ಮೀಸಲು ಕ್ಷೇತ್ರದಲ್ಲಿ ದಲಿತರಿಗೆ ಸೂಕ್ತ ಸೌಕರ್ಯ ಒದಗಿಸಿ

KannadaprabhaNewsNetwork | Published : Jun 25, 2024 12:35 AM

ಸಾರಾಂಶ

ಕೆಡಿಪಿ ಸಭೆಗೆ ದಸಸಂ ಮುತ್ತಿಗೆ । ಹನುಮಂತಪ್ಪ ವೆಂಕಾಟಪುರ ನೇತೃತ್ವದಲ್ಲಿ ಪ್ರತಿಭಟನೆ

ಕೆಡಿಪಿ ಸಭೆಗೆ ದಸಸಂ ಮುತ್ತಿಗೆ । ಹನುಮಂತಪ್ಪ ವೆಂಕಾಟಪುರ ನೇತೃತ್ವದಲ್ಲಿ ಪ್ರತಿಭಟನೆಕನ್ನಡಪ್ರಭ ವಾರ್ತೆ ಲಿಂಗಸುಗೂರು

ಮೀಸಲು ಕ್ಷೇತ್ರದಲ್ಲಿ ದಲಿತರಿಗೆ ಸೂಕ್ತ ಸೌಕರ್ಯಗಳು ಒದಗಿಸಬೇಕು ಅಲ್ಲದೇ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಹನುಮಂತಪ್ಪ ವೆಂಕಟಾಪುರ ನೇತೃತ್ವದಲ್ಲಿ ಕೆಡಿಪಿ ಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಗೆ ಮುತ್ತಿಗೆ ಹಾಕಿದ ದಲಿತ ಸಂಘರ್ಷ ಸಮಿತಿ ಮುಖಂಡರು ತಾಲೂಕಿನ ಕೃಷ್ಣಾನದಿ ನಡುಗಡ್ಡೆಯಲ್ಲಿ ವಾಸ ಮಾಡುವ ಜನರಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ದಶಕಗಳಿಂದ ಹೋರಾಟ ಮಾಡಿದರು ಸೌಕರ್ಯ ಒದಗಿಸುತ್ತಿಲ್ಲ. ದಲಿತರಿಗೆ ಸೌಲತ್ತುಗಳು ಒದಗಿಸಲು ತಾಲೂಕ ಆಡಳಿತ ಸಂಪೂರ್ಣ ವಿಫಲವಾಗಿದೆ. ದಲಿತ ಮಹಿಳೆಯರ ಮೇಲೆ ತಾಲೂಕಿನಲ್ಲಿ ಹಾಡು ಹಗಲೆ ಅತ್ಯಾಚಾರ, ದೌರ್ಜನ್ಯದಂತಹ ಘಟನೆಗಳು ಜರುಗುತ್ತಿವೆ ಇದರಿಂದ ಲಿಂಗಸುಗೂರು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೂ ದಲಿತ ಶೋಷಣೆ ನಿಂತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.

ಮನವಿ ಸ್ವೀಕರಿಸಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ, ನಡುಗಡ್ಡೆ ಗ್ರಾಮಗಳ ಸಂಪರ್ಕ ಸೇತುವೆಗೆ ನಿರ್ಮಾಣಕ್ಕೆ ಹಣಕಾಸಿನ ಹೊರೆ ಜಾಸ್ತಿ ಆಗುತ್ತದೆ ಎಂದು ಸರ್ಕಾರ ಪ್ರಸ್ತಾವನೆಗೆ ಮನ್ನಣೆ ನೀಡಿಲ್ಲ. ಆದರೂ ಸೇತುವೆ ನಿರ್ಮಾಣ ಮಾಡಲಾಗುವುದು ಹಾಗೂ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಕುರಿತು ಘಟನೆಯ ಆರೋಪಿಗಳ ಬಂದನಕ್ಕೆ ತಕ್ಷಣ ಕ್ರಮ ವಹಿಸಲು ಪೊಲೀಸ್ ಇಲಾಖೆಗೆ ಸೂಚನೆ ನೀಡುವೆ. ಅಲ್ಲದೇ ದಲಿತರ ಕಾಲೋನಿಯಲ್ಲಿ ಸಿಸಿ ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲತ್ತುಗಳ ಒದಗಿಸಲು ಸಭೆಯಲ್ಲಿ ವಿಸೃಸ್ತ ಚರ್ಚೆ ಮಾಡಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡುವೆ ಎಂದು ಹೇಳಿದರು.

ದಲಿತರು ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುವುದಕ್ಕೆ ಸದಾ ನನ್ನ ಬೆಂಬಲ ಇದೆ. ಹೋರಾಟದಿಂದ ಬಡ ಜನರಿಗೆ ಸರ್ಕಾರದ ಸೌಲಭ್ಯಗಳು ಸಿಕ್ಕು ಜನರ ಸುಧಾರಣೆಗೆ ಅನುಕೂಲವಾಗುತ್ತದೆ ಎಂದರು.

ಈ ವೇಳೆ ಬಸವರಾಜ ಜಳಕಿಮಠ, ತಾಪಂ ಇಒ ಅಮರೇಶ ಯಾದವ್, ತಹಸೀಲ್ದಾರ ಯೋಜನಾ ನಿರ್ದೇಶಕ ಡಾ.ರೋಣಿ, ಸಿಪಿಐಗಳಾದ ಪುಂಡಲೀಕ ಪಟಾತರ್, ಹೊಸಕೇರಪ್ಪ ಸೇರಿದಂತೆ ಅಧಿಕಾರಿಗಳು ಹಾಗೂ ದಸಸಂನ ಮೋಹನ್ ಗೋಸ್ಲೆ ಸೇರಿದಂತೆ ಮುಖಂಡರು, ಮಹಿಳೆಯರು ಕಾರ್ಯಕರ್ತರು ಇದ್ದರು.

Share this article