ಕನ್ನಡಪ್ರಭ ವಾರ್ತೆ, ಯಳಂದೂರು
ಪಟ್ಟಣದಲ್ಲಿ ಕುಡಿಯುವ ನೀರು ಯೋಜನೆಯಡಿಲ್ಲಿ ಅಮೃತ್ ೨.೦ ಯೋಜನೆಯಡಿಯಲ್ಲಿ ಸಂಬಂಧಪಟ್ಟ ಗುತ್ತಿಗೆದಾರ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಇವರಿಗೆ ೧೫ ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿಯಲ್ಲಿ ಇದುವರೆವಿಗೂ ೬೬ ಲಕ್ಷ ರು. ಕೊಟ್ಟಿದೆ. ಆದರೆ ಇನ್ನೂ ಕಾಮಗಾರಿ ಆರಂಭಿಸಿಲ್ಲ. ಪೈಪ್‌ಗಾಗಿ ರಸ್ತೆ ಅಗೆಯಲಾಗಿದೆ. ನೀರಿನ ಪೈಪ್ ಒಡೆದರೂ ಈಗ ಕ್ರಮ ವಹಿಸುತ್ತಿಲ್ಲ ಬಳೇಪೇಟೆಯಲ್ಲಿ ವಾಹನ ಓಡಾಟಕ್ಕೆ ತೊಂದರೆಯಾಗಿದೆ ಎಂದು ಕೆಲ ಸದಸ್ಯರು ದೂರು ನೀಡಿದರು. ಇದಕ್ಕೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಸಂಬಂಧಪಟ್ಟ ಇಇ ಕ್ರಮ ವಹಿಸಿ ಎಂದು ಮುಖ್ಯಾಧಿಕಾರಿಗೆ ಸೂಚನೆ ನೀಡಿದರು.
ಪಪಂ ವತಿಯಿಂದ ೨೦೨೧-೨೨ ನೇ ಸಾಲಿನಲ್ಲಿ ಶೌಚಗೃಹ ನಿರ್ಮಾಣಕ್ಕೆ ೩೩ ಮಂದಿ ಅರ್ಜಿ ಸಲ್ಲಿಸಿದ್ದರೂ ಕೂಡ ಇದುವರೆವಗೂ ಅವರಿಗೆ ಹಣವನ್ನು ನೀಡಿಲ್ಲ. ಪಂಚಾಯಿತಿ ವತಿಯಿಂದ ಜಿಯೋ ಟ್ಯಾಗ್ ಮಾಡಿಸಿ ಈ ಹಣವನ್ನು ನೀಡಲು ಕ್ರಮ ವಹಿಸಿ ಎಂದು ಸೂಚಿಸಲಾಯಿತು.ಇದಲ್ಲದೆ ೧೫ ನೇ ಹಣಕಾಸು ಯೋಜನೆಯಡಿಯಲ್ಲಿ ಕುಡಿಯು ನೀರಿಗೆ ೧೮.೯೦ ಲಕ್ಷ ರು. ಘನತ್ಯಾಜ್ಯ ವಸ್ತು ನಿರ್ವಹಣೆಯ ಶೇ. ೩೦ ರ ಅನುದಾನದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತುಗೋಡೆಗೆ ೧೬.೧೦ ಲಕ್ಷ ರು. ವೈಯುಕ್ತಿಕ ಶೌಚಗೃಹ ನಿರ್ಮಾಣಕ್ಕೆ ೨.೮೦ ಲಕ್ಷ ರು. ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚರಂಡಿ, ಕವರಿಂಗ್ ಸ್ಲಾಬ್ ನಿರ್ಮಾಣಕ್ಕೆ ೨೫.೨೦ ಲಕ್ಷ ರು. ಸೇರಿದಂತೆ ಒಟ್ಟು ೬೩. ಲಕ್ಷ ರು. ವೆಚ್ಚದ ಕಾಮಗಾರಿಗಳಿಗೆ ಅನುಮೋದನೆಯನ್ನು ನೀಡಲಾಯಿತು.
ಪಪಂ ಅಧ್ಯಕ್ಷೆ ಲಕ್ಷ್ಮಿಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು ಸದಸ್ಯರಾದ ಮಹೇಶ್, ವೈ.ಜಿ. ರಂಗನಾಥ, ಮಹದೇವನಾಯಕ, ಸವಿತಾಬಸವರಾಜು, ಮಂಜು, ಮಹದೇವ, ಪ್ರಭಾವತಿ ರಾಜಶೇಖರ, ರವಿ, ಸುಶೀಲಾಪ್ರಕಾಶ್, ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಶ್ರೀಕಂಠಸ್ವಾಮಿ, ಮುನವ್ವರ್‌ಬೇಗ್ ಮುಖ್ಯಾಧಿಕಾರಿ ಎಂ.ಪಿ. ಮಹೇಶ್‌ಕುಮಾರ್ ಜೆಇ ನಾಗೇಂದ್ರ, ಪರಶಿವ, ಜಯಲಕ್ಷ್ಮಿ, ಲಕ್ಷ್ಮಿ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು.