ಜನರ ಸಮಸ್ಯೆಗೆ ಸೂಕ್ತ, ತ್ವರಿತ ಪರಿಹಾರ ಕಲ್ಪಿಸಿ: ಶಾಸಕ ಎಚ್.ವಿ. ವೆಂಕಟೇಶ್

KannadaprabhaNewsNetwork |  
Published : Nov 16, 2026, 01:45 AM IST
ಪೊಟೋ 14ಪಿವಿಡಿ7ಪ್ರಜಾಸೇವಾ ಅಭಿಯಾನ ಕಾರ್ಯಕ್ರಮವನ್ನು ಶಾಸಕ ಹೆಚ್.ವಿ. ವೆಂಕಟೇಶ್ ಉದ್ಘಾಟಿಸಿದರು.ಇದೇ ವೇಳೆ ತಹಸೀಲ್ದಾರ್, ತಾ.ಪಂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದಾರೆ. | Kannada Prabha

ಸಾರಾಂಶ

ಬಳಿಕ ಎನ್‌ಆರ್‌ಎಲ್‌ಎಂ ಸಂಘದ ವತಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಣೆ, ಸಿಡಿಪಿಒ ವತಿಯಿಂದ ಭಾಗ್ಯಲಕ್ಷ್ಮಿ ಬಾಂಡ್‌ ವಿತರಣೆ ಹಾಗೂ ಪಶುಸಂಗೋಪನಾ ಇಲಾಖೆ ವತಿಯಿಂದ ಮೇವು ಬೀಜದ ಪ್ಯಾಕೆಟ್‌ಗಳನ್ನು ಶಾಸಕರು ವಿತರಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಜನರ ಸಮಸ್ಯೆ ಅವರ ಮನೆ ಬಾಗಿಲಲ್ಲೇ ಆಲಿಸಿ ಪರಿಹರಿಸುವ ಉದ್ದೇಶದಿಂದ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಜಾಸೇವಾ ಅಭಿಯಾನ ಸಭೆ ತಾಲೂಕಿನ ನಾಗಲಮಡಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿ ವಳ್ಳೂರು ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆದ ಸಭೆಯನ್ನು ಶಾಸಕ ಹಾಗೂ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಎಚ್.ವಿ. ವೆಂಕಟೇಶ್ ಉದ್ಘಾಟಿಸಿ, ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಜನರ ಬಳಿಗೆ ಹೋಗಬೇಕು ಎಂಬುದು ತಮ್ಮ ಉದ್ದೇಶವಾಗಿದೆ. ಸರ್ಕಾರದ ಸೌಲಭ್ಯಗಳು ಕೊನೆ ವ್ಯಕ್ತಿಗೂ ತಲುಪಬೇಕು. ಯಾರೂ ಕಚೇರಿಗಳಿಗೆ ಅಲೆದಾಡಬಾರದು ಎಂದು ತಿಳಿಸಿದರು. ಶಾಸಕರು ಸಾರ್ವಜನಿಕರಿಂದ ನೇರ ಅಹವಾಲು ಸ್ವೀಕರಿಸಿ, ಕುಡಿಯುವ ನೀರು, ರಸ್ತೆ, ಪಿಂಚಣಿ, ಪಹಣಿ, ಮನೆ, ವಿದ್ಯುತ್ ಸೇರಿ ವಿವಿಧ ಸಮಸ್ಯೆ ಆಲಿಸಿದರು. ಸ್ಥಳದಲ್ಲೇ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಜನರ ಸಮಸ್ಯೆಗಳಿಗೆ ತ್ವರಿತ ಹಾಗೂ ಸೂಕ್ತ ಪರಿಹಾರ ಕಲ್ಪಿಸುವಂತೆ ಖಡಕ್ ಸೂಚನೆ ನೀಡಿದರು.ಬಳಿಕ ಎನ್‌ಆರ್‌ಎಲ್‌ಎಂ ಸಂಘದ ವತಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಣೆ, ಸಿಡಿಪಿಒ ವತಿಯಿಂದ ಭಾಗ್ಯಲಕ್ಷ್ಮಿ ಬಾಂಡ್‌ ವಿತರಣೆ ಹಾಗೂ ಪಶುಸಂಗೋಪನಾ ಇಲಾಖೆ ವತಿಯಿಂದ ಮೇವು ಬೀಜದ ಪ್ಯಾಕೆಟ್‌ಗಳನ್ನು ಶಾಸಕರು ವಿತರಿಸಿದರು.

ಸಮಾಜಸೇವಕರಾದ ಚನ್ನಕೇಶವ ಅವರು ವಳ್ಳೂರು ಗ್ರಾಮಸ್ಥರಿಗೆ ಕುಕ್ಕರ್‌ಗಳನ್ನು ವಿತರಿಸಿದರು. ಬಳಕ ಪಕ್ಕದ ಗ್ರಾಮ ಬಳಸಮುದ್ರ ಅಂಗನವಾಡಿ ಕೇಂದ್ರಕ್ಕೆ ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು.

ತಹಸೀಲ್ದಾರ್ ವರದರಾಜು, ತಾ.ಪಂ ಇಓ ಮಧುಸೂದನ್, ರಾಜ್ಯ ಕಾಂಪೋಸ್ಟ್ ನಿಗಮದ ಸದಸ್ಯ ಎನ್. ರವಿ, ಸಮಾಜ ಸೇವಕ ಬತ್ತಿನೇನಿ ನಾಗೇಂದ್ರ ರಾವ್, ಚಕ್ರಪ್ಪ, ಗೋವಿಂದಪ್ಪ, ಅಶೋಕ್, ಪರಿಟಾಲ ರವಿ, ರವೀಂದ್ರರೆಡ್ಡಿ, ಕೇಶವ, ಬೊಮ್ಮಯ್ಯ, ಸಣ್ಣ ಕೃಷ್ಣಪ್ಪ, ರಾಮಚಂದ್ರರೆಡ್ಡಿ, ಮುತ್ಯಾಲಪ್ಪ, ಪರಿಟಾಲ ವೆಂಕಟಸ್ವಾಮಿ, ಭಾವರೆಡ್ಡಿ ಸೇರಿ ಮುಖಂಡರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೀರೇಶ್ವರ ಪುಣ್ಯಾಶ್ರಮದ ಸೇವಾ ಕಾರ್ಯಗಳಿಗೆ ಭಕ್ತರ ಸಹಕಾರವೇ ದೊಡ್ಡ ಶಕ್ತಿ
ಮಕ್ಕಳಿಗೆ ಶಿಕ್ಷಣ, ಸುರಕ್ಷಿತ ಬಾಲ್ಯ ಒದಗಿಸುವುದು ನಮ್ಮ ಜವಾಬ್ದಾರಿ