ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಿವೇಶನ ಹಂಚಿಕೆಯಲ್ಲಿ ಅನ್ಯಾಯ
ತಾಲೂಕಿ ಕಸಬಾ ಹೋಬಳಿ, ಹಾರೋಬಂಡೆ ಗ್ರಾಮ ಪಂಚಾಯ್ತಿಗೆ ಸೇರಿದ ಜಡೇನಹಳ್ಳಿ ಗ್ರಾಮದ, ಗ್ರಾಮ ಠಾಣಾ ಜಾಗದಲ್ಲಿ ನಿವೇಶನ ಹಂಚಿಕೆ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ನಿವೇಶನದಲ್ಲಿ ಆಗಿರುವ ಅನ್ಯಾಯಸರಿ ಪಡಿಸಿ ಅಕ್ರಮವಾಗಿ ಪಡೆದಿರುವ ನಿವೇಶನಗಳನ್ನು ವಜಾಗೊಳಿಸಿ ಕಾನೂನು ಪ್ರಕಾರ ದಲಿತರಿಗೆ ನಿವೇಶನ, ರಸ್ತೆ ಮತ್ತು ಮೂಲಭೂತ ಸೌಕರ್ಯಗಳು ಒದಗಿಸಿಕೊಬೇಕು ಎಂದರು.ಜಡೇನಹಳ್ಳಿ ಗ್ರಾಮದ ಏರ್‌ಟೆಲ್ ಟವರ್ ಜಾಗ ಗ್ರಾಮಠಾಣಾ ಜಾಗವಾಗಿದ್ದು ಇದಕ್ಕಾಗಿ 35000 ಸಾವಿರ ರು.ಗಳ ಬಾಡಿಗೆ ಮತ್ತು ಮುಂಗಡ 3 ಲಕ್ಷಗಳನ್ನು ಪಡೆದಿದೆ. ಮತ್ತು ಗ್ರಾಮ ಪಂಚಾಯ್ತಿಗೆ ಮೋಸಮಾಡಿ ಸುಮಾರು ಹತ್ತು ವರ್ಷಗಳಿಂದ ಸರ್ಕಾರಿ ಹಣವನ್ನು ಗುಳುಂ ಮಾಡಿದ್ದಾರೆ. ಅದೇ ಜಡೇನಹಳ್ಳಿ ಗ್ರಾಮಠಾಣಾ ಜಾಗವನ್ನು ಪಕ್ಕದ ಊರಿನ ಮಹಿಳೆಯೊಬ್ಬರ ಹೆಸರಿಗೆ ಅಕ್ರಮವಾಗಿ ನೀಡಲಾಗಿದೆ ಎಂದರು.
ಈಗಾಗಲೇ ಹಲವಾರು ಬಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡದವರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು ಮನವಿಗಳನ್ನು ನೀಡಿದ್ದರೂ ಸಹಾ ಇದುವರೆಗೂ ನಮ್ಮ ಮನವಿಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲಾ ಆದುದರಿಂದ ನಮ್ಮ ಬೇಡಿಕೆಗಳ ಈಡೇರಿಕೆಯಾಗುವವರೆಗೂ ಅನಿರ್ದಿಷ್ಟಾವಧಿ ಧರಣಿ ಮುಂದುರೆಯುತ್ತದೆ ಎಂದು ತಿಳಿಸಿದರು.
ಸಿಕೆಬಿ-1 ಚಿಕ್ಕಬಳ್ಳಾಪುರ ನಗರದಲ್ಲಿ ಮಹಾನಾಯಕ ಡಾ.ಬಿ.ಆರ್. ಅಂಬೇಡ್ಕರ್ ಸೇನೆ ವತಿಯಿಂದ ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.