ದೇವನಹಳ್ಳಿ: ವಯೋವೃದ್ಧ ಅನಾರೋಗ್ಯ ಪೀಡಿತ ವ್ಯಕ್ತಿಗೆ ಅವರ ತಾತನ ಹೆಸರಲ್ಲಿರುವ ಭೂಮಿಯನ್ನು ಪೌತಿ ಖಾತೆ ಮಾಡಿಕೊಡಲು ಅಡ್ಡಿಪಡಿಸಿ ತಕರಾರು ಅರ್ಜಿ ನೀಡಿ ಮಾನಸಿಕ ಕಿರುಕುಳ ನೀಡುತ್ತಿರುವವರ ಮಾತಿಗೆ ಕಿವಿಗೊಡಬಾರದು ಎಂದು ತಾಲುಕು ಕಚೇರಿ ಮುಂದೆ ಪ್ರತಿಭಟಿಸಿದ ಪ್ರಜಾ ವಿಮೋಚನಾ ಚಳವಳಿ ಸಮತಾವಾದದ ರಾಜ್ಯ ಕಾರ್ಯಾಧ್ಯಕ್ಷ ದಾಸರಬೀದಿ ಮುರಳಿ ಮತ್ತು ಕಾರ್ಯಕರ್ತರು ತಹಸೀಲ್ದಾರ್ ಎಂ.ಅನಿಲ್‌ಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ದಾಸರಬೀದಿ ಮುರಳಿ, ತಾಲೂಕಿನ ಇಲತೊರೆ ಗ್ರಾಮದ ಹಳೇ ಸರ್ವೆ.ನಂ.೪೭/೮ ಹೊಸ ಸರ್ವೆ.ನಂ. ೪೭/ಪಿ೬ gಲ್ಲಿ ೪-೦೦ ಎಕರೆ ಭೂಮಿ ಸುಂಟಪ್ಪರಿಗೆ ಸರ್ಕಾರ ನೀಡಿತ್ತು. ಇವರ ಮರಣಾನಂತರ ಇವರ ಮೊಮ್ಮಗ ಮುನಿರಾಜು ತಾಲೂಕು ಕಚೇರಿಗೆ ಪೌತಿ ಖಾತೆಗಾಗಿ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಮುನಿರಾಜುಗೆ ವಯೋಸಹಜ ಮತ್ತು ದೀರ್ಘಕಾಲದ ರೋಗಕ್ಕೆ ತುತ್ತಾಗಿ ಓಡಾಡಲು ಸಾಧ್ಯವಿಲ್ಲದಾಗಿದೆ. ಹಾಗಾಗಿ ಸದರಿ ಸ್ವತ್ತಿನ ಪೌತಿ ಖಾತೆ ಬದಲಾವಣೆ ಮಾಡಲು ತಹಸೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರು. ಹೈಕೊರ್ಟನಲ್ಲಿಯೂ ಮುನಿರಾಜುಗೆ ಖಾತೆ ಮಾಡಿಕೊಡುವಂತೆ ನಿರ್ದೇಶನ ನೀಡಿದ್ದರೂ ಈ ಭೂಮಿಗೆ ಸಂಬಂಧವಿಲ್ಲದ ಇಬ್ಬರು ಸ್ವತ್ತಿನ ವಾರಸುದಾರರಿಂದ ಹಣ ವಸೂಲಿ ಮಾಡಲು ಸುಳ್ಳು ಹೇಳಿಕೆಗಳನ್ನು ಉಲ್ಲೇಖಿಸಿ, ತಕರಾರು ಅರ್ಜಿ ಸಲ್ಲಿಸಿ ಖಾತೆ ಬದಲಾವಣೆ ಮಾಡಬಾರದೆಂದು ಪತ್ರಿಕಾ ಪ್ರಕಟಣೆ ಮತ್ತು ಜಾಲಾತಾಣಗಳಲ್ಲಿ ಹರಿಯಬಿಡುತ್ತಿದ್ದಾರೆ. ಸಂಘಟನೆಯೊಂದರ ಹೆಸರು ದುರ್ಬಳಸಿಕೊಂಡು ಇಬ್ಬರೂ ವ್ಯಕ್ತಿಗಳು ನೀಡಿರುವ ಹೇಳಿಕೆ, ತಕರಾರು ಅರ್ಜಿಗಳು ಸತ್ಯಕ್ಕೆ ದೂರವಾಗಿದೆ. ಆದ್ದರಿಂದ ತಹಸೀಲ್ದಾರರು ನೈಜತೆ ಪರಿಶೀಲಿಸಿ ಅಸಹಾಯಕ ವಾರಸುದಾರ ವ್ಯಕ್ತಿ ಹೆಸರಿಗೆ ಪೌತಿ ಖಾತೆ ಮಾಡಿಕೊಡಬೇಕು. ಇಲ್ಲವಾದಲ್ಲಿ ಜಿಲ್ಲಾಡಳಿತದ ಮುಂದೆ ತಮಟೆ ಚಳವಳಿ ಮಾಡುತ್ತೇವೆಂದು ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಲಾಗಿದೆ ಎಂದರು.ತಹಸೀಲ್ದಾರ್ ಅನಿಲ್ ಮಾತನಾಡಿ, ಪೌತಿ ಖಾತೆಗೆ ಅರ್ಜಿ ಸಲ್ಲಿಸಿರುವ ವ್ಯಕ್ತಿಯ ದಾಖಲೆಗಳನ್ನು ಪರಿಶೀಲಿಸಿ ಅರ್ಹ ವ್ಯಕ್ತಿ ಹೆಸರಿಗೆ ಪೌತಿ ಖಾತೆ ಮಾಡಿಕೊಡಲಾಗುವುದು ಎಂದರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪೌತಿ ಖಾತೆಗಾಗಿ ಬಂದ ಮುನಿರಾಜು, ವಕೀಲ ಜಗದೀಶ್, ಪದಾಧಿಕಾರಿಗಳಾದ ದೊಡ್ಡಬಳ್ಳಾಪುರದ ನಾರಾಯಣಸ್ವಾಮಿ, ವೇಣುಗೋಪಾಲ, ಉಮೇಶ್, ಚಂದ್ರು, ವೆಂಕಟೇಶ್ ಮುಂತಾದವರಿದ್ದರು.24 ದೇವನಹಳ್ಳಿ 01 ಚಿತ್ರಸುದ್ದಿ:
ಪ್ರಜಾ ವಿಮೋಚನಾ ಚಳವಳಿ ಸಮತಾವಾದದ ರಾಜ್ಯ ಕಾರ್ಯಾಧ್ಯಕ್ಷ ದಾಸರಬೀದಿ ಮುರಳಿ ಮತ್ತು ಕಾರ್ಯಕರ್ತರು ತಹಸೀಲ್ದಾರ್ ಅನಿಲ್ ಅವರಿಗೆ ಮನವಿ ಸಲ್ಲಿಸಿದರು.