ಕನ್ನಡಪ್ರಭ ವಾರ್ತೆ, ತರೀಕೆರೆ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶಾಖೆ, ತರೀಕೆರೆಯಿಂದ ಶುಕ್ರವಾರ ದಲಿತರ ಭೂಮಿ, ವಸತಿ ಹಕ್ಕು ಮತ್ತು ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು. ಹಕ್ಕೊತ್ತಾಯಗಳುಃ ಎಂ.ಸಿ.ಹಳ್ಳಿ ಗ್ರಾಮದ ಮಲ್ಲಯ್ಯನ ಕೆರೆ ಒತ್ತುವರಿ ತೆರವಿಗೆ 5 ವರ್ಷಗಳಿಂದ ಹಲವು ಬಾರಿ ಮನವಿ ಮಾಡಿದರು ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಿ, ಒತ್ತುವರಿ ತೆರವು ಗೊಳಿಸಬೇಕು. ತರೀಕೆರೆ ತಾಲೂಕಿನ ಬಿ.ರಾಮನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯವರಿಗೆ ಗ್ರಾಮಠಾಣ ಜಾಗಕ್ಕೆ ಹಕ್ಕು ಪತ್ರ ಹಂಚಿಕೆ ಮಾಡುವುದು ಮತ್ತು ವಾಸವಿರುವ ಪರಿಶಿಷ್ಟ ಜಾತಿಯವರಿಗೆ ಖಾಸಗಿ ವ್ಯಕ್ತಿ ಈ ಜಾಗದಿಂದ ಒಕ್ಕಲೆಬ್ಬಿಸಲು ಹುನ್ನಾರ ತಡೆದು ರಕ್ಷಿಸ ಬೇಕು. ಕೋರನಹಳ್ಳಿ ಗ್ರಾಮಠಾಣ ಜಾಗದ ಒತ್ತುವರಿ ತೆರುವುಗೊಳಿಸಿ ದಲಿತರ ನಿವೇಶನಕ್ಕೆ ಈ ಜಾಗ ಕಾಯ್ದಿರಿಸಬೇಕು. ತರೀಕೆರೆ ತಾಲೂಕು ಕಚೇರಿಯಲ್ಲಿ ಪಿಟಿಸಿಎಲ್, ಕಾಯ್ದೆಯಡಿ ಅರ್ಜಿ ಸಲ್ಲಿಸುವ ರೈತರು ಜಮೀನುಗಳ ಮೂಲ ಮಂಜೂ ರಾತಿ ಕಡತಗಳು ನಾಪತ್ತೆ ಯಾಗುತ್ತಿರುವ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥ ಅಭಿಲೇಖಾಲಯದ ಅಧಿಕಾರಿಗಳ ವಿರುದ್ಧ ಕ್ರಮವಹಿಸಬೇಕು. ಲಿಂಗದಹಳ್ಳಿ ಹೋಬಳಿ ಕೆಂಚೇನಹಳ್ಳಿ ಗ್ರಾಮದ ಸರ್ವೆ ನಂ. 12ರಲ್ಲಿ ಅಕ್ರಮವಾಗಿ ಪ್ರಭಾವಿಗಳಿಗೆ ಭೂಮಿ ಮಂಜೂರು ಮಾಡಿದ ಅಧಿಕಾರಿಗಳ ವಜಾ ಮಾಡಬೇಕು ಎಂದು ಆಗ್ರಹಿಸಲಾಯಿತು.ತರೀಕೆರೆ ತಾಲೂಕು ಲಿಂಗದಹಳ್ಳಿ ಹೋಬಳಿ ಕೆಂಚೇನಹಳ್ಳಿ ಗ್ರಾಮದ ಸರ್ವೆ ನಂ. 12 ರಲ್ಲಿ ಪರಿಶಿಷ್ಟ ಜಾತಿ 40 ರೈತರಿಗೆ ಸಾಗುವಳಿ ಪತ್ರದ ಪ್ರಕಾರ ಪಕ್ಕಾಪೋಡಿ ಮಾಡಬೇಕು. ದೋರನಾಳು ಗ್ರಾಮದ ಸರ್ವೆ ನಂಬರ್ 225ರಲ್ಲಿ 12 ಜನ ಪರಿಶಿಷ್ಟ ಜಾತಿಯವರು ಸಾಗುವಳಿ ಮಾಡುತ್ತಿದ್ದು, ಸಾಗುವಳಿ ಪತ್ರ ಮಂಜೂರಾತಿ ನೀಡಬೇಕು. ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಕುಟುಂಬಗಳಿಗೆ ಸ್ಮಶಾನ ಭೂಮಿ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾ. ಪ್ರಧಾನ ಸಂಚಾಲಕ ಎಚ್.ಎಸ್.ರಾಜಪ್ಪ, ಸಂಘಟನಾ ಸಂಚಾಲಕ ಮೌಂಟ್ ಬ್ಯಾಟನ್, ಮಧುಕುಮಾರ್, ರವಿ ಕೆ. ಶಿವಕುಮಾರ್, ಮಧುಕುಮಾರ್ ಮರ್ಜೆ, ವಿಜಯ್ ಕುಡ್ಲೂರು, ಮುನಿಯ ಎನ್. ಖಚಾಂಚಿ ಕುಮಾರ್ ರಂಗೇನಹಳ್ಳಿ, ಮುಖಂಡರಾದ ರಾಮಚಂದ್ರಪ್ಪ, ಸುನೀಲ್, ಅಣ್ಣಯ್ಯ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶಾಖೆ: ತರೀಕೆರೆ, ತರೀಕೆರೆ ತಾಲೂಕು ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.18ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಶಾಖೆ ತರೀಕೆರೆ, ತರೀಕೆರೆ ತಾಲೂಕಿ ನಿಂದ ದಲಿತರ ಭೂಮಿ, ವಸತಿ ಹಕ್ಕು ಮತ್ತು ಇತರೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನಾ ಧರಣಿ ನಡೆಸಲಾಗಿತು. .