ಕನ್ನಡಪ್ರಭ ವಾರ್ತೆ ಇಂಡಿ
ತಾಲೂಕಿನ ಅಥರ್ಗಾ ಗ್ರಾಮದಿಂದ ಸುಮಾರು ೧೦೦ ಕ್ಕೂ ಹೆಚ್ಚು ಜೋಡೆತ್ತಿನ ರೈತರು ಪಟ್ಟಣದ ಸೇವಾಲಾಲ್ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಸೇವಾಲಾಲ ವೃತ್ತದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಗಣಪತಿ ಬಾಣಿಕೋಲ, ಜೋಡೆತ್ತಿನ ಕೃಷಿಕರಿಂದ ಮಾತ್ರ ಜೊಡೆತ್ತಿನ ಕೃಷಿ ಮಾತ್ರ ಉಳಿಯಲು ಸಾದ್ಯ, ಜೋಡೆತ್ತಿನ ಕೃಷಿಕರು ಸಂಪೂರ್ಣವಾಗಿ ನಾಶವಾದರೆ ಮುಂದೆ ಎಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ಜಗತ್ತಿನ ಎಲ್ಲ ವಿವಿಗಳು ಸಂಶೋಧನೆಗಳಿಂದ ತಿಳಿದು ಬಂದಿದೆ. ಮೂರು ವರ್ಷಗಳಿಂದ ಜೊಡೆತ್ತು ಉಳಿಸಲು ಜಾಗೃತಿ ಮೂಡಿಸಲಾಗುತ್ತಿದೆ. ನಂದಿ ಸಂಸ್ಕೃತಿ ಪುನಚೇತನಕ್ಕಾಗಿ ಸರ್ಕಾರ ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ₹ 11 ಸಾವಿರ ಪ್ರೋತ್ಸಾಹ ಧನ ನೀಡಬೇಕು, ರಾಜ್ಯ ಬಜೆಟ್‌ನಲ್ಲಿ ಶೇ.10 ರಷ್ಟು ಜೋಡೆತ್ತಿನ ರೈತರಿಗೆ ಮೀಸಲಾತಿ ನೀಡಬೇಕು ಎಂದು ಹಕ್ಕೋತ್ತಾಯ ಮಂಡಿಸಿದರು.ಕಾರ್ಯಕ್ರಮದಲ್ಲಿ ಬಸವರಾಜ ಪಾಟೀಲ ಹಂಜಗಿ, ಬಸೀರ ಅಹಮ್ಮದ ಬಳಿಗಾರ, ಕುಲ್ಲಪ್ಪ ಹಿಟ್ನಳ್ಳಿ, ರುದ್ರೇಶ ಮಠ, ಕುಲಪ್ಪ ನಿಂಬಾಳ, ಅಂಬಣ್ಣ ಕುಂಬಳ, ರೇವಣಸಿದ್ದ ಬಾಳಿ, ಸತೀಶ ಜಿಗಜಿಣಗಿ, ಶಿವಾನಂದ ಹುಬ್ಬಳ್ಳಿ, ಕಾಶಿನಾಥ ಹಚಡದ, ರಾಯಗೊಂಡ ಆಸಂಗಿ ಮತ್ತಿತರಿದ್ದರು.