ಅಲೆಮಾರಿ ಜನಾಂಗಕ್ಕೆ ಶೇ.೧ರಷ್ಟು ಮೀಸಲು ಕಲ್ಪಿಸಿ

KannadaprabhaNewsNetwork |  
Published : Aug 23, 2025, 02:00 AM IST
೨೨ಕೆಎಲ್‌ಆರ್-೧೩ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಸ್ಪೃಶ್ಯ ಸಂಬಂಧಿತ ಅಲೆಮಾರಿ ಸಮುದಾಯಕ್ಕೆ ಶೇ.೧ರಷ್ಟು ಮೀಸಲಾತಿಗಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದು. | Kannada Prabha

ಸಾರಾಂಶ

ಆಯೋಗ ಪರಿಶಿಷ್ಟ ಜಾತಿಗಳ ಪ್ರವರ್ಗ-ಎ ರಲ್ಲಿ ಸೂಕ್ಷ್ಮ ಮತ್ತು ಅಲೆಮಾರಿ ಜಾತಿಗಳನ್ನು ಸೇರಿಸಿ ಶೇ.೧ರಷ್ಟು ಮೀಸಲಾತಿಗಾಗಿ ಶಿಫಾರಸ್ಸು ಮಾಡಿದೆ. ಆದರೆ ಸರ್ಕಾರ ಸದರಿ ಪ್ರವರ್ಗಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಅಸ್ಪೃಶ್ಯ ಸಂಬಂಧಿತ ಅಲೆಮಾರಿ ಜಾತಿಗಳನ್ನು ಇತರೆ ಸ್ಪರ್ಶ ಜಾತಿಗಳ ಜೊತೆ ಸೇರಿಸಿ ಶೇ.೫ರ ಗುಂಪಿಗೆ ಸೇರಿಸಿರುವುದು, ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವಾಗಿದೆ

ಕನ್ನಡಪ್ರಭ ವಾರ್ತೆ ಕೋಲಾರಒಳಮೀಸಲಾತಿ ಸಂಬಂಧಿತ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‌ರ ಏಕಸದಸ್ಯ ಆಯೋಗದ ದತ್ತಾಂಶ ಆಧಾರಿತ ಶಿಫಾರಸ್ಸಿನಂತೆ ಅಸ್ಪೃಶ್ಯ ಸಂಬಂಧಿತ ಅಲೆಮಾರಿ ಸಮುದಾಯಕ್ಕೆ ಶೇ.೧ ಮೀಸಲಾತಿ ನೀಡಬೇಕು ಎಂದು ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಸ್ಪೃಶ್ಯ ಸಂಬಂಧಿತ ಅಲೆಮಾರಿ ಸಮುದಾಯಕ್ಕೆ ಶೇ.೧ರಷ್ಟು ಮೀಸಲಾತಿಗಾಗಿ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಆಗ್ರಹ ಮಾಡಲಾಗಿದೆ. ಒಳಮೀಸಲಾತಿಗೆ ಕಳೆದ ೩೫ ವರ್ಷದಿಂದ ಪರಿಶಿಷ್ಟ ಜಾತಿಗಳು ನಡೆಸಿದ ಹೋರಾಟದ ಫಲವಾಗಿ ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷ ನೀಡಿದ ಆದೇಶದ ಮೇರೆಗೆ ರಾಜ್ಯ ಸರ್ಕಾರ ದತ್ತಾಂಶ ಸಮೀಕ್ಷೆಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್‌ರ ಏಕಸದಸ್ಯ ಆಯೋಗವನ್ನು ರಚಿಸಿತು.

ಶಿಫಾರಸು ಜಾರಿಗೆ ಆಗ್ರಹ

ಈ ಹಿನ್ನೆಲೆಯಲ್ಲಿ ಆಯೋಗ ಪರಿಶಿಷ್ಟ ಜಾತಿಗಳ ಪ್ರವರ್ಗ-ಎ ರಲ್ಲಿ ಸೂಕ್ಷ್ಮ ಮತ್ತು ಅಲೆಮಾರಿ ಜಾತಿಗಳನ್ನು ಸೇರಿಸಿ ಶೇ.೧ರಷ್ಟು ಮೀಸಲಾತಿಗಾಗಿ ಶಿಫಾರಸ್ಸು ಮಾಡಿದೆ. ಆದರೆ ಸರ್ಕಾರ ಸದರಿ ಪ್ರವರ್ಗಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ಅಸ್ಪೃಶ್ಯ ಸಂಬಂಧಿತ ಅಲೆಮಾರಿ ಜಾತಿಗಳನ್ನು ಇತರೆ ಸ್ಪರ್ಶ ಜಾತಿಗಳ ಜೊತೆ ಸೇರಿಸಿ ಶೇ.೫ರ ಗುಂಪಿಗೆ ಸೇರಿಸಿರುವುದು, ಅಲೆಮಾರಿ ಸಮುದಾಯಗಳಿಗೆ ಮರಣ ಶಾಸನವಾಗಿದೆ ಎಂದರು.ಸರ್ಕಾರ ಅಲೆಮಾರಿ ಸಮುದಾಯಗಳಿಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್‌ ಆಯೋಗದ ವರದಿ ಅನ್ವಯ ಶೇ.೧ರಷ್ಟು ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಬಸವರಾಜ್ ಕೌತಾಳ್, ಅಲೆಮಾರಿ ಸಮುದಾಯಗಳ ಒಳಮೀಸಲಾತಿ ವಂಚಿತ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ವೀರೇಶ್, ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಚಲಪತಿ , ದಸಂಸ ರಾಜ್ಯ ಸಂಚಾಲಕ ಗುರುಮೂರ್ತಿ ಶಿವಮೊಗ್ಗ, ಹನುಮಂತಪ್ಪ, ಭೀಮ ಕುಮಾರ್, ಶೇಷಪ್ಪ, ಚಂದ್ರಶೇಖರ್, ಕೋಲಾರ ಜಿಲ್ಲಾ ಚನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಕೆಜಿಎಫ್ ತಾಲ್ಲೂಕು ಅಧ್ಯಕ್ಷ ಚಂದ್ರು, ಲಕ್ಷ್ಮಯ್ಯ, ಜೆಡಿಎಸ್ ಮುಖಂಡ ಎಂ.ಆರ್. ಸುರೇಶ್ , ಮುಳಬಾಗಿಲು ಶ್ರೀನಿವಾಸ್, ಬಾಬು, ಪ್ರಕಾಶ್, ವೆಂಕಟೇಶ್ ಬಂಗಾರಪೇಟೆ, ಗಣೇಶ್ ಮುಳಬಾಗಿಲು, ಮಂಜುನಾಥ್ ಇದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?