ಹೆಮ್ಮೆಯಿಂದ ಹೊಲೆಯ ಎಂದು ನಮೂದಿಸಿ: ಎ.ಆರ್.ಕೃಷ್ಣಮೂರ್ತಿ

KannadaprabhaNewsNetwork | Published : May 20, 2025 1:09 AM
ಚಾಮರಾಜನಗರದ ಡಾ.ಅಂಬೇಡ್ಕರ್ ಭವನದಲ್ಲಿ ಬಲಗೈ ಜಾತಿಗೆ ಸೇರಿದ ಹೊಲೆಯ ಜಾತಿ ಮುಖಂಡರ ಸಭೆಯಲ್ಲಿ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.
Follow Us

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಾತಿಗಣತಿ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದವರು ಹೊಲೆಯ ಎಂದು ಹೆಮ್ಮೆಯಿಂದ ಬರೆಸಬೇಕು ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮನವಿ ಮಾಡಿದರು.

ನಗರದ ಡಾ.ಬಿ.ಆ‌ರ್.ಅಂಬೇಡ್ಕರ್ ಭವನದಲ್ಲಿ ಬಲಗೈ ಜಾತಿಗೆ ಸೇರಿದ ಹೊಲೆಯ ಜಾತಿ ಮುಖಂಡರ ಸಭೆಯಲ್ಲಿ ಮಾತನಾಡಿದರು. ಸಮುದಾಯದ ಉಳಿವಿಗಾಗಿ, ಮೀಸಲಾತಿ ಸೌಲಭ್ಯಕ್ಕಾಗಿ ಹೊಲೆಯ ಎಂದರೆ ಅವಮಾನವಲ್ಲ, ಬದಲಿಗೆ ಹೆಮ್ಮೆ ಪಡಬೇಕು. ಪರಿಶಿಷ್ಟ ಜಾತಿಯ ಬಲಗೈನವರ ಮುಂದಿನ ಪೀಳಿಗೆಯ ಉದ್ದಾರಕ್ಕಾಗಿ ಒಳ ಮೀಸಲು ಸಮೀಕ್ಷೆಯಲ್ಲಿ ಉಪ ಜಾತಿ ಕಾಲಂನಲ್ಲಿ ಹೊಲೆಯ ಎಂದು ಬರೆಸಬೇಕು ಎಂದು ಸಲಹೆ ನೀಡಿದರು. ಮೇ 25 ರವರಗೆ ಕಾಲಾವಕಾಶ ವಿಸ್ತರಣೆ ಮಾಡಿದ್ದಾರೆ. ಅದರೊಳಗೆ ಸಮುದಾಯದ ಮುಖಂಡರು ತಂಡೋಪವಾಗಿ ಚಾಮರಾಜನಗರ ತಾಲೂಕಿನ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜಾತಿ ಗಣತಿ ಸಮೀಕ್ಷೆ ಯಲ್ಲಿ ಹೊಲೆಯ ಎಂದು ಬರೆಸುವಂತೆ ಗ್ರಾಮದ ಬೀದಿ, ಬೀದಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸಭೆಯ ನೇತೃತ್ವ ವಹಿಸಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾ‌ರ್, ಒಳ ಮೀಸಲಾತಿ ಜಾತಿ ಸಮೀಕ್ಷಯಲ್ಲಿ ಬಲಗೈ ಜಾತಿಗೆ ಸೇರಿದ ಹೊಲೆಯ ಜಾತಿ ಮುಖಂಡರು ಚಾಮರಾಜನಗರ ತಾಲೂಕಿನ ಹೊಲೆಯ ಜಾತಿಗೆ ಸಂಬಂಧಿಸಿದಂತೆ ಸಮುದಾಯ ಪ್ರತಿಯೊಬ್ಬರೂ ಜಾಗೃತಿ ಮೂಡಿಸಬೇಕು. ತಾಲೂಕಿನ 5 ಹೋಬಳಿ ಮುಖಂಡರು ವಾಹನದಲ್ಲಿ ಪ್ರತಿ ಗ್ರಾಮದಲ್ಲಿ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜಾತಿ ಗಣತಿಯಲ್ಲಿ ಹೊಲೆಯ ಎಂದು ನಮೂದಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ ಪಾಪು ಮಾತನಾಡಿದರು.

ಸಭೆಯಲ್ಲಿ ಚಾಮುಲ್ ನಿರ್ದೇಶಕ ರೇವಣ್ಣ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಬಿಎಸ್‌ಪಿ ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ, ರಾಜ್ಯ ಕಾರ್ಯದರ್ಶಿ ನಾಗಯ್ಯ, ಸಮುದಾಯದ ಮುಖಂಡರಾದ ಆ‌ರ್.ಮಹದೇವು, ನಲ್ಲೂರುಸೋಮೇಶ್ವರ್, ಯಜಮಾನ ನಲ್ಲೂರು ಮಹದೇವಸ್ವಾಮಿ, ನಾಗಯ್ಯ, ಪಾಪಣ್ಣ, ಗಡಿಯಜಮಾನರಾದ ವೀರಣ್ಣ, ರವಿಕುಮಾರ್, ಸೋಮಣ್ಣ, ದಡದಹಳ್ಳಿಗೋವಿಂದರಾಜು, ಸಿದ್ದಯ್ಯನಪುರ ಚೆನ್ನಂಜಯ್ಯ, ಗೋವಿಂದರಾಜು ಸೋಮಣ್ಣ, ಚಂದಕವಾಡಿ ಸಿದ್ಧಪ್ಪಾಜಿ, ಮಹದೇವಸ್ವಾಮಿ, ಭೋಗಾಮರ ಮಹಾಲಿಂಗು, ಸುತ್ತೂರು ಅಶೋಕ್. ಮಹದೇವು, ಸಿ.ಮಹದೇವ, ಕೊಂಗಳ್ಳಿ ಮಹದೇವ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ, ಜ್ಯೋತಿಗೌಡನಪುರ ನಾಗರಾಜು ಸೇರಿದಂತೆ ನೂರುಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.