ಸಿದ್ದಾಪುರ:
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ರೈತರು ತಲೆತಲಾಂತರದಿಂದ ಅರಣ್ಯ ಅತಿಕ್ರಮಣ ಜಾಗದಲ್ಲಿ ಸಾಗುವಳಿ ಮಾಡಿ ಜೀವನ ನಿರ್ವಹಣೆ ನಡೆಸುತ್ತಿದ್ದಾರೆ. ಆದರೆ ಈಗ ಅರಣ್ಯ ಇಲಾಖೆಯ ಅಧಿಕಾರಿಗಳು ಅವರನ್ನು ಒಕ್ಕಲಿಸಿ ಚಿತ್ರಹಿಂಸೆ ನೀಡುತ್ತಿದ್ದಾರೆ. ಇದಲ್ಲದೆ ಹಿಂದಿನಿಂದಲೂ ರೈತರು ಸಾಗುವಳಿಗಾಗಿ, ತೋಟಕ್ಕೆ ಮಣ್ಣಿಗಾಗಿ, ಸೊಪ್ಪಿಗಾಗಿ ತೋಟಕ್ಕೆ ಮೀಸಲಿಟ್ಟ ಬೆಟ್ಟವನ್ನು ಬಳಸುತ್ತಿದ್ದರು. ಆದರೆ ಈಗ ರೈತರು ಕೇವಲ ಒಣ ಎಲೆಗಳನ್ನು ಮಾತ್ರ ಸಂಗ್ರಹಿಸಬಹುದು. ಅದರ ಹೊರತಾಗಿ ಬೆಟ್ಟದ ಮೇಲೆ ರೈತರಿಗೆ ಯಾವುದೇ ಹಕ್ಕಿಲ್ಲ ಎನ್ನುತ್ತಿದ್ದಾರೆ. ಕಂದಾಯ ಇಲಾಖೆಯ ಗೋಮಾಳ ಸೇರಿ ಮುಂತಾದ ಜಾಗಗಳ ಸರ್ವೇ ನಡೆಸಿ ಖಾಲಿ ಇರುವ ಜಾಗದ ಮಾಹಿತಿಯನ್ನು ಅರಣ್ಯ ಇಲಾಖೆಗೆ ನೀಡಲಾಗುತ್ತಿದೆ. ಇಂತಹ ಜಮೀನುಗಳನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿಸಿದಲ್ಲಿ ರೈತರು ಕೃಷಿ ಚಟುವಟಿಕೆ ನಿರ್ವಹಿಸುವುದೇ ಕಷ್ಟವಾಗಬಹುದು. ಕಾರಣ ಶಾಸಕರು ಅಧಿವೇಶನದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದು ರೈತರಿಗೆ ನ್ಯಾಯ ಒದಗಿಸಿ ಕೊಡಬೇಕು.ತಾಲೂಕಿನ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರಕ್ಕೆ ಮನದಟ್ಟು ಮಾಡುವ ಉದ್ದೇಶದಿಂದ ಡಿ. ೧೭ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮತ್ತು ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಜಿಲ್ಲಾಧ್ಯಕ್ಷ ಎನ್. ಎಸ್. ಹೆಗಡೆ ಕರ್ಕಿ ಹಾಗೂ ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ. ಜಿ. ನಾಯ್ಕ ಹಣಜೀಬೈಲ್ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಕೆ. ಮೇಸ್ತ, ಕೃಷ್ಣಮೂರ್ತಿ ಕಡಿಕೇರಿ, ಶಾಂತಕುಮಾರ್ ಭಟ್, ಸುರೇಶ್ ನಾಯ್ಕ, ತೋಟಪ್ಪ, ವೆಂಕಟೇಶ್, ಜಿ.ಕೆ. ನಾಯ್ಕ, ರಾಜೇಂದ್ರ ಕಿಂದ್ರಿ, ತಿಮ್ಮಪ್ಪ ನಾಯ್ಕ ಇದ್ದರು.