- ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ರಾಜ್ಯೋತ್ಸವ- ಪ್ರಶಸ್ತಿ ವಿತರಣೆ
- - -ದಾವಣಗೆರೆ: ಕರ್ನಾಟಕದ ಕರಾವಳಿ ಜಿಲ್ಲೆಗಳ ಆರಾಧನಾ ಕಲೆ ಯಕ್ಷಗಾನದಲ್ಲಿ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವ ಜೊತೆಗೆ ಭಗವದ್ಗೀತೆಯ ಪರಂಪರೆ ಪರಿಪೂರ್ಣತೆ ಇದೆ. ಆದರೆ, ಇತ್ತೀಚಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಯಕ್ಷಗಾನ ಕಲೆಗೆ ಅವಮಾನ ಮಾಡಿದ್ದು ಖಂಡನೀಯ ಎಂದು ಸುಮುಖ ಯಕ್ಷಗಾನ ಕಲಾಕೇಂದ್ರ ಅಧ್ಯಕ್ಷೆ, ಯಕ್ಷಗಾನ ಕಲಾವಿದೆ ಕಿರಣ್ ರವಿ ಪೈ ಹೇಳಿದರು.
ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಆಯೋಜಿಸಿದ್ದ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ “ಕರ್ನಾಟಕ ಸಿರಿಗನ್ನಡ ಸಿರಿ” ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪೆಥಾಲಜಿ ವಿಭಾಗದ ಮುಖ್ಯಸ್ಥೆ, ವೈದ್ಯ ಸಾಹಿತಿ ಡಾ.ಶಶಿಕಲಾ ಕೃಷ್ಣಮೂರ್ತಿ ಮಾತನಾಡಿ, ಕನ್ನಡ ಭಾಷೆಯು ನಮ್ಮ ಮನದಾಳದಲ್ಲಿ ಇರಬೇಕು. ಆದರೆ, ಕೇವಲ ನವಂಬರ್‌ಗೆ ಸೀಮಿತವಾಗಿದೆ, ಕನ್ನಡ ನಿತ್ಯೋತ್ಸವ ಆಗಬೇಕಾಗಿದೆ ಎಂದರು.
ಕಲಾಕುಂಚದ ಅಧ್ಯಕ್ಷ ಕೆ.ಎಚ್. ಮಂಜುನಾಥ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕವಯತ್ರಿ ನವೀನ ರಾಯ್ಕರ್, ಗೋಕರ್ಣದ ಚಿತ್ರಕಾವಿದೆ. ನವ್ಯ ಮನೋಹರ್ ಪೈ, ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ, ಜ್ಯೋತಿ ಗಣೇಶ ಶೆಣೈ, ಹೇಮಾ ಶಾಂತಪ್ಪ ಪೂಜಾರಿ, ವಸಂತಿ ಮಂಜುನಾಥ, ಕೆ.ಸಿ.ಉಮೇಶ, ಶ್ರೀಮತಿ ಚಂದ್ರಶೇಖರ ಅಡಿಗ, ಲಲಿತಾ ಕಲ್ಲೇಶ, ಶೈಲ ವಿನೋದ ದೇವರಾಜ ಇತರರು ಇದ್ದರು.ವಿದುಷಿ ಸಂಗೀತಾ ರಾಘವೇಂದ್ರ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ 241 ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.
- - --24ಕೆಡಿವಿಜಿ32:
ದಾವಣಗೆರೆಯಲ್ಲಿ ಕಲಾಕುಂಚ ಸಂಸ್ಥೆಯಿಂದ ನಡೆದ ಕರ್ನಾಟಕ ಸಿರಿಗನ್ನಡ ಸಿರಿ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕಿರಣ್ ರವಿ ಪೈ ಉದ್ಘಾಟಿಸಿದರು.