ಮುಗ್ಧ ಹಿಂದುಗಳ ಹತ್ಯೆ ಖಂಡಿಸಿ ವಕೀಲರಿಂದ ಕಲಾಪ ಬಹಿಷ್ಕಾರ

KannadaprabhaNewsNetwork | Published : Apr 24, 2025 11:45 PM

ಸಾರಾಂಶ

ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಈ ದೇಶದಲ್ಲಿ ಭಯೋತ್ಪಾದಕರು ಘೋರಕೃತ್ಯ ನಡೆಸುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ಎಚ್ಚೆತ್ತು ಹಿಂದುಗಳು ಒಗ್ಗಟ್ಟು ಪ್ರದರ್ಶನ ಮಾಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರಿಂದ ಮುಗ್ಧ ಹಿಂದುಗಳ ಹತ್ಯೆ ಖಂಡಿಸಿ ಪಟ್ಟಣದ ವಕೀಲರು ಗುರುವಾರ ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ವಕೀಲರ ಸಂಘದ ಉಪಾಧ್ಯಕ್ಷ ಪುಟ್ಟರಾಜು ಹಾಗೂ ಪ್ರಧಾನ ಕಾರ್ಯದರ್ಶಿ ಸುಮಂತ್ ನೇತೃತ್ವದಲ್ಲಿ ಸಭೆ ನಡೆಸಿದ ವಕೀಲರು ಭಯೋತ್ಪಾದಕ ದಾಳಿಗೆ ಬಲಿಯಾದ ಹಿಂದೂಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ನ್ಯಾಯಾಲಯದ ಕಲಾಪದಿಂದ ದೂರ ಉಳಿಯಲು ನಿರ್ಣಯ ಅಂಗೀಕರಿಸಿದರು.

ಸಂಘದ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಪಹಲ್ಗಾಮ್ ದಾಳಿಯಲ್ಲಿ 28 ಅಮಾಯಕರ ಹತ್ಯೆಗೆ ಕಾರಣರಾದ ಭಯೋತ್ಪಾದಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ಯೋಗಾನಂದ ಮತ್ತು ಪ್ರಿಯಾಂಕ ಅಪ್ಪು ಗೌಡ ಮಾತನಾಡಿ, ಭಾರತ ಸರ್ವ ಜನಾಂಗದ ಶಾಂತಿಯ ತೋಟ. ಈ ದೇಶದಲ್ಲಿ ಭಯೋತ್ಪಾದಕರು ಘೋರಕೃತ್ಯ ನಡೆಸುವ ಮೂಲಕ ಅಟ್ಟಹಾಸ ಮೆರೆದಿದ್ದಾರೆ. ಎಚ್ಚೆತ್ತು ಹಿಂದುಗಳು ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು

ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಬಿ.ರಾಮಕೃಷ್ಣೇಗೌಡ, ಜಿ.ಮಹದೇವಯ್ಯ, ಎಚ್‌.ವಿ.ಬಾಲರಾಜು, ಎಂ.ಎನ್. ಚಂದ್ರಶೇಖರ್, ಚೆಲುವರಾಜು, ಎಂ.ಎಂ.ಪ್ರಶಾಂತ್, ಕೆ ಶಿವಣ್ಣ, ಸತೀಶ್, ಬಿ ಉಮೇಶ್, ತಗ್ಗಹಳ್ಳಿ ಚಂದ್ರು, ಎಂ,ಮಹೇಶ, ಟಿ.ಕೃಷ್ಣ, ದೇವರಾಜು, ವೆಂಕಟೇಶ, ಪಂಚಪ್ಪ, ಮಧು, ಶಿವರಾಮು ಮತ್ತಿತರರು ಭಾಗವಹಿಸಿದ್ದರು.ಇಂದು ಮಲೇರಿಯ ನಿಯಂತ್ರಣ ಕುರಿತು ಜಾಗೃತಿ ಜಾಥಾ

ಮಂಡ್ಯ: ವಿಶ್ವ ಮಲೇರಿಯ ದಿನಾಚರಣೆ ಪ್ರಯುಕ್ತ ಎಸ್.ಡಿ. ಜಯರಾಮ್ ಪ್ಯಾರಾಮೆಡಿಕಲ್ ವಿಜ್ಞಾನ ಸಂಸ್ಥೆ ಮತ್ತು ಸದ್ವಿದ್ಯಾ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಂದ ಏ.25 ರಂದು ಬೆಳಗ್ಗೆ 10 ಗಂಟೆಗೆ ಮಲೇರಿಯ ನಿಯಂತ್ರಣ ಕುರಿತ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಕುಮಾರ ಜಾಥಾಗೆ ಚಾಲನೆ ನೀಡುವರು. ಜಿಪಂ ಸಿಇಒ ಕೆ.ಆರ್.ನಂದಿನಿ, ಎಸ್ಪಿ ಮಲ್ಲಿಕಾರ್ಜುನಬಾಲದಂಡಿ ಭಾಗವಹಿಸಲಿದ್ದಾರೆ. ನಗರದ ಜಯಚಾಮರಾಜ ಒಡೆಯರ್ ವೃತ್ತದಿಂದ ಮೈಸೂರು ಮುಖ್ಯ ರಸ್ತೆ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯವರೆಗೆ ಜಾಥ ನಡೆಯಲಿದೆ.

Share this article