ಕನ್ನಡಪ್ರಭ ವಾರ್ತೆ ಭಾರತೀನಗರ
ಗ್ರಾಪಂ ಕಚೇರಿ ಎದುರು ಕೂಲಿಕಾರರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ, ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಪ್ರಾಂತ ಕೃಷಿಕೂಲಿಕಾರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಟಿ.ಪಿ.ಅರುಣ್‌ಕುಮಾರ್ ಮಾತನಾಡಿ, ಕೃಷಿ ಕೆಲಸಗಳಿಲ್ಲದೆ ಬದುಕು ದುಸ್ತರವಾಗಿದೆ. ಕಳೆದ ಹಲವು ತಿಂಗಳುಗಳಿಂದಲೂ ಬರಗಾಲ ಆವರಿಸಿದ್ದು ಕೂಲಿಕಾರರು ಬಿಡಿಗಾಸಿಗೂ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.2023-24ನೇ ಸಾಲಿನ ಉದ್ಯೋಗ ಖಾತರಿ ಯೋಜನೆಯಡಿ ಒಂದೂ ದಿನವು ಕೆಲಸ ನೀಡದೆ ಇರುವ 42 ಗ್ರಾಪಂಯಡಿ ಕೂಳಗೆರೆ ಮೊದಲನೇಯದ್ದಾಗಿದೆ. ಕೃಷಿಕೂಲಿಕಾರರು ಕೆಲಸವಿಲ್ಲದೆ ಬೇರೆ ಊರುಗಳಿಗೆ ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ದಯಮಾಡಿ ಗ್ರಾಪಂ ವ್ಯಾಪ್ತಿಯ ಕೂಲಿಕಾರರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ಕೃಷಿಕೂಲಿಕಾರರ ಸಂಘದ ತಾಲೂಕು ಉಪಾಧ್ಯಕ್ಷ ಗೋಪಾಲಸ್ವಾಮಿ, ಪಿಡಿಓ ರಾಜಣ್ಣ, ಚಿಕ್ಕರಸಿನಕೆರೆ ವಲಯ ಸಮಿತಿ ಅಧ್ಯಕ್ಷೆ ನಾಗಮ್ಮ, ಕಾಯಬಂಧುಗಳಾದ ಜಗದೀಶ್, ಸಿದ್ದರಾಜು, ವರಲಕ್ಷ್ಮಿ, ಆನಂದ್, ಮಹೇಶ್, ಸುಮಿತ್ರ, ರತ್ನಮ್ಮ, ಸೌಮ್ಯ ಸೇರಿದಂತೆ ಹಲವರಿದ್ದರು.
ಮಂಡ್ಯ:ಮದ್ದೂರು ತಾಲೂಕಿನ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಮತ್ತು ಕೊಪ್ಪದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆಗಳನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ಮದ್ದೂರು ತಾಲೂಕು ಘಟಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡರಾದ ಇಂಡುವಾಳು ಚಂದ್ರಶೇಖರ್, ರಾಮಕೃಷ್ಣಯ್ಯ, ಶ್ರೀನಿವಾಸಯ್ಯ, ದೇವರಾಜು, ಶೊ.ಸಿ. ಪ್ರಕಾಶ್, ಎಚ್.ಬಿ. ಸಿದ್ದರಾಮು, ಮಹೇಂದ್ರ, ಚಿಕ್ಕೇಗೌಡ, ಹನುಮಂತು, ನಾಗರತ್ನ, ಚನ್ನಯ್ಯ ಸೇರಿದಂತೆ ಹಲವರಿದ್ದರು.