ಹತ್ಯಾಕಾಂಡ ಖಂಡಿಸಿ ಇಂದು ಪ್ರತಿಭಟನೆ

KannadaprabhaNewsNetwork |  
Published : Apr 24, 2025, 11:45 PM IST
24ಎಚ್ಎಸ್ಎನ್3 : ಹೊಳೆನರಸೀಪುರದ ಪಟ್ಟಣದ ಶ್ರೀ ರಾಮಬ್ರಹ್ಮಾನಂದ ಪ್ರವಚನ ಮಂದಿರದಲ್ಲಿ ಹಿಂದು ರಕ್ಷಣಾ ಸಮಿತಿಯ ಮುಖಂಡರಾದ ಹೊ.ಸು.ರಮೇಶ್, ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ ಹಾಗೂ ಇತರರ ನೇತೃತ್ವದಲ್ಲಿ ಹಿಂದೂ ಸಮಾಜ ಬಾಂಧವರ ತುರ್ತು ಸಭೆ ನಡೆಸಲಾಯಿತು. | Kannada Prabha

ಸಾರಾಂಶ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದುಗಳನ್ನೇ ಗುರಿಯಾಗಿ ಇರಿಸಿಕೊಂಡು ನಡೆದ ಭಯೋತ್ಪಾದಕ ಉಗ್ರರ ದಾಳಿಗೆ ತಕ್ಕ ಪ್ರತಿ ಉತ್ತರ ನೀಡುವ ಜತೆಗೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಜಿಹಾದಿಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಆಕ್ರಮಣ ಖಂಡಿಸಿ ಪಟ್ಟಣದಲ್ಲಿ ಏಪ್ರಿಲ್ ೨೫ರ ಶುಕ್ರವಾರ ಬೆಳಗ್ಗೆ ೧೦ ಗಂಟೆಯಿಂದ ಪ್ರತಿಭಟನೆ ನಡೆಸಲು ಸಭೆ ಒಮ್ಮತದಿಂದ ಸಮ್ಮತಿ ಸೂಚಿಸಿದೆ ಎಂದು ಹಿಂದು ರಕ್ಷಣಾ ಸಮಿತಿಯ ಮುಖಂಡ ಹೊ.ಸು.ರಮೇಶ್ ತಿಳಿಸಿದರು. ಪ್ರತಿಭಟನೆಯಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ನಮ್ಮ ಶಕ್ತಿ ಹಾಗೂ ಒಗ್ಗಟ್ಟು ತೋರಬೇಕಿದೆ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡು ಉಗ್ರರ ನಿರ್ನಾಮಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಲ್ಲರೂ ಭಾಗಿಯಾಗೋಣವೆಂದು ಕರೆಕೊಟ್ಟರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದುಗಳನ್ನೇ ಗುರಿಯಾಗಿ ಇರಿಸಿಕೊಂಡು ನಡೆದ ಭಯೋತ್ಪಾದಕ ಉಗ್ರರ ದಾಳಿಗೆ ತಕ್ಕ ಪ್ರತಿ ಉತ್ತರ ನೀಡುವ ಜತೆಗೆ ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಜಿಹಾದಿಗಳಿಂದ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಆಕ್ರಮಣ ಖಂಡಿಸಿ ಪಟ್ಟಣದಲ್ಲಿ ಏಪ್ರಿಲ್ ೨೫ರ ಶುಕ್ರವಾರ ಬೆಳಗ್ಗೆ ೧೦ ಗಂಟೆಯಿಂದ ಪ್ರತಿಭಟನೆ ನಡೆಸಲು ಸಭೆ ಒಮ್ಮತದಿಂದ ಸಮ್ಮತಿ ಸೂಚಿಸಿದೆ ಎಂದು ಹಿಂದು ರಕ್ಷಣಾ ಸಮಿತಿಯ ಮುಖಂಡ ಹೊ.ಸು.ರಮೇಶ್ ತಿಳಿಸಿದರು.ಪಟ್ಟಣದ ಶ್ರೀ ರಾಮಬ್ರಹ್ಮಾನಂದ ಪ್ರವಚನ ಮಂದಿರದಲ್ಲಿ ಹಿಂದೂ ಸಮಾಜ ಬಾಂಧವರ ತುರ್ತು ಸಭೆಯಲ್ಲಿ ಸಮಾನ ಮನಸ್ಕರ ಜತೆಗೆ ಪೆಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಉಗ್ರರ ದಾಳಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲಿನ ಕೌರ್ಯದ ವಿಷಯಗಳ ಕುರಿತು ಚರ್ಚೆ ನಡೆಸಿದ ಬಳಿಕ ಮಾತನಾಡಿದರು. ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರು ವ್ಯಕ್ತಿಯ ಹೆಸರು, ಐಡಿ ಹಾಗೂ ದೇಹದ ಅಂಗಾಗ ನೋಡಿ ಹಿಂದೂ ಎಂದು ದೃಢಪಟ್ಟ ನಂತರ ದಾಳಿ ನಡೆಸಿ ಕೊಂದಿದ್ದಾರೆ ಎನ್ನುವುದು ಬಹಳ ಕ್ರೂರತೆಯಿಂದ ಕೂಡಿದೆ. ಆದ್ದರಿಂದ ಪಕ್ಷಾತೀತವಾಗಿ ಹಿಂದೂ ಬಾಂಧವರು ನಮ್ಮ ಕುಟುಂಬ ಸದಸ್ಯರ ಹತ್ಯೆ ಖಂಡಿಸುವ ಜತೆಗೆ ಪಶ್ಚಿಮ ಬಂಗಾಳದಲ್ಲಿ ನಿರಂತರವಾಗಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ನಡೆಸುವ ಪ್ರತಿಭಟನೆಯಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ನಮ್ಮ ಶಕ್ತಿ ಹಾಗೂ ಒಗ್ಗಟ್ಟು ತೋರಬೇಕಿದೆ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡು ಉಗ್ರರ ನಿರ್ನಾಮಕ್ಕೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಲ್ಲರೂ ಭಾಗಿಯಾಗೋಣವೆಂದು ಕರೆಕೊಟ್ಟರು.

ವರ್ತಕರ ಸಂಘದ ಕಾರ್ಯದರ್ಶಿ ಭರತ್ ಅವರು ಹುತಾತ್ಮರ ಗೌರವಾರ್ಥ ಮತ್ತು ನಿಮ್ಮ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಧ್ಯಾಹ್ನ ೧೨ ಗಂಟೆಯ ತನಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಭಾಗಿಯಾಗುತ್ತೇವೆ ಎಂದರು.

ಸಭೆಯಲ್ಲಿ ಪುರಸಭಾಧ್ಯಕ್ಷ ಎಚ್.ಕೆ.ಪ್ರಸನ್ನ, ಪುರಸಭೆ ಮಾಜಿ ಅಧ್ಯಕ್ಷ ಕೆ.ಶ್ರೀಧರ್, ಹಿರಿಯರಾದ ಸುಕುಮಾರ್, ರಾಘವೇಂದ್ರ, ರಂಗನಾಥ್, ಮುತ್ತುರಾಜ್, ವಾಸುದೇವಮೂರ್ತಿ, ಗೋಕುಲ್ ಎಸ್., ಡಾ. ಹರ್ಷ, ಮಯೂರ್ ಮಂಜು, ಕಿಶೋರ್, ಬಾಬು, ರಮೇಶ್, ದಯಾನಂದ, ನಾಗೇಂದ್ರ, ಯೋಗಾನರಸಿಂಹ, ಮಳಲಿ ನಾರಾಯಣ್, ಕಡುವಿನಕೋಟೆ ಲೋಕೇಶ್ ಹಾಗೂ ನಿದರ್ಶನ್, ಭೀಮನಹಳ್ಳಿ ರಾಜು, ಭಗವಾನ್, ಕಾದಲನ್ ಕೃಷ್ಣ, ಪ್ರದೀಪ್‌ರಾಜ್, ಬೇಕರಿ ಪ್ರಸನ್ನ, ಪ್ರದೀಪ್, ಮೆಡಿಕಲ್ಸ್ ರಾಘು, ಸುಬ್ರಮಣ್ಯ, ಇತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ