಾಗೂ ಪಟ್ಟಣದ ನಾಗರೀಕರು ಹಾಜರಿದ್ದರು.

ಮೈಸೂರು ವಿಭಾಗ ಮಟ್ಟದ ಕಾರ್ಯಾಗಾರ ಸಚಿವರಿಂದ ಇಂದು ಉದ್ಘಾಟನೆ

ಮಂಡ್ಯ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಮತ್ತು ಮಂಡ್ಯ ಜಿಲ್ಲಾ ಶಾಖೆ ಸಹಯೋಗದಲ್ಲಿ ಮೂರು ದಿನ ಹಮ್ಮಿಕೊಂಡಿರುವ ಮೈಸೂರು ವಿಭಾಗಮಟ್ಟದ ಕಾಲೇಜು ವಿದ್ಯಾರ್ಥಿಗಳ ಕಾರ್ಯಾಗಾರವನ್ನು ನ.25ರಂದು ನಗರದ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ.ಶಾಸಕ ಪಿ.ರವಿಕುಮಾರ್‌ ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ವಿತರಿಸುವರು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಎನ್. ಮಂಜುಶ್ರೀ ಯೂತ್ ರೆಡ್‌ಕ್ರಾಸ್ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಸಭಾಪತಿ ಬಸ್ರೂರ್ ರಾಜೀವ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಉಪಸಭಾಪತಿ ಡಾ.ಶ್ರೀನಿವಾಸ್ ಹ್ಯಾಟಿ, ಜಿಲ್ಲಾ ಶಾಖೆ ಅಧ್ಯಕ್ಷರಾದ ಡೀಸಿ ಡಾ.ಕುಮಾರ, ಜಿಲ್ಲಾ ಎಸ್ಪಿಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಕೆ.ಆರ್. ನಂದಿನಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ, ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ ಕೆ.ಪಿ. ಕೃಷ್ಣಕುಮಾರ್, ಸಂಸ್ಥೆ ಜಿಲ್ಲಾ ಶಾಖೆ ಸಭಾಪತಿ ಡಾ.ಮೀರಾ ಶಿವಲಿಂಗಯ್ಯ ಭಾಗವಹಿಸಲಿದ್ದಾರೆ.

ಕಾರ್ಯಾಗಾರದಲ್ಲಿ ಭಾಗವಹಿಸುವ ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಂಗಳೂರು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಿಂದ 17 ವಿದ್ಯಾರ್ಥಿಗಳಂತೆ 136 ವಿದ್ಯಾರ್ಥಿಗಳು ಹಾಗೂ ಕಾರ್ಯಕ್ರಮಾಧಿಕಾರಿಗಳು ಸೇರಿ ಒಟ್ಟು 150 ಮಂದಿಗೆ ನಗರದ ಎಸ್.ಬಿ.ಸಮುದಾಯ ಭವನದಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ.

PREV

Recommended Stories

ಸಿದ್ದರಾಮಯ್ಯ ಕಾಂಗ್ರೆಸ್‌ ಆಸ್ತಿ: ಡಿಕೆ - ಅವರ ಮಾತೇ ವೇದವಾಕ್ಯ : ಡಿಸಿಎಂ ಡಿ.ಕೆ.ಶಿವಕುಮಾರ್‌
ದಿಲ್ಲಿಯಲ್ಲಿ ಈಗ ಡಿಕೆಶಿ ಪರ ಆಪ್ತ ಶಾಸಕರ ಬಹಿರಂಗ ಲಾಬಿ!