ಇಂದು ಎಂಇಎಸ್ ನಿಷೇಧಕ್ಕಾಗಿ ಧರಣಿ

KannadaprabhaNewsNetwork |  
Published : Mar 20, 2025, 01:16 AM IST
19ಕೆಡಿವಿಜಿ61-ದಾವಣಗೆರೆಯಲ್ಲಿ ಬುಧವಾರ ಕನ್ನಡ ಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಿಷೇಧಿಸುವಂತೆ ನಮ್ಮ ಜೈ ಕರುನಾಡು ವೇದಿಕೆ ಹಾಗೂ ಕರ್ನಾಟಕ ಜನಮನ ವೇದಿಕೆ ವತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಬಳಿ ಮಾ.20ರಂದು ಸಾಂಕೇತಿಕ ಧರಣಿ ನಡೆಸುವುದಾಗಿ ಕರ್ನಾಟಕ ಜನಮನ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ನಾಗೇಂದ್ರ ಬಂಡೀಕರ್ ಹೇಳಿದ್ದಾರೆ.

- 22ರ ಕರ್ನಾಟಕ ಬಂದ್‌ ಬಗ್ಗೆ ಚರ್ಚಿಸಿ ತೀರ್ಮಾನ: ನಾಗೇಂದ್ರ ಬಂಡೀಕರ್

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಿಷೇಧಿಸುವಂತೆ ನಮ್ಮ ಜೈ ಕರುನಾಡು ವೇದಿಕೆ ಹಾಗೂ ಕರ್ನಾಟಕ ಜನಮನ ವೇದಿಕೆ ವತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಬಳಿ ಮಾ.20ರಂದು ಸಾಂಕೇತಿಕ ಧರಣಿ ನಡೆಸುವುದಾಗಿ ಕರ್ನಾಟಕ ಜನಮನ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ನಾಗೇಂದ್ರ ಬಂಡೀಕರ್ ಹೇಳಿದರು.

ನಗರದಲ್ಲಿ ಬುಧ‍ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10 ರಂದು ಉಪವಿಭಾಗಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಲಾಗುವುದು. ರಾಜ್ಯದಲ್ಲಿ ಎಂಇಎಸ್‌ ನಿಷೇಧಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಅರ್ಪಿಸಲಾಗುವುದು ಎಂದರು.

ಬೆಳಗಾವಿ ಮತ್ತಿತರೆ ಗಡಿ ಜಿಲ್ಲೆ, ಗಡಿಭಾಗಗಳಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಢರ ಪುಂಡಾಟಿಕೆ ಮಿತಿ ಮೀರುತ್ತಿದೆ. ಗಡಿಭಾಗದಲ್ಲಿ ಕನ್ನಡಿಗರಿಗೆ ಸೂಕ್ತ ರಕ್ಷಣೆಯೇ ಇಲ್ಲದಂತಾಗಿದೆ. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೋಗಿ, ಬರುವವರಿಗೆ, ಅದೇ ರೀತಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬಂದು, ಹೋಗುವ ಜನರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದರು.

ದೇಶದ್ರೋಹ ಕೆಲಸ ಮಾಡುತ್ತಿರುವ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ಮುಲಾಜಿಲ್ಲದೇ ನಿಷೇಧಿಸುವ ಬದ್ಧತೆಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕು. ಮಾ.22ರಂದು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ನೈತಿಕ ಬೆಂಬಲ ನೀಡುವುದಕ್ಕಿಂತಲೂ ಮನೆಯಲ್ಲಿರುವುದು ಒಂದೇ. ಕರ್ನಾಟಕ ಬಂದ್‌ ಹಿನ್ನೆಲೆ ಸಮಾನ ಮನಸ್ಕರ ಸಭೆ ನಡೆಸಿ, ಚರ್ಚಿಸಲಾಗುವುದು. ಮುಂದಿನ ತೀರ್ಮಾನ ಜನರ ಗಮನಕ್ಕೆ ತರುವುದಾಗಿ ನಾಗೇಂದ್ರ ತಿಳಿಸಿದರು.

ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಟಿ.ಮಂಜುನಾಥ ಗೌಡ, ಜೆ.ಎಸ್.ಪ್ರವೀಣ ಪಲ್ಲೇದ, ನಿಂಗಪ್ಪ, ಎನ್.ರಾಜೇಂದ್ರ ಬಂಗೇರ, ಟಿ.ಬಿ.ಲೋಕೇಶ ಇತರರು ಇದ್ದರು.

- - - -19ಕೆಡಿವಿಜಿ61.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಕನ್ನಡಪರ ಹಿರಿಯ ಹೋರಾಟಗಾರ ನಾಗೇಂದ್ರ ಬಂಡೀಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV