ಶಾಲೆ ಶಿಥಿಲ ಕೊಠಡಿಗಳ ಸಮಗ್ರ ಮಾಹಿತಿ ನೀಡಿ: ಬಿಇಒ

KannadaprabhaNewsNetwork |  
Published : May 28, 2026, 01:15 AM IST
27ಎಚ್.ಎಲ್.ಐ1.ಶಾಲಾ ಪ್ರಾರಂಭೊತ್ಸವ ಪೂರ್ವ ಸಿದ್ದತಾ ಸಭೆಯಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳನ್ನು ಇಲಾಖೆವತಿಯಿಂದ ಸನ್ಮಾನಿಸಲಾಯಿತು. .  | Kannada Prabha

ಸಾರಾಂಶ

ಶಾಲಾ ಅರಂಭದ ದಿನ ಸಮೀಪಿಸುತ್ತಿದ್ದು, ಶಿಕ್ಷಕರು ಶಿಥಿಲಗೊಂಡ ಶಾಲಾ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಬಾರದು. ಕೊಠಡಿ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮತ್ತು ನಿಖರ ಮಾಹಿತಿಯನ್ನು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಶಾಲಾ ಶಿಕ್ಷಕರು ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಇಲಾಖೆಯ ಸಿ.ಆರ್.ಪಿ.ಗಳ ಮೂಲಕ ಸಲ್ಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಕೆ.ಟಿ. ಹೇಳಿದ್ದಾರೆ.

- ಮುಖ್ಯಶಿಕ್ಷಕರಿಗೆ ಬಿಇಒ ನಿಂಗಪ್ಪ ಕೆ.ಟಿ. ಸೂಚನೆ । ಶಾಲಾ ಪ್ರಾರಂಭೋತ್ಸವ ಪೂರ್ವಸಿದ್ಧತಾ ಸಭೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶಾಲಾ ಅರಂಭದ ದಿನ ಸಮೀಪಿಸುತ್ತಿದ್ದು, ಶಿಕ್ಷಕರು ಶಿಥಿಲಗೊಂಡ ಶಾಲಾ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಬಾರದು. ಕೊಠಡಿ ಸ್ಥಿತಿಗತಿಗಳ ಬಗ್ಗೆ ಸಮಗ್ರ ಮತ್ತು ನಿಖರ ಮಾಹಿತಿಯನ್ನು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳ ಶಾಲಾ ಶಿಕ್ಷಕರು ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಇಲಾಖೆಯ ಸಿ.ಆರ್.ಪಿ.ಗಳ ಮೂಲಕ ಸಲ್ಲಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಿಂಗಪ್ಪ ಕೆ.ಟಿ. ಹೇಳಿದರು.

ಪಟ್ಟಣದ ಗುರು ಭವನದಲ್ಲಿ ಹಮ್ಮಿಕೊಂಡಿದ್ದ 202-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವಕ್ಕೆ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೇ 29 ಮತ್ತು 30ರಂದೇ ಎಲ್ಲ ಶಿಕ್ಷಕರು ಶಾಲೆಗಳಿಗೆ ತೆರಳಿ ಸ್ವಚ್ಛತೆ, ಅಕ್ಷರ ದಾಸೋಹ ವ್ಯವಸ್ಥೆ, ಪಠ್ಯಪುಸ್ತಕಗಳ ವ್ಯವಸ್ಥೆ, ಶಾಲಾ ಕೊಠಡಿಗಳ ಸಿದ್ಧತೆ ಸೇರಿದಂತೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.

ಜೂನ್ 1ರಂದು ಶಾಲೆಯನ್ನು ತಳಿರು ತೋರಣಗಳಿಂದ ಶೃಂಗರಿಸಿ ಶಾಲಾ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಅವರನ್ನು ಸ್ವಾಗತಿಸಬೇಕು. ಶಾಲೆಗೆ ಸೇರಿದಂತೆ ಮಕ್ಕಳು ಸಂತೋಷದಿಂದ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿದಿನ ತಪ್ಪದೇ ಶಾಲೆಗೆ ಬರುವಂತೆ ಮಕ್ಕಳನ್ನು ಪ್ರೇರೇಪಿಸಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಶಿಕ್ಷಕರ ನಿಖರ ಹಾಜರಾತಿ ಬಗ್ಗೆ ಇಲಾಖೆ ಜಾರಿಗೆ ತಂದಿರುವ ನೂತನ ಆ್ಯಪ್ ಅನ್ನು ತಮ್ಮ ಮೊಬೈಲ್‌ಗಳಿಗೆ ಅಳವಡಿಸಿಕೊಳ್ಳಬೇಕು. ಈ ಆ್ಯಪ್ ಶಿಕ್ಷಕ ಯಾವ ಸಂದರ್ಭದಲ್ಲಿ ಎಲ್ಲಿದ್ದಾರೆ, ತಡವಾದ, ಗೈರುಹಾಜರಾದ, ರಜೆಯ ಬಗ್ಗೆ ಕೂಡ ನೋಂದಣೆಯಾಗುತ್ತದೆ. ಗೈರು ಹಾಜರಾದ ದಿನಗಳಿಗೆ ವೇತನ ಕಟ್ ಅಗುವ ಸಾಧ್ಯತೆಗಳೂ ಇವೆ. ಶಿಕ್ಷಕರು ಪ್ರಾಮಾಣಿಕ ಹಾಗೂ ಜಾಗರೂತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಜೂನ್ 1ಕ್ಕೆ ಒಂದನೇ ತರಗತಿಗೆ ಶಾಲೆಗೆ ಸೇರುವ ಮಕ್ಕಳಿಗೆ 5 ವರ್ಷ 10 ತಿಂಗಳಾಗಿರಬೇಕು. ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇರಬೇಕು. ಖಾಸಗಿ ಶಾಲೆಗಳು ನಿಗದಿತ ಅ‍ವಧಿಯಲ್ಲಿ ಮಾನ್ಯತೆ ನವೀಕರಣ ಮಾಡಿಸಿಕೊಂಡಿರಬೇಕು. ಇನ್ನು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಹೋಗುವ ಮಕ್ಕಳಿಗೆ ಕಾನೂನು ರೀತಿಯಲ್ಲಿ ವರ್ಗಾ‍ವಣೆ ಪತ್ರಗಳನ್ನು ಸಕಾಲದಲ್ಲಿ ನೀಡಬೇಕು ಎಂದು ತಿಳಿಸಿದರು.

ನೂತನ ಪದಾಧಿಕಾರಿಗಳಿಗೆ ಸನ್ಮಾನ:

ಇದೇ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಉಮಾಪತಿ ಎಸ್.ಜಿ. ಹೊನ್ನಾಳಿ ತಾ. ಅಧ್ಯಕ್ಷ ಜಿ.ಎಸ್. ತಿಮ್ಮಪ್ಪ, ನ್ಯಾಮತಿ ತಾಲೂಕಿನ ಅಧ್ಯಕ್ಷ ಗುರುಮೂರ್ತಿ ಸೇರಿದಂತೆ ಅವಳಿ ತಾಲೂಕಿನ ಎಲ್ಲ ಪದಾಧಿಕಾರಿಗಳಿಗೆ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲಾಧಿಕಾರಿ ತಿಪ್ಪೇಶಪ್ಪ, ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ, ತಾಲೂಕು ದೈಹಿಕ ಶಿಕ್ಷಣ ಸಂಯೋಜನಾಧಿಕಾರಿ ಜಗದೀಶ್, ಇ.ಸಿ.ಒ. ಮುದ್ದನಗೌಡ, ಅರುಣ ಇತರರು ಇದ್ದರು.

- - -

-27ಎಚ್.ಎಲ್.ಐ1:

ಶಾಲಾ ಪ್ರಾರಂಭೋತ್ಸವ ಪೂರ್ವಸಿದ್ಧತಾ ಸಭೆಯಲ್ಲಿ ಹೊನ್ನಾಳಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾಯತ್ತ ಸಂಸ್ಕೃತಿಯ ದಿಕ್ಕು ತಪ್ಪಿಸುವವರ ಬಗ್ಗೆ ಎಚ್ಚರವಿರಲಿ: ಪ್ರೊ.ಎಸ್. ನಟರಾಜ ಬೂದಾಳು
ನೆಹರು ರಾಜಕೀಯ ನೀತಿ ವಿಶ್ವಕ್ಕೆ ಮಾದರಿ: ಕೆಂಚಮಾರಯ್ಯ