ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಿಶ್ವದ ಹಲವು ಮುಸ್ಲಿಂ ರಾಷ್ಟ್ರಗಳಲ್ಲಿ ಅಶಾಂತಿ ಮತ್ತು ಸಂಘರ್ಷದ ವಾತಾವರಣವಿದ್ದು, ಮುಸ್ಲಿಮರು ಪರಸ್ಪರ ಕಾದಾಡುತ್ತಿದ್ದಾರೆ. ಆದರೆ, ಭಾರತವು ಮುಸ್ಲಿಮರಿಗೆ ಅತ್ಯಂತ ಸುರಕ್ಷಿತವಾದ ದೇಶವಾಗಿದೆ. ಇಲ್ಲಿ ಅವರು ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ ವಿರೋಧಿ ಧೋರಣೆ ಹೊಂದಿದ್ದ ಖಮೇನಿ ಪರವಾಗಿ ಬೀದಿಗೆ ಇಳಿಯುವುದು ಸರಿಯಲ್ಲ ಎಂದು ಹೇಳಿದರು.
ಇರಾನ್ ಕೇವಲ ಭಾರತದ ವ್ಯಾಪಾರ ಪಾಲುದಾರನಾಗಿದೆಯೇ ಹೊರತು, ರಾಜತಾಂತ್ರಿಕವಾಗಿ ಯಾವಾಗಲೂ ಪಾಕಿಸ್ತಾನದ ಪರವಾಗಿಯೇ ನಿಂತಿದೆ. ಮುಂಬೈ ಬಾಂಬ್ ದಾಳಿಯ ಸಂದರ್ಭದಲ್ಲಿ ಇರಾನ್ ಪಾಕಿಸ್ತಾನಕ್ಕೆ ಬೆಂಬಲ ನೀಡಿತ್ತು. ಅಲ್ಲದೆ, 2017ರಲ್ಲಿ ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಹೇಳಿಕೆ ನೀಡಿದ್ದ ಖಮೇನಿ, 2019ರಲ್ಲಿ 370ನೇ ವಿಧಿ ರದ್ದಾದಾಗಲೂ ಅಸಮಾಧಾನ ವ್ಯಕ್ತಪಡಿಸಿದ್ದರು. 2020ರ ದೆಹಲಿ ಗಲಭೆಯ ಸಂದರ್ಭದಲ್ಲಿ ಭಾರತದಲ್ಲಿ ಮುಸ್ಲಿಮರ ಮಾರಣಹೋಮ ನಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದರು, ಅಂತಹ ವ್ಯಕ್ತಿ ಪರವಾಗಿ ಕೆಲ ಮುಸ್ಲಿಮರು ಹೋರಾಟ ಮಾಡುತ್ತಿರುವುದು ಸರಿಯಿಲ್ಲ.ಈ ಹಿಂದೆ ಪೆಹಲ್ಗಾಂ ಅಟ್ಯಾಕ್‌ನಲ್ಲಿ ಮೃತಪಟ್ಟಾಗ ಮೌನ ವಹಿಸಿದ್ದವರು ಯಾರೂ ಸಹ ಭಯೋತ್ಪಾದಕರ ವಿರುದ್ದ ಹೋರಾಟ ಮಾಡಲಿಲ್ಲ, ಇಂದು ಇರಾನ್ ನಾಯಕನಿಗಾಗಿ ಸಾವಿರಾರು ಸಂಖ್ಯೆಯಲ್ಲಿ ಸೇರುತ್ತಿರುವುದು ದುರದೃಷ್ಟಕರ. ಭಾರತದ ಅನ್ನ ತಿಂದು ಬೆಳೆದವರು ಈ ಮಣ್ಣಿನ ಜನರ ಪರವಾಗಿ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಶಾಂತಿಗಾಗಿ ಶ್ರಮಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಕೆಲವು ಮುಸ್ಲಿಂ ಸಂಘಟನೆಗಳು ಮೋದಿಯವರು ಹೋಗಿ ಇಸ್ರೇಲ್ ಬಳಿ ಯುದ್ದ ನಿಲ್ಲಿಸಲು ಹೇಳಬೇಕು ಎನ್ನುತ್ತಿದ್ದಾರೆ. ಆನೇಕ ವಿಚಾರಗಳಲ್ಲಿ ಇಸ್ರೇಲ್ ನಮ್ಮ ಪರವಾಗಿಯೇ ಇದೆ ಎಂದರು
ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ದಿವಾಳಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ಆರ್ಥಿಕವಾಗಿಯೂ ದಿವಾಳಿಯಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ರಾಜ್ಯದ ಗುತ್ತಿಗೆದಾರರಿಗೆ ಕಾಮಗಾರಿಗಳ ಪೂರ್ಣಹಣವನ್ನು ಪಾವತಿಸಲು ಆಗದಷ್ಟು ದಿವಾಳಿಯಾಗಿದೆ. ಗುತ್ತಿಗೆದಾರರು ಹಲವು ಭಾರಿ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದರೂ ಸಹ ಮುಖ್ಯಮಂತ್ರಿಗಳು ನಿಸ್ಸಾಹಯಕರಾಗಿದ್ದಾರೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಈ ನಡುವೆ ಮತ್ತೊಂದು ಹೊಸ ಪದ್ಧತಿಯನ್ನು ಜಾರಿಗೆ ತರಲು ಹೊರಟಿದೆ. ರಾಜ್ಯದ ಎಲ್ಲಾ ಟೆಂಡರ್ ಪ್ರಕ್ರಿಯೆಗಳು ಕೇಂದ್ರೀಕೃತ ವ್ಯವಸ್ಥೆಯಲ್ಲಿಯೇ ಆಗಬೇಕು ಎಂದಿದ್ದಾರೆ. ಇದು ಸ್ಥಳೀಯ ಗುತ್ತಿಗೆದಾರರಿಗೆ ಮಾರಕವಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಬೇರೆ ರಾಜ್ಯದ ಗುತ್ತಿಗೆದಾರರು ಬಂದರೆ ರಾಜ್ಯದ ಗುತ್ತಿಗೆದಾರರಿಗೆ ಅವಕಾಶವೇ ಇಲ್ಲದಂತಾಗಿ ಕನ್ನಡಿಗರಿಗೆ ತೊಂದರೆಯಾಗುತ್ತದೆ. ಮತ್ತು ಕೇಂದ್ರೀಕೃತ ವ್ಯವಸ್ಥೆಯಾದರೆ ಭ್ರಷ್ಟಾಚಾರವೇ ಒಟ್ಟುಗೂಡಿದಂತಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಈ. ಕಾಂತೇಶ್, ಮಹಾಲಿಂಗಯ್ಯಶಾಸ್ತ್ರೀ, ಮೋಹನ್ ಜಾದವ್, ಮಧುಸೂದನ್, ಕುಬೇರಪ್ಪ, ಚನ್ನಬಸಪ್ಪ ಸೇರಿದಂತೆ ಹಲವರಿದ್ದರು.