ಕನ್ನಡಪ್ರಭ ವಾರ್ತೆ ನಾಲತವಾಡ
ಬುಧವಾರ ಬೆಳಗ್ಗೆಯಿಂದಲೇ ಆಸ್ಪತ್ರೆಗೆ ಆಗಮಿಸಿದ ರೋಗಿಗಳು ತಪಾಸಣೆಗಾಗಿ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಬ್ಬರೇ ವೈದ್ಯರ ಮೇಲೆ ಹೊರರೋಗಿಗಳ ತಪಾಸಣೆ ಸೇರಿದಂತೆ ವಿವಿಧ ಕರ್ತವ್ಯಗಳ ಹೊರೆ ಬೀಳುತ್ತಿದ್ದು, ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ಅಗತ್ಯ ವೈದ್ಯರನ್ನು ನಿಯೋಜಿಸಿ, ಹೊರರೋಗಿಗಳ ತಪಾಸಣೆ ಹಾಗೂ ತುರ್ತು ಸೇವೆಗಳನ್ನು ಸುಗಮಗೊಳಿಸಬೇಕು. ಹೋಬಳಿಯ ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅವಲಂಬಿಸಿರುವ ಈ ಆರೋಗ್ಯ ಕೇಂದ್ರಕ್ಕೆ ಶಾಶ್ವತ ವೈದ್ಯರನ್ನು ನೇಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಶಾಸಕರು ವೈದ್ಯರ ಕೊರತೆ ಆಗದಂತೆ ನಿರ್ವಹಣೆಗೆ ಆದೇಶ ಮಾಡಿದ್ದಾರೆ, ಅದರಂತೆ ಓರ್ವ ಕಾಯಂ ವೈದ್ಯ ಹಾಗೂ ಇಬ್ಬರು ವೈದ್ಯರನ್ನು ಪ್ರಭಾರಿಯಾಗಿ ಕಾರ್ಯನಿರ್ವಹಣೆಗೆ ಡಿಎಚ್ಓ ಆದೇಶ ಮಾಡಿದ್ದರು. ಆದೇಶವಿದ್ದರೂ ವೈದ್ಯರು ಬರುತ್ತಿಲ್ಲ, ಕೆಲ ದಿನ ಬಂದು ನಮಗೆ ಆಗುವುದಿಲ್ಲ ಎನ್ನುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಹೆಚ್ಚಿನ ವೈದ್ಯರನ್ನು ನೇಮಕ ಮಾಡಬೇಕು, ಇಲ್ಲವಾದರೆ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸಚಿವರಿಗೆ ಪತ್ರ ಬರೆಯಲಾಗುವುದು ಆರೋಗ್ಯ ರಕ್ಷಾ ಸಮೀತಿ ಸದಸ್ಯ ಎಂದು ಸಿದ್ದಪ್ಪ ಚಲವಾದಿ ಎಚ್ಚರಿಕೆ ನೀಡಿದ್ದಾರೆ.